
Ahmedabad Plane Crash | ಏರ್ ಇಂಡಿಯಾ ಡ್ರೀಮ್‌ಲೈನರ್ ಪತನದಲ್ಲಿ 265 ಮಂದಿ ಸಾವು; ಘಟನಾ ಸ್ಥಳಕ್ಕೆ ಆಗಮಿಸಿದ ಪ್ರಧಾನಿ ಮೋದಿ
ಈ ವಿಮಾನ ಟೇಕ್ ಆಫ್ ಆದ ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಅಹಮದಾಬಾದ್‌ನ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿ, ಬೆಂಕಿಯ ಉಂಡೆಯಾಗಿ ಸಿಡಿದು ಕನಿಷ್ಠ 265 ಜನರು ಸಾವನ್ನಪ್ಪಿದ್ದಾರೆ.
ಗುರುವಾರ (ಜೂನ್ 13) 242 ಪ್ರಯಾಣಿಕರನ್ನು ಮತ್ತು ಸಿಬ್ಬಂದಿಯನ್ನು ಹೊತ್ತು ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಸ್ವಲ್ಪ ಹೊತ್ತಿನಲ್ಲೇ ಪತನವಾಗಿತ್ತು. ಈ ವಿಮಾನ ಟೇಕ್ ಆಫ್ ಆದ ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಅಹಮದಾಬಾದ್‌ನ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿ, ಬೆಂಕಿಯ ಉಂಡೆಯಾಗಿ ಸಿಡಿದು ಕನಿಷ್ಠ 265 ಜನರು ಸಾವನ್ನಪ್ಪಿದರು.
ಇತ್ತೀಚಿನ ದಿನಗಳಲ್ಲಿ ದೇಶದ ಅತ್ಯಂತ ಭೀಕರ ವಾಯು ದುರಂತದಲ್ಲಿ ಹಲವಾರು ಜನರು ಸುಟ್ಟು ಕರಕಲಾಗಿದ್ದಾರೆ. ಈ ಅತಿ ಕೆಟ್ಟ ಅವಘಡದಲ್ಲಿ ವಿಮಾನದಲ್ಲಿದ್ದ ವಿಶ್ವಾಸ್ ಕುಮಾರ್ ರಮೇಶ್ ಎಂಬವರು ಮಾತ್ರ ಬದುಕುಳಿದಿದ್ದಾರೆ. ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 265 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ ಪ್ರಯಾಣಿಕರು ಮತ್ತು ಪೈಲಟ್ ಹಾಗೂ ಇತರ ಸಿಬ್ಬಂದಿ ಸೇರಿ 241 ಮಂದಿ ಸಾವನ್ನಪ್ಪಿದರೆ, ಉಳಿದ ಮೃತರು ವಿಮಾನ ಅಪ್ಪಳಿಸಿದ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ನ 7 ಮಂದಿ. ಅಲ್ಲಿದ್ದ ಇತರ 60 ಮಂದಿ ಗಾಯಗೊಂಡಿದ್ದಾರೆ.
ಎಲ್ಲಿ ಅವಘಡ?
ವಿಮಾನ ನಿಲ್ದಾಣದ ಆವರಣದ ಪಕ್ಕದಲ್ಲಿರುವ ಏರ್ ಕಸ್ಟಮ್ ಕಾರ್ಗೋ ಕಚೇರಿ ಬಳಿ ವಿಮಾನ ಅಪಘಾತಕ್ಕೀಡಾಗಿದೆ.
ವಿಮಾನ ನಿಲ್ದಾಣ ಪತನವಾದ ಕೂಡಲೇ 7 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಪ್ರಯತ್ನದಲ್ಲಿ ತೊಡಗಿವೆ. ವಿಮಾನ ಅಪಘಾತದ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಅಪಘಾತದ ಕಾರಣವನ್ನು ಇನ್ನೂ ಅಧಿಕಾರಿಗಳು ದೃಢಪಡಿಸಿಲ್ಲ. ಮೇಘನಿನಗರ ಪ್ರದೇಶ ಸಮೀಪದ ಧಾರ್ಪುರದಿಂದ ದಟ್ಟ ಹೊಗೆ ಗೋಚರಿಸುತ್ತಿದೆ. ಬಿಎಸ್ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಅಪಘಾತಕ್ಕೀಡಾದ ವಿಮಾನವು ಬೋಯಿಂಗ್ ಸಂಸ್ಥೆಯ 787 ಡ್ರೀಮ್ ಲೈನರ್ ಎಂದು ಹೇಳಲಾಗಿದೆ. ಘಟನೆ ಕುರಿತಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Live Updates
- 12 Jun 2025 3:18 PM IST
ಪ್ರಯಾಣಿಕರ ಮಾಹಿತಿ ಕೇಳಿದ ಪ್ರಧಾನಮಂತ್ರಿ ಕಾರ್ಯಾಲಯ
ಏರ್ ಇಂಡಿಯಾ ವಿಮಾನದಲ್ಲಿದ್ದ ಪ್ರಯಾಣಿಕರ ಮಾಹಿತಿ ನೀಡುವಂತೆ ಅಹಮದಬಾದ್ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಪ್ರಧಾನಮಂತ್ರಿ ಕಾರ್ಯಾಲಯ ಕೇಳಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಘಟನೆ ಬಗ್ಗೆ ಅವಲೋಕಿಸುತ್ತಿದ್ದು, ಗುಜರಾತ್ ಸರ್ಕಾರಕ್ಕೆ ಅಗತ್ಯ ನೆರವು ನೀಡುವುದಾಗಿ ತಿಳಿಸಿದ್ದಾರೆ.
- 12 Jun 2025 3:07 PM IST
ತಾಂತ್ರಿಕ ಸಮಸ್ಯೆಯಿಂದ ವಿಮಾನ ಅಪಘಾತ ಸಂಭವಿಸಿರಬಹುದು: ತಜ್ಞರು
ತಾಂತ್ರಿಕ ವೈಫಲ್ಯದಿಂದ ವಿಮಾನ ಅಪಘಾತಕ್ಕೀಡಾಗಿರಬಹುದು ಎಂದು ಭದ್ರತಾ ತಜ್ಞರು ಊಹಿಸಿದ್ದಾರೆ. ವಿಮಾನವು ಮಧ್ಯಾಹ್ನ 1:15 ಕ್ಕೆ ಹೊರಟಿತು ಆದರೆ 1:18 ಕ್ಕೆ ಅಪಘಾತಕ್ಕೀಡಾಯಿತು, ಕೇವಲ 825 ಮೀಟರ್ (2,700 ಅಡಿ) ಎತ್ತರವನ್ನು ತಲುಪಿತ್ತು.
- 12 Jun 2025 3:03 PM IST
ವಿಮಾನಯಾನ ಸಚಿವರಿಂದ ಮಾಹಿತಿ ಪಡೆದುಕೊಂಡ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರೊಂದಿಗೆ ಮಾತನಾಡಿ, ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಸ್ಥಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆಗಾಗಿ ತಾವು ಅಹಮದಾಬಾದ್ಗೆ ಹೋಗುತ್ತಿರುವುದಾಗಿ ಪ್ರಧಾನಿಗೆ ತಿಳಿಸಿದರು. ಅಗತ್ಯವಿರುವ ಎಲ್ಲಾ ಬೆಂಬಲವನ್ನು ತಕ್ಷಣವೇ ನೀಡಬೇಕು ಎಂದು ಮೋದಿ ಸಚಿವರಿಗೆ ನಿರ್ದೇಶನ ಮಾಡಿದ್ದಾರೆ.
- 12 Jun 2025 2:59 PM IST
ಇದೇ ವಿಮಾನದಲ್ಲಿದ್ದ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ
ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ ಗುಜರಾತ್‌ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿದೆ.ಈ ವಿಮಾನದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಇದ್ದರು.
- 12 Jun 2025 2:58 PM IST
ಗುಜರಾತ್ ಮುಖ್ಯಮಂತ್ರಿಯೊಂದಿಗೆ ಅಮಿತ್ ಶಾ ಮಾತುಕತೆ
ಕೇಂದ್ರ ಗೃಹ ಸಚಿವ ಅಮಿತ್ ಶಾ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಅಹಮದಾಬಾದ್ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದಾರೆ. ಕೇಂದ್ರದಿಂದ ಸಂಪೂರ್ಣ ಸಹಾಯದ ಭರವಸೆಯನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.
- 12 Jun 2025 2:56 PM IST
ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತ ಸ್ಥಳದಲ್ಲಿ ಅವಶೇಷಗಳು
ಅಹಮದಾಬಾದ್‌ನಿಂದ ಗ್ಯಾಟ್ವಿಕ್ಗೆ ಹೊರಟಿದ್ದ AI-171 ಏರ್ ಇಂಡಿಯಾ B787 ವಿಮಾನ VT-ANB, ಅಹಮದಾಬಾದ್‌ನಿಂದ ಟೇಕ್ ಆಫ್ ಆದ ತಕ್ಷಣ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ 2 ಪೈಲಟ್ಗಳು ಮತ್ತು 10 ಕ್ಯಾಬಿನ್ ಸಿಬ್ಬಂದಿ ಸೇರಿದಂತೆ 242 ಜನರಿದ್ದರು.
- 12 Jun 2025 2:54 PM IST
ಕೊನೆಯದಾಗಿ 625 ಅಡಿ ಎತ್ತರದಲ್ಲಿ ಹಾರಾಡಿದ್ದ ವಿಮಾನ
ಫ್ಲೈಟ್ರಾಡರ್ ಪ್ಲೇಬ್ಯಾಕ್ ಡೇಟಾದ ಪ್ರಕಾರ ವಿಮಾನವನ್ನು ಕೊನೆಯದಾಗಿ 625 ಅಡಿ ಎತ್ತರದಲ್ಲಿ ಹಾರಾಡುವುದ ಕಂಡುಬಂದಿತ್ತು ಎಂದು ತಿಳಿದುಬಂದಿದೆ.
- 12 Jun 2025 2:48 PM IST
ಅಹಮದಾಬಾದ್-ಲಂಡನ್ ಗ್ಯಾಟ್ವಿಕ್ ವಿಮಾನ ಅಪಘಾತ
ಅಹಮದಾಬಾದ್-ಲಂಡನ್ ಗ್ಯಾಟ್ವಿಕ್ ನಡುವೆ ಕಾರ್ಯನಿರ್ವಹಿಸುತ್ತಿದ್ದ Al171 ವಿಮಾನವು ಜೂನ್ 12 ರಂದು ಅಪಘಾತಕ್ಕೀಡಾಗಿದೆ ಎಂದು ಏರ್ ಇಂಡಿಯಾ ದೃಢಪಡಿಸಿದೆ.
- 12 Jun 2025 2:46 PM IST
ವಿಮಾನದ ಪ್ರಕಾರ ಇನ್ನೂ ನಿರ್ಧರಿಸಲಾಗಿಲ್ಲ: ಅಹಮದಾಬಾದ್ ಪೊಲೀಸ್ ಆಯುಕ್ತ
ವಿಮಾನದ ಮಾಡೆಲ್ ಇನ್ನೂ ನಿರ್ಧರಿಸಲಾಗಿಲ್ಲ: ಅಹಮದಾಬಾದ್ ಪೊಲೀಸ್ ಆಯುಕ್ತವಿಮಾನ ನಿಲ್ದಾಣದ ಬಳಿಯ ಮೇಘನಿನಗರ ಪ್ರದೇಶದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ ಮತ್ತು ಅದು ಯಾವ ರೀತಿಯ ವಿಮಾನ ಎಂದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಹಮದಾಬಾದ್ ಪೊಲೀಸ್ ಆಯುಕ್ತ ಜಿ.ಎಸ್. ಮಲಿಕ್ ತಿಳಿಸಿದ್ದಾರೆ.