ಎಐಎಡಿಎಂಕೆ: 16 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
x

ಎಐಎಡಿಎಂಕೆ: 16 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ


ಮಾ.20- ಲೋಕಸಭೆ ಚುನಾವಣೆಗೆ ಎಐಎಡಿಎಂಕೆ 16 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಮಾಜಿ ಸಂಸದ ಜೆ.ಜಯವರ್ಧನ್ ಮತ್ತು ಮಾಜಿ ಶಾಸಕ ಡಾ ಪಿ. ಸರವಣನ್ ಇದ್ದಾರೆ.

ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಮ್ (ಡಿಎಮ್‌ಡಿಕೆ)ಗೆ ಐದು ಸ್ಥಾನ, ಪುತಿಯ ತಮಿಳಗಂ(ಪಿಟಿ) ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗೆ ತಲಾ ಒಂದು ಸ್ಥಾನ ನೀಡಿದೆ. ಪಿಟಿ ತೆಂಕಾಶಿಯಲ್ಲಿ ತನ್ನದೇ ಚಿಹ್ನೆ ಮೇಲೆ ಸ್ಪರ್ಧಿಸಲಿದ್ದು, ದಿಂಡಿಗಲ್‌ನಿಂದ ಎಸ್‌ಡಿಪಿಟಿ ಸ್ವರ್ಧಿಸಲಿದೆ.

ಎಐಎಡಿಎಂಕೆ ಅಭ್ಯರ್ಥಿಗಳು 'ರೋಯಪುರಂ' ಆರ್. ಮನೋ ಚೆನ್ನೈ (ಉತ್ತರ)ದಿಂದ, ಡಾ ಜೆ.ಜಯವರ್ಧನ್ ಚೆನ್ನೈ (ದಕ್ಷಿಣ) ಮತ್ತು ಮಧುರೈ ಕ್ಷೇತ್ರದಿಂದ ಡಾ. ಪಿ. ಸರವಣನ್ ಸ್ಪರ್ಧಿಸುವರು.

ಪಿಎಂಕೆ ಏಕೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿತು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಾಮಾಜಿಕ ಮಾಧ್ಯಮದಲ್ಲಿ ಜನ ಏನು ಹೇಳುತ್ತಾರೆಂದು ಎಐಎಡಿಎಂಕೆ ತಲೆಕೆಡಿಸಿಕೊಂಡಿಲ್ಲ. ನಾವು ಜನರೊಂದಿಗೆ ಮೈತ್ರಿ ಹೊಂದಿದ್ದೇವೆ ಎಂದು ಹೇಳಿದರು.

Read More
Next Story