
ಉತ್ತರ ಪ್ರದೇಶ ಮಹಿಳೆಯ ಬಳಿಕ, ಕೇರಳದ ಇಬ್ಬರಿಗೆ ಯುಎಇನಲ್ಲಿ ಗಲ್ಲುಶಿಕ್ಷೆ
ಯುಎಇಯಲ್ಲಿ ಇಬ್ಬರು ಕೇರಳದ ವ್ಯಕ್ತಿಗಳು, ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಯುಎಇಯಲ್ಲಿ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿದ ನಂತರವೇ ಗಲ್ಲು ಶಿಕ್ಷೆ ಜಾರಿಗೆ ತರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಪ್ರಕಟಿಸಿದೆ.
ಫೆಬ್ರವರಿ 28ರಂದು ಭಾರತೀಯ ರಾಯಭಾರ ಕಚೇರಿಗೆ ಗಲ್ಲು ಶಿಕ್ಷೆಗಳ ಬಗ್ಗೆ ಮಾಹಿತಿ ನೀಡಿತ್ತು. ಈ ಇಬ್ಬರು ಭಾರತೀಯ ನಾಗರಿಕರಿಗೆ ವಾಣಿಜ್ಯ ಹಾಗೂ ಕಾನೂನು ಸಹಾಯವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಒದಗಿಸಿದೆ,
ಯುಎಇಯಲ್ಲಿ ಇಬ್ಬರು ಕೇರಳದ ವ್ಯಕ್ತಿಗಳು, ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಯುಎಇಯಲ್ಲಿ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿದ ನಂತರವೇ ಗಲ್ಲು ಶಿಕ್ಷೆ ಜಾರಿಗೆ ತರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಪ್ರಕಟಿಸಿದೆ. ಮುಹಮ್ಮದ್ ರಿನಾಷ್ ಅರಂಗಿಲೋಟ್ಟು ಮತ್ತು ಮುರಳೀಧರನ್ ಪೆರುಂತ್ತಟ್ಟ ಶಿಕ್ಷೆಗೆ ಒಳಗಾದವರು. ಇಬ್ಬರೂ ಕೇರಳದವರಾಗಿದ್ದಾರೆ.
ಯುಎಇಯ ಉನ್ನತ ನ್ಯಾಯಾಲಯ ಕೋರ್ಟ್ ಆಫ್ ಕಸ್ಸೇಶನ್ ಗಲ್ಲು ಶಿಕ್ಷೆಯನ್ನು ಪ್ರಕಟಿಸಿದೆ. ಮಾರ್ಚ್ 3 ರಂದು ಅಬು ದಾಬಿಯಲ್ಲಿ ಉತ್ತರ ಪ್ರದೇಶ ಮೂಲದ ಶಹ್ಜಾದಿ ಖಾನ್ ಎಂಬ ಮಹಿಳೆ ಶಿಶುವನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾದ ನಂತರದ ಪ್ರಕರಣ ಇದಾಗಿದೆ.
ಪ್ರವಾಸೋದ್ಯಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮುಹಮ್ಮದ್ ರಿನಾಷ್, ತನ್ನ ಉದ್ಯೋಗದಾರನಾದ ಎಮಿರಾತಿ ಪ್ರಜೆಯನ್ನು ಕೊಂದ ಆರೋಪಕ್ಕೆ ಒಳಗಾಗಿದ್ದಾರೆ. ಅವರು ಕಣ್ಣೂರು ಜಿಲ್ಲೆ ತಲಶೇರಿಯವರು. ಇನ್ನೊಬ್ಬ ಮುರಳೀಧರನ್, ಒಬ್ಬ ಭಾರತೀಯರೊಬ್ಬರ ಹತ್ಯೆಯಲ್ಲಿ ದೋಷಿಯಾಗಿದ್ದಾರೆ.
ಈ ಗಲ್ಲು ಶಿಕ್ಷೆಗಳ ಬಗ್ಗೆ ಯುಎಇ ಸರ್ಕಾರ ಫೆಬ್ರವರಿ 28 ರಂದು ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಈ ಭಾರತೀಯ ನಾಗರಿಕರಿಗೆ ಎಲ್ಲಾ ರೀತಿಯ ಕಾನೂನು ಸಹಾಯವನ್ನು ಒದಗಿಸಲಾಗಿತ್ತು. ಕ್ಷಮೆ ಮತ್ತು ಗಲ್ಲು ಶಿಕ್ಷೆ ರದ್ದತಿ ಅರ್ಜಿಗಳನ್ನು ಕಳುಹಿಸಲಾಗಿತ್ತು ಎಂದು ಹೇಳಿದೆ.
"ಸಂಬಂಧಿತ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ. ರಾಯಭಾರ ಕಚೇರಿ ಅವರೊಂದಿಗೆ ಸಂಪರ್ಕದಲ್ಲಿದ್ದು, ಅಂತಿಮ ಕ್ರಿಯೆಯಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ದ ಟ್ರಿಬ್ಯೂನ್ ವರದಿ ಪ್ರಕಾರ, ಯುಎಇಯಲ್ಲಿ ಒಟ್ಟು 28 ಭಾರತೀಯರು ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ.