ಎಎಪಿಯಿಂದ ʻಮೈ ಭಿ ಕೇಜ್ರಿವಾಲ್ ಅಭಿಯಾನ
x

ಎಎಪಿಯಿಂದ ʻಮೈ ಭಿ ಕೇಜ್ರಿವಾಲ್' ಅಭಿಯಾನ


ಹೊಸದಿಲ್ಲಿ, ಮಾ.24- ಎಎಪಿ ‘ಮೈ ಭಿ ಕೇಜ್ರಿವಾಲ್’ ಅಭಿಯಾನ ನಡೆಸಲಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಪಕ್ಷದ ಸಭೆಯಲ್ಲಿ ಭಾನುವಾರ ನಿರ್ಧರಿಸಲಾಗಿದೆ.

ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರ ಬಂಧನದ ನಂತರ, ಮುಂದಿನ ನಡೆಯನ್ನು ನಿರ್ಧರಿಸಲು ಪಕ್ಷದ ಸಭೆ ನಡೆಯಿತು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಡಾ. ಸಂದೀಪ್ ಪಾಠಕ್ ಅಧ್ಯಕ್ಷತೆ ವಹಿಸಿದ್ದರು.

'ಮೈ ಭಿ ಕೇಜ್ರಿವಾಲ್' ಅಭಿಯಾನ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಅದರಡಿ ಮನೆಗಳ ಹೊರಗೆ ಮತ್ತು ಆಟೋರಿಕ್ಷಾಗಳ ಮೇಲೆ ಸ್ಟಿಕ್ಕರ್‌ ಅಂಟಿಸಲಾಗುತ್ತದೆ ಮತ್ತು ಹೋರ್ಡಿಂಗ್ ಅಳವಡಿಲಾಗುತ್ತದೆ. ಮಾ.31 ರ ಇಂಡಿಯ ಒಕ್ಕೂಟದ ಮೆರವಣಿಗೆಯಲ್ಲಿ ಭಾಗವಹಿಸುವವರು ಸ್ಟಿಕರ್‌ ಅಂಟಿಸಿದ ವಾಹನಗಳೊಂದಿಗೆ ಬರಬೇಕು ಎಂದು ಹೇಳಿದರು. ಕೇಜ್ರಿವಾಲ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲಎಂದು ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ.

ಮಾ.31ರ ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ಮಾ.26ರಂದು ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಕೌನ್ಸಿಲರ್‌ಗಳೊಂದಿಗೆ ಸಿದ್ಧತೆ ಕುರಿತು ಸಭೆ ನಡೆಸಲಾಗುವುದು. ʻಸುಮಾರು 14,000 ಬೂತ್‌ಗಳಿವೆ. ಪ್ರತಿ ಬೂತ್‌ನಿಂದ 10 ಜನರಂತೆ ರಾಮಲೀಲಾ ಮೈದಾನವನ್ನು ತಲುಪುವವರ ಸಂಖ್ಯೆ 1.5 ಲಕ್ಷ ಆಗಲಿದೆ. ಅಂದು ಪಕ್ಷದ ಮುಖಂಡರು ಮತ್ತು ಸ್ವಯಂಸೇವಕರು ತೋಳಿಗೆ ಕಪ್ಪು ರಿಬ್ಬನ್ ಕಟ್ಟಬೇಕುʼ ಎಂದು ಪಾಠಕ್ ಒತ್ತಾಯಿಸಿದರು.

ಅಬಕಾರಿ ನೀತಿ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕೇಜ್ರಿವಾಲ್ (55) ಅವರನ್ನು ಜಾರಿ ನಿರ್ದೇಶನಾಲಯ ಗುರುವಾರ ಬಂಧಿಸಿದೆ. ಶುಕ್ರವಾರ ನ್ಯಾಯಾಲಯ ಅವರನ್ನು ಮಾ.28 ರವರೆಗೆ ಇಡಿ ಕಸ್ಟಡಿಗೆ ಕಳುಹಿಸಿದೆ.

Read More
Next Story