LPG Cylinder Price| ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಭರ್ಜರಿ ಇಳಿಕೆ
x
ಗ್ಯಾಸ್‌ ಸಿಲಿಂಡರ್‌ ಬೆಲೆ ಇಳಿಕೆ

LPG Cylinder Price| ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಭರ್ಜರಿ ಇಳಿಕೆ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಗುಡ್‌ ನ್ಯೂಸ್‌ ಕೊಟ್ಟ ಪ್ರಧಾನಿ ನರೇಂದ್ರ ಮೋದಿ


ಕೇಂದ್ರ ಸರ್ಕಾರವು ಮಹಿಳಾ ದಿನದಂದೇ ಗೃಹಿಣಿಯರಿಗೆ ಗುಡ್ ನ್ಯೂಸ್ ನೀಡಿದೆ. ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಗೃಹಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 100 ರೂಪಾಯಿ ಕಡಿತ ಮಾಡಲು ಸರ್ಕಾರ ನಿರ್ಧರಿಸಿದೆ.

ಮಹಿಳಾ ದಿನದ ಕೊಡುಗೆಯಾಗಿ ಈ ಕಡಿತ ಮಾಡಲಿದ್ದು, ಇದರಿಂದ ದೇಶಾದ್ಯಂತ ಲಕ್ಷಾಂತರ ಕುಟುಂಬಗಳ ಮೇಲಿನ ಆರ್ಥಿಕ ಹೊರೆಯೂ ಗಮನಾರ್ಹವಾಗಿ ಕಡಿಮೆ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಈ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಎಲ್ಲ ಮಹಿಳೆಯರಿಗೆ ಮೋದಿ ಅವರು ಸಿಹಿ ಸುದ್ದಿ ನೀಡಿದ್ದಾರೆ. ಗೃಹ ಬಳಕೆಯ ಅಡುಗೆ ಅನಿಲ ಬೆಲೆ ಕಡಿಮೆ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ. ದೇಶದ ಮಹಿಳೆಯರ ಸಬಲೀಕರಣ ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧವಾಗಿದ್ದು, ಇದಕ್ಕೆ ಪೂರಕವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್‌ನಲ್ಲಿ ಏನಿದೆ

ಗೃಹ ಬಳಕೆಯ ಸಿಲಿಂಡರ್ ನ ದರ ನೂರು ರೂಪಾಯಿ ಕಡಿಮೆ ಮಾಡಿರುವ ಬಗ್ಗೆ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕೇಂದ್ರ ಸರ್ಕಾರವು ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು 100 ರೂಪಾಯಿ ಇಳಿಕೆ ಮಾಡಿದೆ. ಇದರಿಂದ ಭಾರತದ ಲಕ್ಷಾಂತರ ಕುಟುಂಬಗಳ ಆರ್ಥಿಕ ಹೊರೆ ತಗ್ಗಲಿದೆ ಎಂದಿದ್ದಾರೆ. ಅಡುಗೆ ಅನಿಲ ಬೆಲೆ ಇಳಿಕೆಯಿಂದಾಗಿ ದೇಶದ ನಾರಿ ಶಕ್ತಿಗೆ ಪ್ರಯೋಜನವಾಗಲಿದೆ. ಕೇಂದ್ರ ಸರ್ಕಾರವು ಅಡುಗೆ ಅನಿಲವನ್ನು ಕೈಗೆಟುಕುವ ಬೆಲೆಯಲ್ಲಿ ಸಿಗುವ ರೀತಿಯಲ್ಲಿ ಮಾಡಿದೆ. ಕುಟುಂಬಗಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದೇವೆ. ಇಷ್ಟೇ ಅಲ್ಲ ಆರೋಗ್ಯಕರ ವಾತಾವರಣ ಖಚಿತಪಡಿಸಿಕೊಳ್ಳುವ ಗುರಿ ನಮ್ಮದು ಎಂದು ಹೇಳಿದ್ದಾರೆ.

ಆರು ತಿಂಗಳ ನಂತರ ಪರಿಷ್ಕರಣೆ

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಮಾರ್ಚ್‌ 8) ಅಡುಗೆ ಅನಿಲದ ಮೇಲಿನ ಬೆಲೆಯನ್ನು ಇಳಿಸುವ ಘೋಷಣೆ ಮಾಡಿದ್ದಾರೆ. ಈ ಮೂಲಕ ಆರು ತಿಂಗಳ ನಂತರದಲ್ಲಿ ಗೃಹ ಬಳಕೆಯ (ಅಡುಗೆ ಅನಿಲ) ಸಿಲಿಂಡರ್ ಬೆಲೆ ಪರಿಷ್ಕರಣೆ ಮಾಡಿದಂತಾಗಿದೆ. ಮಾರ್ಚ್ 1ರಂದು ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್‌ ಬೆಲೆಯನ್ನು ಕೇಂದ್ರ ಸರ್ಕಾರಿ ಸೌಮ್ಯದ ತೈಲ ಕಂಪನಿಗಳು ಹೆಚ್ಚಳ ಮಾಡಿದ್ದವು. ಆದರೆ, ಗೃಹ ಬಳಕೆಯ ಸಿಲಿಂಡರ್‌ ದರವು ಕಳೆದ ಆರು ತಿಂಗಳಿಂದ ಬದಲಾಗಿರಲಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ

ಗೃಹ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮವನ್ನು ಸ್ವಾಗತಿಸಿದ್ದರೆ, ಇನ್ನೂ ಕೆಲವರು ಇದು ಲೋಕಸಭೆ ಚುನಾವಣೆಯ ಗಿಮಿಕ್ ಎಂದು ಹೇಳಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ಭಾರೀ ಏರಿಕೆ ಕಂಡ ಸಿಲಿಂಡರ್ ಬೆಲೆ

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿರುವುದು ವರದಿ ಆಗಿದೆ.

ಇನ್ನು 2011ರಲ್ಲಿ 710ರೂಪಾಯಿ ಇದ್ದಂತಹ ಸಬ್ಸಿಡಿ ರಹಿತ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯು ಇತ್ತೀಚಿನ ದಿನಗಳಲ್ಲಿ 1 ಸಾವಿರಕ್ಕೂ ಹೆಚ್ಚಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರು 2024ರ ಮಾರ್ಚ್ 8ರಂದು ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು 100 ರೂಪಾಯಿ ಇಳಿಸಿದ್ದು, ಬೆಂಗಳೂರಿನಲ್ಲಿ

ಗೃಹ ಬಳಕೆಯ ಸಿಲಿಂಡರ್ ಬೆಲೆಯು 905.50 ರೂಪಾಯಿಯಿಂದ 805.50 ರೂಪಾಯಿ ಆಗಿದೆ.

14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ ಬೆಲೆ (2011ರಿಂದ 2021ರ ವರೆಗೆ)

ವರ್ಷ ಸಬ್ಸಿಡಿ ರಹಿತ ಸಬ್ಸಿಡಿ ಸಹಿತ

2011 710 399.26

2012 922 410.42

2013 1021 410.50

2014 1241 414

2015 606 452

2016 584 432.17

2017 747 495.64

2018 809.50 500.90

2019 695 495.86

2020 594 ಅನ್ವಯಿಸಿಲ್ಲ

2021 719 ಅನ್ವಯಿಸಿಲ್ಲ

ನಾಲ್ಕು ವರ್ಷಗಳಲ್ಲಿ ಶೇ 56ರಷ್ಟು ಹೆಚ್ಚಳ

ಇನ್ನು 2021ರ ನಂತರದಲ್ಲೂ ಹಲವು ಬಾರಿ ಎಲ್‌ ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಳಿತವಾಗಿರುವುದು ವರದಿಯಾಗಿದೆ.

14.2 ಕೆಜಿ ಗೃಹ ಬಳಕೆಯ ಸಿಲಿಂಡರ್‌ ನ ಬೆಲೆಯು ಇತ್ತೀಚೆಗೆ 50 ರೂಪಾಯಿಯಷ್ಟು ಹೆಚ್ಚಳವಾಗಿತ್ತು. ಆ ಮೂಲಕ ಸಿಲಿಂಡರ್‌ನ ಬೆಲೆಯು 1,103 ರೂ.ಗೆ ತಲುಪಿತ್ತು.

ಆದರೆ, ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಮಾತ್ರವೇ ಪ್ರತಿ ಸಿಲಿಂಡರ್ ಬೆಲೆಯು ಸುಮಾರು 56ರಷ್ಟು ಏರಿಕೆಯಾಗಿದೆ ಎನ್ನುತ್ತವೆ ಅಂಕಿ- ಅಂಶಗಳು.

2019ರ ಏಪ್ರಿಲ್ 1 ರಂದು ದೇಶೀಯ ಎಲ್‌ಪಿಜಿ ಸಿಲಿಂಡರ್‌ನ (14.2 ಕೆಜಿ) ಚಿಲ್ಲರೆ ಮಾರಾಟದ ಬೆಲೆ (ಆರ್‌ಎಸ್‌ಪಿ) 706.50 ರೂ ಆಗಿದ್ದು,

2020 ರಲ್ಲಿ 744 ರೂ., 2021 ರಲ್ಲಿ ರೂ. 809 ಮತ್ತು 2022 ರಲ್ಲಿ ರೂ. 949.50. ಬೆಲೆ ರೂ. 1,103 ರಿಂದ ರೂ. ಈ ವರ್ಷ ಮಾರ್ಚ್ 1 ರಂದು 1053 ತಲುಪಿತ್ತು.

Read More
Next Story