ಜಪಾನ್‌ನಲ್ಲಿ 7.6 ತೀವ್ರತೆಯ ಭಾರಿ ಭೂಕಂಪ: ಸುನಾಮಿ ಎಚ್ಚರಿಕೆ
x

ಜಪಾನ್‌ನಲ್ಲಿ 7.6 ತೀವ್ರತೆಯ ಭಾರಿ ಭೂಕಂಪ: ಸುನಾಮಿ ಎಚ್ಚರಿಕೆ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಕಟ್ಟಡಗಳು, ವಾಹನಗಳು ಮತ್ತು ಮನೆಗಳಲ್ಲಿನ ವಸ್ತುಗಳು ಜೋರಾಗಿ ಅಲುಗಾಡುತ್ತಿರುವುದು ಕಂಡುಬಂದಿದೆ.


Click the Play button to hear this message in audio format

ಜಪಾನ್‌ನ ಉತ್ತರ ಮತ್ತು ಪೂರ್ವ ಕರಾವಳಿ ತೀರದಲ್ಲಿ ಸೋಮವಾರ ರಾತ್ರಿ (ಸ್ಥಳೀಯ ಕಾಲಮಾನ) 7.6 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದ್ದು, ಕರಾವಳಿ ತೀರದಾದ್ಯಂತ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ.

ಜಪಾನ್ ಹವಾಮಾನ ಸಂಸ್ಥೆ (JMA) ನೀಡಿರುವ ಮಾಹಿತಿಯ ಪ್ರಕಾರ, ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 7.6 ರಷ್ಟಿತ್ತು ಎಂದು ದಾಖಲಾಗಿದೆ. ಭೂಕಂಪದ ಬೆನ್ನಲ್ಲೇ ಸಮುದ್ರದಲ್ಲಿ 3 ಮೀಟರ್ ಎತ್ತರದ ಅಲೆಗಳು ಏಳುವ ಸಾಧ್ಯತೆಯಿದ್ದು, ಕರಾವಳಿ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಸುನಾಮಿ ಭೀತಿ ಎಲ್ಲೆಲ್ಲಿ?

ಸ್ಥಳೀಯ ಕಾಲಮಾನ ರಾತ್ರಿ 11. 15 ರ ಸುಮಾರಿಗೆ ಭೂಮಿ ಕಂಪಿಸಿದ್ದು, ಪ್ರಮುಖವಾಗಿ ಹೊಕ್ಕೈಡೊ (Hokkaido), ಅಮೋರಿ (Aomori) ಮತ್ತು ಇವಾಟೆ (Iwate) ಪ್ರಾಂತ್ಯಗಳಲ್ಲಿ ಸುನಾಮಿ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. ಈ ಭಾಗದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಆಡಳಿತ ಸೂಚನೆ ನೀಡುವ ಸಾಧ್ಯತೆಗಳಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಕಟ್ಟಡಗಳು, ವಾಹನಗಳು ಮತ್ತು ಮನೆಗಳಲ್ಲಿನ ವಸ್ತುಗಳು ಜೋರಾಗಿ ಅಲುಗಾಡುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ಜನರು ಭೀತಿಯಿಂದ ರಸ್ತೆಗಿಳಿದಿದ್ದಾರೆ.

ಪದೇ ಪದೇ ಭೂಕಂಪ ಏಕೆ?

ಜಪಾನ್ "ಪೆಸಿಫಿಕ್ ರಿಂಗ್ ಆಫ್ ಫಯರ್" (Pacific Ring of Fire) ವಲಯದಲ್ಲಿ ನೆಲೆಗೊಂಡಿರುವುದರಿಂದ ಇಲ್ಲಿ ಭೂಕಂಪಗಳು ಸಾಮಾನ್ಯವಾಗಿದೆ. ಪೆಸಿಫಿಕ್ ಪ್ಲೇಟ್, ಫಿಲಿಪೈನ್ ಸೀ ಪ್ಲೇಟ್ ಸೇರಿದಂತೆ ಹಲವು ಟೆಕ್ಟೋನಿಕ್ ಪ್ಲೇಟ್‌ಗಳ ಸಂಗಮದಲ್ಲಿ ಈ ದೇಶವಿದ್ದು, ಭೂಮಿಯ ಆಳದಲ್ಲಿನ ಚಟುವಟಿಕೆಗಳು ನಿರಂತರವಾಗಿ ಭೂಕಂಪನಕ್ಕೆ ಕಾರಣವಾಗುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.

ಈ ಹಿಂದೆ ಅಕ್ಟೋಬರ್ ತಿಂಗಳಿನಲ್ಲಿಯೂ ಹೊನ್ಶು ಕರಾವಳಿಯ ಬಳಿ 6.0 ತೀವ್ರತೆಯ ಭೂಕಂಪ ಸಂಭವಿಸಿತ್ತು, ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಪ್ರಸ್ತುತ ಸಂಭವಿಸಿರುವ ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Read More
Next Story