ಮಹಾ ಕುಂಭಮೇಳ | ಅಗ್ನಿ ಅವಗಢ ತಡೆಗೆ 75 ಕ್ವಿಕ್‌ ರೆಸ್ಪಾನ್ಸ್‌ ವಾಹನ ಬಳಕೆಗೆ ನಿರ್ಧಾರ
x

ಮಹಾ ಕುಂಭಮೇಳ | ಅಗ್ನಿ ಅವಗಢ ತಡೆಗೆ 75 ಕ್ವಿಕ್‌ ರೆಸ್ಪಾನ್ಸ್‌ ವಾಹನ ಬಳಕೆಗೆ ನಿರ್ಧಾರ

ಒಂದು ಟನ್ ಸಾಮರ್ಥ್ಯದ ಸಣ್ಣಗಾತ್ರದ ಕ್ವಿಕ್‌ ರೆಸ್ಪಾನ್ಸ್‌ ವಾಹನಗಳು ಕಿರಿದಾದ ಪ್ರದೇಶಗಳಿಗೂ ಸುಲಭವಾಗಿ ಪ್ರವೇಶಿಸಿ ಅಗ್ನಿ ನಂದಿಸಲಿವೆ.


2025 ಜನವರಿ ತಿಂಗಳಲ್ಲಿ ನಡೆಯಲಿರುವ ಮಹಾ ಕುಂಭಮೇಳದಲ್ಲಿ ಸಂಭಾವ್ಯ ಅಗ್ನಿ ಅನಾಹುತಗಳ ತಡೆಗೆ 75 ಕ್ಷಿಪ್ರ ಅಗ್ನಿ ನಿಯಂತ್ರಣ ವಾಹನಗಳನ್ನು ಬಳಸಲು ಉತ್ತರ ಪ್ರದೇಶದ ಅಗ್ನಿ ಶಾಮಕ ಇಲಾಖೆ ನಿರ್ಧರಿಸಿದೆ.

ಒಂದು ಟನ್ ಸಾಮರ್ಥ್ಯದ ಸಣ್ಣಗಾತ್ರದ ಈ ವಾಹನಗಳು ಕಿರಿದಾದ ಪ್ರದೇಶಗಳಿಗೂ ಸುಲಭವಾಗಿ ಪ್ರವೇಶಿಸಿ ಅಗ್ನಿ ನಂದಿಸಲಿವೆ ಎಂದು ಅಗ್ನಿಶಾಮಕ ದಳದ ಪೊಲೀಸ್ ಅವಿನಾಶ್ ಚಂದ್ರ ಹೇಳಿದ್ದಾರೆ.

ಕ್ವಿಕ್‌ ರೆಸ್ಪಾನ್ಸ್ ವಾಹನಗಳಲ್ಲಿಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗಿದೆ. ಇವು 100 ಲೀಟರ್ ನೀರಿನ ಟ್ಯಾಂಕ್ ಹೊಂದಿವೆ. ಕಾರ್ಯಾಚರಣೆಗೆ ಅಡ್ಡಿ ಇರುವ ವಸ್ತುಗಳನ್ನು ತೆರವು ಮಾಡುವುದು, ಕತ್ತರಿಸುವುದು ಹಾಗೂ ಬೇರೆಡೆ ಸಾಗಿಸುವ ಸೌಲಭ್ಯವೂ ಇದೆ. ಪ್ರಥಮ ಚಿಕಿತ್ಸೆಯ ಉಪಕರಣಗಳನ್ನೂ ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಂಗಮ ಪ್ರದೇಶದಲ್ಲಿ ಅಗ್ನಿಶಾಮಕ ಬೋಟ್‌ಗಳನ್ನು ನಿಯೋಜಿಸಲಾಗುವುದು. ಈ ದೋಣಿಗಳು ನದಿ ನೀರು ಬಳಸಿಕೊಂಡು 300 ರಿಂದ 400 ಮೀಟರ್ ದೂರದಲ್ಲಿರುವ ಬೆಂಕಿಯನ್ನು ಸಹ ನಂದಿಸಲಿವೆ. ಮರಳಿನ ಮೇಲೆ ಚಲಿಸುವ ಸಾಮರ್ಥ್ಯ ಹೊಂದಿರುವ ಸರ್ವ ಋತು ಅಗ್ನಿಶಾಮಕ ವಾಹನಗಳನ್ನು ಬಳಸಲಾಗುವುದು ಎಂದು ಅವರು ಹೇಳಿದ್ದಾರೆ.

ಮಹಾಕುಂಭಮೇಳಕ್ಕೆ ಈ ಬಾರಿ 135 ಅಗ್ನಿಶಾಮಕ ದ್ವಿಚಕ್ರವಾಹನಗಳನ್ನು ಖರೀದಿಸಲಾಗಿದೆ. ಅಗ್ನಿ ಅವಗಢ ಸಂಭವಿಸಿದ ಸ್ಥಳಕ್ಕೆ 2 ರಿಂದ 3 ನಿಮಿಷಗಳ ಒಳಗೆ ತಲುಪಿ, ಬೆಂಕಿ ನಂದಿಸುವ ಗುರಿ ಹೊಂದಲಾಗಿದೆ. ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳತ್ತಲೂ ಗಮನ ಹರಿಸಲಾಗಿದೆ. ಇದಕ್ಕಾಗಿ ಅಗ್ನಿಶಾಮಕ ಇಲಾಖೆಯು ವಿದ್ಯುತ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಲಿದೆ ಎಂದು ಹೇಳಿದ್ದಾರೆ.

ಮಹಾ ಕುಂಭಮೇಳಕ್ಕಾಗಿ 50 ಅಗ್ನಿಶಾಮಕ ಠಾಣೆಗಳು ಮತ್ತು 20 ತಾತ್ಕಾಲಿಕ ಅಗ್ನಿಶಾಮಕ ಪೋಸ್ಟ್‌ಗಳನ್ನು ಸ್ಥಾಪಿಸಲಾಗುತ್ತಿದೆ. 50 ವಾಚ್ ಟಬರ್‌ಗಳ ಜೊತೆಗೆ ಎಲ್ಲಾದರೂ ಹೊಗೆ ಕಾಣಿಸಿಕೊಂಡರೆ ತಕ್ಷಣ ನಿಯಂತ್ರಣ ಕೊಠಡಿಗೆ ತಿಳಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

Read More
Next Story