ದೆಹಲಿಯ ಬಣ್ಣದ ಕಾರ್ಖಾನೆಯಲ್ಲಿ ಬೆಂಕಿ: 7 ಮಂದಿ ಸಾವು
x

ದೆಹಲಿಯ ಬಣ್ಣದ ಕಾರ್ಖಾನೆಯಲ್ಲಿ ಬೆಂಕಿ: 7 ಮಂದಿ ಸಾವು


ಹೊಸದಿಲ್ಲಿ, ಫೆ.15 - ದಿಲ್ಲಿಯ ಅಲಿಪುರದ ಪೇಂಟ್ ಕಾರ್ಖಾನೆಯಲ್ಲಿ ಗುರುವಾರ ಸಂಜೆ ಸಂಭವಿಸಿದ ಬೆಂಕಿಯಲ್ಲಿ ಕನಿಷ್ಠ ಏಳು ಜನ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ.

ಅಲಿಪುರದ ದಯಾಲ್‌ಪುರ ಮಾರುಕಟ್ಟೆಯಲ್ಲಿರುವ ಕಾರ್ಖಾನೆ ಆವರಣದಲ್ಲಿ ಏಳು ಸುಟ್ಟ ಶವಗಳು ಪತ್ತೆಯಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಸ್ಪತ್ರೆಗೆ ದಾಖಲಾದ ನಾಲ್ವರಲ್ಲಿ ಒಬ್ಬರು ಪೊಲೀಸ್ ಸಿಬ್ಬಂದಿಯಾಗಿದ್ದು, ರಕ್ಷಣಾ ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದಾರೆ. ದೆಹಲಿ ಅಗ್ನಿಶಾಮಕ ಸೇವೆ ಠಾಣೆಗೆ ಸಂಜೆ 5.25 ಕ್ಕೆ ಕರೆ ಬಂದಿದ್ದು, 22 ಅಗ್ನಿಶಾಮಕ ವಾಹನಗಳನ್ನು ಸೇವೆಗೆ ನಿ ಯೋಜಿಸಲಾಯಿತು. ಕಾ ರ್ಖಾನೆ ಯಲ್ಲಿ ಇರಿಸಿದ್ದ ರಾಸಾಯನಿಕಗಳಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟದಿಂದ ಹತ್ತಿರದ ಕೆಲವು ಮನೆಗಳು ಮತ್ತು ಅಂಗಡಿಗಳು ಸಹ ಬೆಂಕಿಗೆ ಆಹುತಿಯಾಗಿವೆ.

ರಾತ್ರಿ 9 ಗಂಟೆ ವೇಳೆಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು. ನಾಪತ್ತೆಯಾಗಿದವರ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Read More
Next Story