49 ಕ್ಷೇತ್ರಗಳಲ್ಲಿ ಐದನೇ ಹಂತದ ಲೋಕಸಭಾ ಚುನಾವಣೆ: ಶೇ.57.51 ಮತದಾನ
x

49 ಕ್ಷೇತ್ರಗಳಲ್ಲಿ ಐದನೇ ಹಂತದ ಲೋಕಸಭಾ ಚುನಾವಣೆ: ಶೇ.57.51 ಮತದಾನ

ಉತ್ತರ ಪ್ರದೇಶವು 57.79% ರಷ್ಟು ಮತದಾನವನ್ನು ದಾಖಲಿಸಿದೆ ಮತ್ತು ಬಿಹಾರದಲ್ಲಿ 55.85% ರಷ್ಟು ಮತದಾನವಾಗಿದ್ದರೆ, ಮಹಾರಾಷ್ಟ್ರದಲ್ಲಿ 49.01% ಮತದಾನವಾಗಿದೆ. ಜಮ್ಮು ಮತ್ತು ಕಾಶ್ಮೀರದ ಯಲ್ಲಿನ ಬಾರಾಮುಲ್ಲಾ ಕ್ಷೇತ್ರವು ಸಾರ್ವಕಾಲಿಕ ಗರಿಷ್ಠ 59% ಮತದಾನವನ್ನು ದಾಖಲಿಸಿದೆ ಎಂದು ಚುನಾವಣಾ ಅಯೋಗ ಹೇಳಿದೆ. ಇವೆಲ್ಲವೂ ತಾತ್ಕಾಲಿಕ ಅಂಕಿಅಂಶಗಳಾಗಿದ್ದು ಅಂತಿಮ ಎಣಿಕೆಯಲ್ಲಿ ಮತದಾನದ ಪ್ರಮಾಣವು ಸ್ವಲ್ಪಮಟ್ಟಿಗೆ ಹೆಚ್ಚಾಗಬಹುದು


ಐದನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 49 ಕ್ಷೇತ್ರಗಳಲ್ಲಿ ಸೋಮವಾರ (ಮೇ 20) ಅಂದಾಜು 57.51% ಮತದಾನವಾಗಿದೆ.

ಭಾರತದ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ 73% ಮತದಾನವಾಗಿದೆ ಹಾಗೂ ಲಡಾಖ್ 67.15%, ಜಾರ್ಖಂಡ್ 63% ಮತ್ತು ಒಡಿಶಾ 60.72% ಮತದಾನವಾಗಿದೆ.

ಉತ್ತರ ಪ್ರದೇಶವು 57.79% ರಷ್ಟು ಮತದಾನವನ್ನು ದಾಖಲಿಸಿದೆ ಮತ್ತು ಬಿಹಾರದಲ್ಲಿ 55.85% ರಷ್ಟು ಮತದಾನವಾಗಿದ್ದರೆ, ಮಹಾರಾಷ್ಟ್ರದಲ್ಲಿ 49.01% ಮತದಾನವಾಗಿದೆ. ಜಮ್ಮು ಮತ್ತು ಕಾಶ್ಮೀರದ ಯಲ್ಲಿನ ಬಾರಾಮುಲ್ಲಾ ಕ್ಷೇತ್ರವು ಸಾರ್ವಕಾಲಿಕ ಗರಿಷ್ಠ 59% ಮತದಾನವನ್ನು ದಾಖಲಿಸಿದೆ ಎಂದು ಚುನಾವಣಾ ಅಯೋಗ ಹೇಳಿದೆ. ಇವೆಲ್ಲವೂ ತಾತ್ಕಾಲಿಕ ಅಂಕಿಅಂಶಗಳಾಗಿದ್ದು ಅಂತಿಮ ಎಣಿಕೆಯಲ್ಲಿ ಮತದಾನದ ಪ್ರಮಾಣವು ಸ್ವಲ್ಪಮಟ್ಟಿಗೆ ಹೆಚ್ಚಾಗಬಹುದು.

ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಪಶ್ಚಿಮ ಬಂಗಾಳದ ಏಳು ಕ್ಷೇತ್ರಗಳಲ್ಲಿ 73% ರಷ್ಟು ಮತದಾನವಾಗಿದೆ. ಅರಾಂಬಾಗ್‌ನಲ್ಲಿ 76.90% ಅತಿ ಹೆಚ್ಚು ಮತದಾನವಾಗಿದೆ, ನಂತರ ಬಂಗಾವ್ (75.73%), ಉಲುಬೇರಿಯಾ (74.50%), ಹೂಗ್ಲಿ (74.17%), ಶ್ರೀರಾಂಪುರ (71.18%), ಮತ್ತು ಹೌರಾ ಮತ್ತು ಬಾರಕ್‌ಪೋರ್ (68.84%) ಮತದಾನ ದಾಖಲಿಸಿದೆ.

ಮಹಾರಾಷ್ಟ್ರದಲ್ಲಿ 49.01% ರಷ್ಟು ಕಡಿಮೆ ಮತದಾನವಾಗಿದೆ, ಮುಂಬೈ ದಕ್ಷಿಣದಲ್ಲಿ 45% ಕ್ಕಿಂತ ಕಡಿಮೆ ಮತದಾನವಾಗಿದೆ. ಶಿವಸೇನಾ (ಉದ್ಧವ್‌ ಠಾಕ್ರೆ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಕಡಿಮೆ ಮತದಾನಕ್ಕೆ ರಾಜ್ಯದ ಆಡಳಿತ ಯಂತ್ರ ಕಾರಣ ಎಂದು ಆರೋಪಿಸಿದ್ದಾರೆ. ಬಿಜೆಪಿ ನೇತೃತ್ವದ ಆಡಳಿತಾರೂಢ ಮೈತ್ರಿಕೂಟವು ರಾಜ್ಯದಲ್ಲಿ ಸೋಲನ್ನು ಅನುಭವಿಸಲಿದೆ. ನರೇಂದ್ರ ಮೋದಿ ಸರ್ಕಾರದ ಆದೇಶದ ಮೇರೆಗೆ ಚುನಾವಣಾ ಆಯೋಗವು ಉದ್ದೇಶಪೂರ್ವಕವಾಗಿ ಚುನಾವಣಾ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿದೆ ಎಂದು ಅವರು ಆರೋಪಿಸಿದರು.

ಮುಂಬೈನಲ್ಲಿ ಕಡಿಮೆ ಮತದಾನ

ಏತನ್ಮಧ್ಯೆ, ನಿಧಾನಗತಿಯ ಮತದಾನ ಪ್ರಕ್ರಿಯೆ, ಕಾರ್ಯನಿರ್ವಹಿಸದ ಇವಿಎಂಗಳು ಮತ್ತು ಮತದಾರರ ಪಟ್ಟಿಯಲ್ಲಿ ಹೆಸರುಗಳು ಕಾಣೆಯಾಗಿದೆ ಎಂಬ ದೂರುಗಳ ನಡುವೆ ಸೋಮವಾರ ಮುಂಬೈನ ಆರು ಲೋಕಸಭಾ ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯವರೆಗೆ 47.52 ರಷ್ಟು ಮತದಾನವಾಗಿದೆ. ಮಹಾ ನಗರದಲ್ಲಿ ಒಟ್ಟು 99,38,621 ನೋಂದಾಯಿತ ಮತದಾರರಿದ್ದು, ಆರು ಕ್ಷೇತ್ರಗಳಲ್ಲಿ 116 ಅಭ್ಯರ್ಥಿಗಳು ಕಣದಲ್ಲಿದ್ದರು.

ಬೊರಿವಲಿಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕಾಣೆಯಾಗಿದೆ ಎಂದು ಮತದಾರರು ದೂರಿದ್ದಾರೆ. ಮುಂಬೈ ಉತ್ತರ ಸೆಂಟ್ರಲ್‌ನಿಂದ ಸ್ಪರ್ಧಿಸಿರುವ ಮುಂಬೈ ಕಾಂಗ್ರೆಸ್ ಅಧ್ಯಕ್ಷೆ ವರ್ಷಾ ಗಾಯಕ್‌ವಾಡ್, ಜನರು ಬಿಸಿಲಿನ ನಡುವೆ ಹಲವಾರು ಗಂಟೆಗಳ ಕಾಲ ಸರದಿಯಲ್ಲಿ ಕಾಯುತ್ತಿರುವ ಮತ್ತು ಮತದಾನ ಮಾಡದೆ ಹಿಂದಿರುಗುವ ಬಗ್ಗೆ ಮುಂಬೈನಾದ್ಯಂತ ಆತಂಕಕಾರಿ ವರದಿಗಳು ಬರುತ್ತಿವೆ ಎಂದು ಹೇಳಿದರು. ಈ ಹಿಂದೆ ಮತದಾನ ಮಾಡಲು ಇಷ್ಟು ದಿನ ಕಾಯಲಿಲ್ಲ ಎಂದು ಅನೇಕ ಜನರು ಹೇಳಿದ್ದಾರೆ ಮತ್ತು ವಿಶೇಷವಾಗಿ ವಿರೋಧ ಪಕ್ಷದ ಎಂವಿಎ ಒಕ್ಕೂಟವು ಪ್ರಬಲವಾಗಿರುವ ಪ್ರದೇಶಗಳಿಂದ ದೂರುಗಳು ಬಂದಿವೆ ಎಂದು ಅವರು ಹೇಳಿದ್ದಾರೆ.

ಆದರೆ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ನಗರದಲ್ಲಿ ಮತದಾನ ನಿಧಾನಗತಿಯ ಬಗ್ಗೆ ಮೊದಲು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ ಮತ್ತು ಪ್ರತಿಪಕ್ಷಗಳು ಸೋಲಿನತ್ತಸಾಗುತ್ತಿರುವ ಕಾರಣಕ್ಕಾಗಿ ಠಾಕ್ರೆ ಮೋದಿ ಸರ್ಕಾರವನ್ನು ದೂಷಿಸುತ್ತಿದ್ದಾರೆ ಎಂದು ಹೇಳಿದರು. ಜೂನ್ 4 ರಂದು ಫಲಿತಾಂಶದ ಬಗ್ಗೆ ಕಾರಣಗಳನ್ನು ಹುಡುಕಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಂಗಾಳದಲ್ಲಿ ಚುನಾವಣಾ ಹಿಂಸಾಚಾರ

ಸೋಮವಾರ (ಮೇ 20) ಪಶ್ಚಿಮ ಬಂಗಾಳದಲ್ಲಿ ಐದನೇ ಹಂತದ ಮತದಾನದ ವೇಳೆ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಹೂಗ್ಲಿಯ ಅರಾಂಬಾಗ್‌ನಲ್ಲಿ ಬಿಜೆಪಿ ಬೆಂಬಲಿಗರು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದು ಸ್ಥಳೀಯ ಟಿಎಂಸಿ ಮುಖಂಡರೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಮತ್ತೊಂದು ಘರ್ಷಣೆ ಪ್ರಾರಂಭವಾಗಿದ್ದು ಇದರಲ್ಲಿ ಬಿಜೆಪಿ ಪಂಚಾಯತ್ ನಾಯಕರೊಬ್ಬರು ಗಾಯಗೊಂಡಿದ್ದಾರೆ.

ಹೌರಾ ಜಿಲ್ಲೆಯ ಉಲುಬೇರಿಯಾ ಮತ್ತು ಸಾಲ್ಕಿಯಾದಲ್ಲಿ ಹಿಂಸಾತ್ಮಕ ಘರ್ಷಣೆಯ ವರದಿಗಳಾಗಿವೆ. ಉಲುಬೇರಿಯಾದಲ್ಲಿ ಬಿಜೆಪಿ ಸ್ಥಳೀಯ ನಾಯಕನ ಸೋದರಳಿಯ ಮೇಲೆ ಹಲ್ಲೆ ನಡೆದರೆ, ಸಾಲ್ಕಿಯಾದಲ್ಲಿ ಸಿಪಿಐ(ಎಂ) ಪಕ್ಷದ ಕಚೇರಿಗೆ ಧ್ವಂಸ ಮಾಡಲಾಗಿದೆ.

Read More
Next Story