50 ವಿಮಾನಗಳಿಗೆ ಮತ್ತೆ ಬಾಂಬ್‌ ಕರೆ; 14 ದಿನಗಳಲ್ಲಿ 350 ವಿಮಾನಗಳಿಗೆ  ಬೆದರಿಕೆ
x

50 ವಿಮಾನಗಳಿಗೆ ಮತ್ತೆ ಬಾಂಬ್‌ ಕರೆ; 14 ದಿನಗಳಲ್ಲಿ 350 ವಿಮಾನಗಳಿಗೆ ಬೆದರಿಕೆ

ಬೆದರಿಕೆ ಸ್ವೀಕರಿಸಿದ ಎಲ್ಲ ವಿಮಾನಗಳನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಿದ ನಂತರ ಕಾರ್ಯಾಚರಣೆಗೆ ಅನುವು ಮಾಡಿಕೊಡಲಾಗಿದೆ ಎಂದು ಆಕಾಶ ಏರ್ ಭಾನುವಾರ ತಿಳಿಸಿದೆ.

ಇಂಡಿಗೋ ಹಾಗೂ ವಿಸ್ತಾರ ಏರ್‌ಲೈನ್ಸ್‌ನ 50 ವಿಮಾನಗಳಿಗೆ ಭಾನುವಾರ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ. ಒಟ್ಟಾರೆ ಕಳೆದ 14 ದಿನಗಳಲ್ಲಿ ಭಾರತೀಯ 350 ಕ್ಕೂ ಹೆಚ್ಚು ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳು ಬಂದಿವೆ.

ಬೆದರಿಕೆ ಸ್ವೀಕರಿಸಿದ ಎಲ್ಲ ವಿಮಾನಗಳನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಿದ ನಂತರ ಕಾರ್ಯಾಚರಣೆಗೆ ಅನುವು ಮಾಡಿಕೊಡಲಾಗಿದೆ ಎಂದು ಆಕಾಶ ಏರ್ ಭಾನುವಾರ ತಿಳಿಸಿದೆ.

ಇಂಡಿಗೋದ 18 ವಿಮಾನ ಮತ್ತು ವಿಸ್ತಾರಾ ಏರ್‌ಲೈನ್ಸ್‌ 17 ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿದೆ ಎಂದು ಮೂಲಗಳು ತಿಳಿಸಿವೆ.

ವಿಮಾನಯಾನ ಸಂಸ್ಥೆಗಳಿಗೆ ಸರಣಿಯ ಬೆದರಿಕೆ ಹಿನ್ನೆಲೆಯಲ್ಲಿ ಐಟಿ ಸಚಿವಾಲಯವು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಿದೆ. ಬೆದರಿಕೆ ಸಂದೇಶ ಬಂದ ಇ-ಮೇಲ್‌ ಹಾಗೂ ಕರೆಗಳ ಬೆನ್ನತ್ತಿ ಅವುಗಳನ್ನು ನಿಷ್ಕ್ರಿಯಗೊಳಿಸಲು ಮುಂದಾಗಿದೆ.

ಈ ಮಧ್ಯೆ, ನಾಗರಿಕ ವಿಮಾನಯಾನ ಸಚಿವಾಲಯವು ವಿಮಾನಗಳಿಗೆ ಬರುತ್ತಿರುವ ಹುಸಿ ಬಾಂಬ್ ಬೆದರಿಕೆಯನ್ನು ನಿಭಾಯಿಸಲು ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದೆ.

Read More
Next Story