4 ಅಂಕಿಯ ಪಿನ್‌ಗಳು ಎಷ್ಟು ಸುರಕ್ಷಿತ?
x

4 ಅಂಕಿಯ ಪಿನ್‌ಗಳು ಎಷ್ಟು ಸುರಕ್ಷಿತ?

ಪರಿಶೀಲಿಸಿದ 3.4 ದಶಲಕ್ಷ ಪಿನ್‌ಗಳಲ್ಲಿ ಸಾಮಾನ್ಯವಾದವೆಂದರೆ, 1234, 1111, 0000, 1212, 7777, 1004, 2000, 4444, 2222, ಮತ್ತು 6969. ಹುಟ್ಟಿದ ದಿನದಂಥ ವೈಯಕ್ತಿಕ ಮಾಹಿತಿಯನ್ನು ಪಿನ್‌ ಆಗಿ ಬಳಸುವುದು ಅಪಾಯಕರ


2024 ರ ಮೊದಲ ತ್ರೈಮಾಸಿಕದಲ್ಲಿ ಸೈಬರ್‌ ದಾಳಿ ಪ್ರಮಾಣ ಶೇ.33ರಷ್ಟು ಹೆಚ್ಚಿದೆ. ಇಂಡಿಯ ಜಗತ್ತಿನ ಅತ್ಯಂತ ಹೆಚ್ಚು ಸೈಬರ್‌ ದಾಳಿಗೆ ಗುರಿಯಾಗುತ್ತಿರುವ ದೇಶಗಳಲ್ಲಿ ಒಂದು ಎಂದು ಚೆಕ್ ಪಾಯಿಂಟ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಲಿಮಿಟೆಡ್ ವರದಿ ತಿಳಿಸಿದೆ.

ಸೈಬರ್ ಅಪರಾಧಿಗಳು ಕಂಪ್ಯೂಟರ್ ಸಿಸ್ಟಮ್‌ಗಳು ಮತ್ತು ನೆಟ್‌ವರ್ಕ್‌ಗಳಲ್ಲಿನ ನ್ಯೂನತೆಗಳನ್ನು ಕಂಡುಹಿಡಿದು ಜನರು, ವ್ಯವಹಾರಗಳು ಮತ್ತು ಸರ್ಕಾರಗಳನ್ನು ಗುರಿಯಾಗಿದಿಕೊಂಡು ದಾಳಿ ನಡೆಸುತ್ತಾರೆ. ಸೂಕ್ಷ್ಮ ಮಾಹಿತಿಯನ್ನು ಕದಿಯಲು ಅವರು ಫಿಶಿಂಗ್ ಮತ್ತು ರಾನ್ಸಮ್‌ ವೇರ್‌ ಮತ್ತಿತರ ವಿವಿಧ ವಿಧಾನಗಳನ್ನು ಆಶ್ರಯಿಸುತ್ತಾರೆ.

ಗಮನಿಸಬೇಕಾದ ಅಂಶವೆಂದರೆ, ಇಂಥ ಯಾವುದೇ ವ್ಯವಸ್ಥೆಯನ್ನು ಉಲ್ಲಂಘಿಸಲು ಸೈಬರ್ ಅಪರಾಧಿಗಳಿಗೆ ನೆರವಾಗುವುದು ದುರ್ಬಲ ಪಿನ್ ಸಂಖ್ಯೆ. ದುರ್ಬಲ ಎಂದರೆ, ʻ1234ʼ ಅಥವಾ ʻ0000ʼ ಅಥವಾ ನಿಮ್ಮ ಜನ್ಮದಿನಾಂಕ ಅಥವಾ ಫೋನ್ ಸಂಖ್ಯೆಯಂತಹ ವೈಯಕ್ತಿಕ ಮಾಹಿತಿ. ಇದನ್ನು ಊಹಿಸುವುದು ತುಂಬ ಸುಲಭ.

ʻಇನ್ಫರ್ಮೇಷನ್‌ ಈಸ್‌ ಬ್ಯೂಟಿಫುಲ್‌ʼನ ಇತ್ತೀಚಿನ ಸೈಬರ್‌ ಸೆಕ್ಯುರಿಟಿ ಅಧ್ಯಯನದ ಪ್ರಕಾರ, ಅನೇಕರು ಅತ್ಯಂತ ಪಿನ್‌ ಸಂಖ್ಯೆಗಳನ್ನು ಬಳಸುತ್ತಾರೆ. ಪರಿಶೀಲಿಸಿದ 3.4 ದಶಲಕ್ಷ ಪಿನ್‌ಗಳಲ್ಲಿ ಸಾಮಾನ್ಯವಾದವೆಂದರೆ, 1234, 1111, 0000, 1212, 7777, 1004, 2000, 4444, 2222, ಮತ್ತು 6969.

ಸರಳ ಅಥವಾ ಸುಲಭವಾಗಿ ಊಹಿಸಬುದಾದ ಪಿನ್‌ ಬಳಸಿದರೆ, ಸೈಬರ್ ಅಪರಾಧಿಗಳಿಗೆ ಸುಲಭ ಬೇಟೆಯಾಗಬಹುದು. ಆದ್ದರಿಂದ ನಿಮ್ಮ ಖಾತೆಗಳು/ ಸಾಧನಗಳನ್ನು ರಕ್ಷಿಸಲು ಪಿನ್‌ ಆಯ್ಕೆಮಾಡುವಾಗ ಸುರಕ್ಷತೆಗೆ ಆದ್ಯತೆ ನೀಡುವುದು ಬಹಳ ಮುಖ್ಯ. ಬಲವಾದ, ವಿಶಿಷ್ಟವಾದ ಪಿನ್ ನಿಮ್ಮ ಮಾಹಿತಿಗೆ ಅನಧಿಕೃತ ಪ್ರವೇಶದ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಕೆಲವು ಸಾಮಾನ್ಯ 4 ಅಂಕಿಯ ಪಿನ್‌ಗಳೆಂದರೆ, 8557, 8438, 9539, 7063, 6827, 0859, 6793, 0738, 6835, ಮತ್ತು 8093.

ಡೈಲಿ ಮೇಲ್ ನ ವರದಿ ಪ್ರಕಾರ, ಇಎಸ್‌ಇಟಿ ಸೈಬರ್ ಸೆಕ್ಯುರಿಟಿ ತಜ್ಞ ಜೇಕ್ ಮೂರ್ ಸರಳವಾದ ಪಾಸ್‌ಕೋಡ್‌ ಬಳಸದಂತೆ ಸಲಹೆ ನೀಡಿದ್ದಾರೆ. ಅವರ ಪ್ರಕಾರ, ಅನೇಕ ಜನರು ʻತಮಗೇನೂ ಆಗುವುದಿಲ್ಲʼ ಎಂದು ತಪ್ಪಾಗಿ ಅಂದಾಜು ಮಾಡುತ್ತಾರೆ.

ಪರಿಣತ ಹ್ಯಾಕರ್‌ಗಳು ಸೀಮಿತ ಸಂಖ್ಯೆಯ ಪ್ರಯತ್ನಗಳಲ್ಲಿ ಪಾಸ್ಕೋಡ್ ಗಳನ್ನು ಭೇದಿಸುತ್ತಾರೆ. ಸಾಮಾಜಿಕ ಮಾಧ್ಯಮ ಸೇರಿದಂತೆ ವೈಯಕ್ತಿಕ ಖಾತೆಗಳಿಗೆ ಜನ್ಮ ವರ್ಷ, ವೈಯಕ್ತಿಕ ಮಾಹಿತಿ ಅಥವಾ ಪುನರಾವರ್ತಿತ ಪಾಸ್‌ವರ್ಡ್‌ ಬಳಸಬಾರದು ಸುಲಭವಾಗಿ ಊಹಿಸಬಹುದಾದ ಪಿನ್‌ ಬಳಕೆಯು ದಾಳಿಕೋರರಿಗೆ ಸುಲಭವಾಗಿ ವಂಚಿಸಲು ನೆರವಾಗುತ್ತವೆ ಎಂದು ಮೂರ್‌ ಹೇಳುತ್ತಾರೆ.

ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ, ಪಾಸ್‌ಕೋಡ್‌ಗಳನ್ನು ಹ್ಯಾಕ್ ಮಾಡಬಹುದು. ಆದ್ದರಿಂದ ಹೆಚ್ಚಿನ ಭದ್ರತೆಗಾಗಿ ಪಾಸ್‌ವರ್ಡ್ ನಿರ್ವಾಹಕರನ್ನು ಬಳಸಬೇಕು. ಈ ಉಪಕರಣಗಳು ವೈಯಕ್ತಿಕ ಮಾಹಿತಿಯನ್ನು ರಕ್ಷಿಸುತ್ತವೆ ಮತ್ತು ಅನಿರ್ದಿಷ್ಟವಾಗಿ ಕೋಡ್‌ಗಳನ್ನು ರಚಿಸಲು ಸಹಾಯ ಮಾಡುತ್ತವೆ. ಇದರಿಂದ ನೀವು ನಿಮ್ಮ ಜನ್ಮದಿನ ಅಥವಾ ವಾರ್ಷಿಕೋತ್ಸವವನ್ನು ಪಿನ್‌ ಆಗಿ ಬಳಸುವುದು ತಪ್ಪುತ್ತದೆ,ʼ ಎಂದು ಮೂರ್ ಹೇಳುತ್ತಾರೆ.

Read More
Next Story