3 ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಚಾಲನೆ
x

3 ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಚಾಲನೆ


ಹೊಸದಿಲ್ಲಿ: ಮಧುರೈನಿಂದ ಬೆಂಗಳೂರು, ಚೆನ್ನೈನಿಂದ ನಾಗರ್‌ಕೋಯಿಲ್‌ ಮತ್ತು ಮೀರತ್‌ನಿಂದ ಲಕ್ನೋಗೆ ಸಂಪರ್ಕ ಕಲ್ಪಿಸುವ ಮೂರು ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ, ಮಾತನಾಡಿ, 2047 ರ ವೇಳೆಗೆ ವಿಕಸಿತ್ ಭಾರತ್ ಗುರಿಯನ್ನು ಸಾಧಿಸಲು ದಕ್ಷಿಣದ ರಾಜ್ಯಗಳ ವೇಗದ ಬೆಳವಣಿಗೆ ಪ್ರಮುಖವಾಗಿದೆ. ತಮಿಳುನಾಡು ಮತ್ತು ಕರ್ನಾಟಕಕ್ಕೆ ಬಜೆಟ್ ಹಂಚಿಕೆ ಹೆಚ್ಚಳವು ದಕ್ಷಿಣ ರಾಜ್ಯಗಳಲ್ಲಿ ರೈಲು ಸಾರಿಗೆ ಯನ್ನು ಬಲಪಡಿಸಿದೆ ಎಂದು ಹೇಳಿದರು.

ಮೀರತ್-ಲಕ್ನೋ ವಂದೇ ಭಾರತ್ ರೈಲು ಎರಡು ನಗರಗಳ ನಡುವಿನ ಎಕ್ಸ್‌ಪ್ರೆಸ್‌ ರೈಲಿಗೆ ಹೋಲಿಸಿದರೆ, ಪ್ರಯಾಣಿಕರಿಗೆ ಸುಮಾರು ಒಂದು ಗಂಟೆ ಉಳಿಸಲು ಸಹಾಯ ಮಾಡುತ್ತದೆ. ಅದೇ ರೀತಿ, ಮಧುರೈ-ಬೆಂಗಳೂರು ರೈಲು ಒಂದೂವರೆ ಗಂಟೆ ಹಾಗೂ ಚೆನ್ನೈ ಎಗ್ಮೋರ್-ನಾಗರ್‌ಕೋಯಿಲ್ ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ಉಳಿಸುತ್ತದೆ.

Read More
Next Story