ಕಡಿಮೆ ಮತದಾನ ಇರುವ ಕ್ಷೇತ್ರಗಳಲ್ಲಿ ಇಸಿ ಮಧ್ಯಸ್ಥಿಕೆ
x

ಕಡಿಮೆ ಮತದಾನ ಇರುವ ಕ್ಷೇತ್ರಗಳಲ್ಲಿ ಇಸಿ ಮಧ್ಯಸ್ಥಿಕೆ


ಚುನಾವಣೆ ಆಯೋಗವು ಕಡಿಮೆ ಮತ ಚಲಾವಣೆ ಆಗುತ್ತಿರುವ 266 ಸಂಸದೀಯ ಕ್ಷೇತ್ರಗಳನ್ನುಗುರುತಿಸಿದ್ದು,ಇದರಲ್ಲಿ 215 ಗ್ರಾಮೀಣ ಪ್ರದೇಶಗಳಲ್ಲಿದೆ. ಚುನಾವಣೆ ಆಯೋಗ ಈ ಕ್ಷೇತ್ರಗಳಲ್ಲಿ ಮತದಾರರ ಭಾಗವಹಿಸುವಿಕೆಯನ್ನು ಸುಧಾರಿಸಲು ಉದ್ದೇಶಿತ ಮಧ್ಯಸ್ಥಿಕೆ ಗಳನ್ನು ಯೋಜಿಸಿದೆ.

ಪ್ರಮುಖ ನಗರಗಳ ಮುನ್ಸಿಪಲ್ ಆಯುಕ್ತರು, ಬಿಹಾರ ಮತ್ತು ಉತ್ತರ ಪ್ರದೇಶದ ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿ(ಡಿಇಒ)ಗಳು ಮತದಾರರ ತೊಡಗಿಸಿಕೊಳ್ಳುವಿಕೆ ಮತ್ತು ಗುರುತಿಸಿದ ನಗರ ಹಾಗೂ ಗ್ರಾಮೀಣ ಲೋಕಸಭೆ ಕ್ಷೇತ್ರಗಳಲ್ಲಿ ಮತದಾರರ ಭಾಗವಹಿಸುವಿ ಕೆಯನ್ನು ಹೆಚ್ಚಿಸುವ ಕುರಿತು ಚರ್ಚಿಸಿದರು.

ಬಿಹಾರ, ಉತ್ತರಪ್ರದೇಶ, ದೆಹಲಿ, ಮಹಾರಾಷ್ಟ್ರ, ಉತ್ತರಾಖಂಡ, ತೆಲಂಗಾಣ, ಗುಜರಾತ್, ಪಂಜಾಬ್, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ಮತ್ತು ಜಾರ್ಖಂಡ್ ಸೇರಿದಂತೆ ಹನ್ನೊಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2019 ರ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಸರಾಸರಿ ಶೇ. 67.40 ಕ್ಕಿಂತ ಕಡಿಮೆ ಮತದಾನ ಆಗಿದೆ.

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾತನಾಡಿ, 'ಎಲ್ಲರಿಗೂ ಒಂದು ಗಾತ್ರ ಸರಿಹೊಂದುತ್ತದೆ' ವಿಧಾನ ಕೆಲಸ ಮಾಡುವುದಿಲ್ಲ. ವಿವಿಧ ಪ್ರದೇಶಗಳು ಮತ್ತು ವಿಭಾಗಗಳಿಗೆ ವಿಭಿನ್ನ ಕಾರ್ಯತಂತ್ರಗಳನ್ನು ರೂಪಿಸಬೇಕು ಎಂದು ಹೇಳಿದರು.

Read More
Next Story