Election 2024| ಬೆಳಗ್ಗೆ 11 ಗಂಟೆವರೆಗೆ ಶೇ. 23.66 ಮತದಾನ; ಪಶ್ಚಿಮ ಬಂಗಾಳದಲ್ಲಿ ಶೇ. 32.70
x
ಲಡಾಖ್‌ನ ಮತಗಟ್ಟೆಯಲ್ಲಿ ಹಿರಿಯ ದಂಪತಿಗಳೊಂದಿಗೆ ಮುಖ್ಯ ಚುನಾವಣಾ ಅಧಿಕಾರಿ

Election 2024| ಬೆಳಗ್ಗೆ 11 ಗಂಟೆವರೆಗೆ ಶೇ. 23.66 ಮತದಾನ; ಪಶ್ಚಿಮ ಬಂಗಾಳದಲ್ಲಿ ಶೇ. 32.70


ಮೇ 20- ಐದನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 49 ಕ್ಷೇತ್ರಗಳಲ್ಲಿ ಸೋಮವಾರ ಬೆಳಗ್ಗೆ 11 ಗಂಟೆವರೆಗೆ ಅಂದಾಜು ಶೇ.23.66ರಷ್ಟು ಮತದಾನವಾಗಿದೆ.

ಪಶ್ಚಿಮ ಬಂಗಾಳದಲ್ಲಿ ಶೇ.32.70, ಲಡಾಖ್ ಶೇ.27.87, ಉತ್ತರ ಪ್ರದೇಶ ಶೇ.27.76, ಜಾರ್ಖಂಡ್ ಶೇ.26.18, ಜಮ್ಮು-ಕಾಶ್ಮೀರ ಶೇ. 21.37, ಬಿಹಾರ ಶೇ. 21.11, ಒಡಿಶಾ ಶೇ.21.07 ಮತ್ತು ಮಹಾರಾಷ್ಟ್ರದಲ್ಲಿ ಶೇ.15.93 ರಷ್ಟು ಮತದಾನವಾಗಿದೆ.

ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್, ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಮೊದಲು ಮತದಾನ ಮಾಡಿದ ಪ್ರಮುಖರು. ʻಎಲ್ಲ ಮತದಾರರೂ ಮತ ಚಲಾಯಿಸುವಂತೆ ನಾನು ಒತ್ತಾಯಿಸುತ್ತೇನೆ. ಸಂಸದೀಯ ಪ್ರಜಾಪ್ರಭುತ್ವದ ಈ ಹಕ್ಕು ಪ್ರತಿಯೊಬ್ಬರೂ ಚಲಾ ಯಿಸಬೇಕು,ʼ ಎಂದು ದಕ್ಷಿಣ ಮುಂಬೈನಲ್ಲಿರುವ ತಮ್ಮ ನಿವಾಸದ ಬಳಿಯ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದ ನಂತರ ಶಕ್ತಿಕಾಂತ ದಾಸ್ ಹೇಳಿದರು.

ಮುಂಬೈನ ಹಲವು ಮತಗಟ್ಟೆಗಳಲ್ಲಿ ಉತ್ತಮ ಮತದಾನವಾಗಿದೆ. ಬಾಲಿವುಡ್ ತಾರೆಗಳಾದ ಅಕ್ಷಯ್ ಕುಮಾರ್, ಫರ್ಹಾನ್ ಅಖ್ತರ್, ರಾಜ್‌ಕುಮಾರ್ ರಾವ್ ಮತ್ತು ಜಾಹ್ನವಿ ಕಪೂರ್ ಪ್ರಮುಖ ಆರಂಭಿಕ ಮತದಾರರಾಗಿದ್ದಾರೆ.

ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಸ್ಮೃತಿ ಇರಾನಿ, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತಿತರರ ಭವಿಷ್ಯ ನಿರ್ಧಾರವಾಗಲಿದೆ. ಮಹಾರಾಷ್ಟ್ರ 13, ಉತ್ತರ ಪ್ರದೇಶ 14, ಪಶ್ಚಿಮ ಬಂಗಾಳ 7, ಬಿಹಾರ 5, ಜಾರ್ಖಂಡ್‌ 3, ಒಡಿಶಾ 5, ಜಮ್ಮು-ಕಾಶ್ಮೀರದ ಒಂದು ಮತ್ತು ಲಡಾಖ್‌ನ ಏಕೈಕ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಜೊತೆಗೆ, ಒಡಿಶಾದ 35 ವಿಧಾನಸಭೆ ಕ್ಷೇತ್ರಗಳಿಗೂ ಮತದಾನ ನಡೆಯುತ್ತಿದ್ದು, ಬಿಜೆಡಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸ್ಪರ್ಧಿಸಿದ್ದಾರೆ.

Read More
Next Story