ಶೇ. 22ರಷ್ಟು ಪಾನಿಪುರಿಗಳಲ್ಲಿ ಕ್ಯಾನ್ಸರಿಗೆ ಕಾರಣವಾಗುವ ಕೃತಕ ಬಣ್ಣ
ಪಾನಿಪುರಿ ಸೇವನೆ ವಿನೋದ ಮತ್ತು ಉಲ್ಲಾಸ ತರಬಹುದು. ಆದರೆ, ಅದು ನಿಮಗೆ ಅತ್ಯಂತ ಹಾನಿಕರ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಇತ್ತೀಚೆಗೆ ಪರೀಕ್ಷಿಸಿದ ಪಾನಿಪುರಿ ಮಾದರಿಗಳಲ್ಲಿ ಶೇ. 22ರಷ್ಟು ಅನಾರೋಗ್ಯಕರ ಕೃತಕ ಬಣ್ಣ ಮತ್ತು ಕ್ಯಾನ್ಸರಿಗೆ ಕಾರಣವಾಗುವ ವಸ್ತುಗಳನ್ನು ಹೊಂದಿದ್ದುಮ ಸೇವನೆ ಅಪಾಯಕರ ಎಂದು ಹೇಳಿದೆ. ಅವುಗಳಲ್ಲಿ ಕೆಲವು ಸೇವನೆಗೆ ಸಂಪೂರ್ಣ ಅನರ್ಹವಾಗಿದ್ದವು.
ಎಫ್‌ಎಸ್‌ಎಸ್‌ಎಐ ಪ್ರಕಾರ, ಸಂಗ್ರಹಿಸಿದ 260 ಮಾದರಿಗಳಲ್ಲಿ 41ರಲ್ಲಿ ಕೃತಕ ಬಣ್ಣಗಳು ಮತ್ತು ಕ್ಯಾನ್ಸರಿಗೆ ಕಾರಣವಾಗುವ ವಸ್ತುಗಳು ಇದ್ದವು. ಉಳಿದ 18 ಮಾದರಿಗಳು ಸೇವನೆಗೆ ಅನರ್ಹವಾಗಿದ್ದವು. ಎಫ್‌ಎಸ್‌ಎಸ್‌ಎಐ ಈಗ ತಿನಿಸುಗಳಲ್ಲಿ ಆಹಾರ ಸುರಕ್ಷತೆ ಮಾನದಂಡಗಳನ್ನು ಜಾರಿಗೊಳಿಸಲು ಹಲವು ಕ್ರಮಗಳನ್ನು ಆರಂಭಿಸಲು ನಿರ್ಧರಿಸಿದೆ.
ಆಹಾರ ಸುರಕ್ಷತೆ ಆಯುಕ್ತ ಕೆ. ಶ್ರೀನಿವಾಸ್, ಐಇಸಿ ಚಟುವಟಿಕೆಗಳ ಮೂಲಕ ಮತ್ತು ನಿಯಮಿತ ತಪಾಸಣೆ ಮೂಲಕ ಮಾತ್ರ ಆಹಾರ ಸುರಕ್ಷತೆ ಸಾಧ್ಯ ಎಂದು ದ ಫೆಡರಲ್‌ಗೆ ತಿಳಿಸಿದರು.
ಜನಪ್ರಿಯ ಪಾನಿಪುರಿಯನ್ನು ತಯಾರಿಸುವ ವಿಧಾನದ ಬಗ್ಗೆ ಅನೇಕ ಜನರು ದೂರು ನೀಡಿದ ನಂತರ ಎಫ್‌ಎಸ್‌ಎಸ್‌ಎಐ, ಆಸಂಬಂದ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಿದರು.
ರಾಜ್ಯಾದ್ಯಂತ ರಸ್ತೆ ಮತ್ತು ರೆಸ್ಟೋರೆಂಟ್‌ಗಳಲ್ಲಿ ಪಾನಿ ಪುರಿ ಮಾರಾಟಗಾರರಿಂದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಎಫ್‌ಎಸ್‌ಎಸ್‌ಎಐ ಕಂಡುಕೊಂಡ ಅಂಶವೆಂದರೆ, ಗಣನೀಯ ಸಂಖ್ಯೆಯ ಮಾದರಿಗಳು ಹಳಸಿದ್ದವು ಮತ್ತು ಸೇವನೆಗೆ ಯೋಗ್ಯವಾಗಿರಲಿಲ್ಲ.
ಅನೇಕ ತಯಾರಕರು ಉಜ್ವಲ ನೀಲಿ, ಸೂರ್ಯಾಸ್ತದ ಹಳದಿ ಮತ್ತು ಟಾರ್ಟ್ರಾಜಿನ್‌ನಂತಹ ಆಹಾರ ರಾಸಾಯನಿಕ ಬಣ್ಣಗಳನ್ನು ಬಳಸುತ್ತಾರೆ. ಅವು ತೀವ್ರ ಆರೋಗ್ಯ ಸಮಸ್ಯೆ ಉಂಟುಮಾಡುತ್ತವೆ. ಉದಾಹರಣೆಗೆ, ಉಜ್ವಲ ನೀಲಿ ಎಫ್‌ಸಿಎಫ್ ಅಥವಾ ನೀಲಿ 1, ಪೆಟ್ರೋಲಿಯಂನಿಂದ ಉತ್ಪತ್ತಿಯಾಗುವ ಸಂಶ್ಲೇಷಿತ ಬಣ್ಣ. ಚರ್ಮದ ದದ್ದುಗಳು, ಸೂಕ್ಷ್ಮ ವ್ಯಕ್ತಿಗಳಲ್ಲಿ ಉಸಿರಾಟಕ್ಕೆ ಸಮಸ್ಯೆ ಸೇರಿದಂತೆ ಅಲರ್ಜಿ ಪ್ರತಿಕ್ರಿಯೆ ಉಂಟುಮಾಡಲಿದೆ.
ಕೃತಕ ಬಣ್ಣಗಳು ಹೃದಯ ಸಮಸ್ಯೆ, ಮೂತ್ರಪಿಂಡದ ಹಾನಿ ಮತ್ತು ಸ್ವಯಂನಿರೋಧ ಕಾಯಿಲೆಗೆ ಕಾರಣವಾಗುತ್ತವೆ.
ಈ ಹಿಂದೆ ಕರ್ನಾಟಕ ಸರ್ಕಾರ ಗೋಬಿ ಮಂಚೂರಿ, ಕಬಾಬ್ ಮತ್ತು ಹತ್ತಿ ಕ್ಯಾಂಡಿಗಳಲ್ಲಿ ಬಳಸುವ ರೋಡಮೈನ್-ಬಿ ಯನ್ನು ನಿಷೇಧಿಸಿತ್ತು.
ಫೆಬ್ರವರಿಯಲ್ಲಿ ತಮಿಳುನಾಡು ಸರ್ಕಾರವು ಹತ್ತಿ ಕ್ಯಾಂಡಿಯಲ್ಲಿ ರೋಡಮೈನ್ ಬಿ ಮತ್ತು ಜವಳಿ ಬಣ್ಣ ಕಂಡುಬಂದ ನಂತರ, ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿತು.