ಜಮ್ಮು-ಕಾಶ್ಮೀರ: ಉಧಂಪುರದಲ್ಲಿ ಇಬ್ಬರು ಪೊಲೀಸರಮೃತದೇಹ ಪತ್ತೆ
ಜಿಲ್ಲಾ ಕೇಂದ್ರದಲ್ಲಿರುವ ಕಾಳಿ ಮಾತಾ ದೇವಾಲಯದ ಹೊರಗೆ ಭಾನುವಾರ ಮುಂಜಾನೆ ಪೊಲೀಸ್ ವ್ಯಾನ್ ಒಳಗೆ ಗುಂಡು ತಗುಲಿದ ಪೊಲೀಸರ ಮೃತದೇಹಗಳು ಪತ್ತೆಯಾಗಿವೆ
ಉಧಂಪುರ ಜಿಲ್ಲೆಯಲ್ಲಿ ಭಾನುವಾರ ಮುಂಜಾನೆ ಇಬ್ಬರು ಪೊಲೀಸ್ ಸಿಬ್ಬಂದಿ ಗುಂಡಿನ ಗಾಯಗಳೊಂದಿಗೆ ಶವವಾಗಿ ಪತ್ತೆಯಾಗಿದ್ದು, ಘಟನೆಗೆ ಪರಸ್ಪರ ಇಬ್ಬರ ನಡುವಿನ ಕೋಪವೇ ಕಾರಣ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಬೆಳಿಗ್ಗೆ 6.30 ರ ಸುಮಾರಿಗೆ ಜಿಲ್ಲಾ ಕೇಂದ್ರದ ಕಾಳಿ ಮಾತಾ ದೇವಾಲಯದ ಹೊರಗೆ ಪೊಲೀಸ್ ವ್ಯಾನ್ ಒಳಗೆ ಗುಂಡು ತಗುಲಿದ ಶವಗಳು ಕಂಡುಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ತಂಡವು ಘಟನಾ ಸ್ಥಳಕ್ಕೆ ಧಾವಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಿದೆ ಎಂದು ಅವರು ಹೇಳಿದರು.
ಪರಸ್ಪರ ಗುಂಡು ಹಾರಿಸಿದ ನಂತರ ಇಬ್ಬರು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿ ಸೂಚಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ
Next Story