ಗುಜರಾತ್‌ನಲ್ಲಿ ರ್ಯಾಗಿಂಗ್‌ಗೆ 18 ವರ್ಷದ ವೈದ್ಯಕೀಯ ವಿದ್ಯಾರ್ಥಿ ಬಲಿ
ಪಟಾನ್ ಧಾರ್ಪುರದ ಜಿಎಂಆರ್‌ಎಸ್ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆಸಿದೆ. ಸೀನಿಯರ್ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡುವಾಗ ಅನಿಲ್ ಮೆಥಾನಿಯಾ ಎಂಬಾತನಿಗೆ 3 ಗಂಟೆಗಳ ಕಾಲ ನಿಲ್ಲುವಂತೆ ಮಾಡಿದ್ದರು. ಕುಸಿದು ಬಿದ್ದ ಆತ ಮೃತಪಟ್ಟಿದ್ದಾನೆ.
ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರ್ಯಾಗಿಂಗ್ ನಡೆಸುವ ಅಪಾಯಕಾರಿ ಅಭ್ಯಾಸವನ್ನು ನಿಲ್ಲಿಸಲು ಸರ್ಕಾರ ಕಾನೂನುಗಳನ್ನು ಜಾರಿ ಮಾಡಿದ್ದರೂ, ಕೆಲವೊಂದು ಕಡೆ ಅದಕ್ಕೆ ತಡೆಯಿಲ್ಲ ಎಂಬುದಕ್ಕೆ ಮತ್ತೊಂದು ಸಾಕ್ಷಿ ದೊರಕಿದೆ. ರ್ಯಾಗಿಂಗ್‌ಗೆ ಒಳಗಾಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಗುಜರಾತ್‌ನ ಪಟಾನ್ ಜಿಲ್ಲೆಯಲ್ಲಿ ನಡೆದಿದೆ. 18 ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗೆ ಸೀನಿಯರ್‌ಗಳು ರ್ಯಾಗಿಂಗ್ ಮಾಡುತ್ತಾ ಸತತ ಮೂರು ಗಂಟೆಗಳ ಕಾಲ ನಿಲ್ಲುವಂತೆ ಮಾಡಿದ್ದರಿಂದ ಆತ ಕುಸಿದು ಪ್ರಾಣಬಿಟ್ಟಿದ್ದಾನೆ. ನವೆಂಬರ್ 17ರಂದು ಘಟನೆ ನಡೆದಿದೆ.
ನವೆಂಬರ್ 16ರಂದು ಯುವಕ ಅಸ್ವಸ್ಥಗೊಂಡಿದ್ದು, ಆತನ ಹೇಳಿಕೆ ಆಧಾರದಲ್ಲಿ ಕಾಲೇಜು ತನಿಖೆಯನ್ನು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ.
ಪಟಾನ್ ಧಾರ್ಪುರದ ಜಿಎಂಆರ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆಸಿದೆ. ಸೀನಿಯರ್ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡುವಾಗ ಅನಿಲ್ ಮೆಥಾನಿಯಾ ಎಂಬಾತನಿಗೆ ಮೂರು ಗಂಟೆಗಳ ಕಾಲ ನಿಲ್ಲುವಂತೆ ಮಾಡಿದ್ದರು. ಕುಸಿದು ಬಿದ್ದ ಆತ ಮೃತಪಟ್ಟಿದ್ದಾನೆ ಎಂದು ಕಾಲೇಜಿನ ಡೀನ್ ಡಾ.ಹಾರ್ದಿಕ್ ಶಾ ತಿಳಿಸಿದ್ದಾರೆ.
"ಕುಸಿದುಬಿದ್ದ ತಕ್ಷಣ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆತನಿಗೆ ಚಿಕಿತ್ಸೆ ನೀಡುವ ಪ್ರಯತ್ನಗಳು ವಿಫಲವಾದವು. ಕಾಲೇಜು ಹಾಸ್ಟೆಲ್‌ನಲ್ಲಿ ಹಿರಿಯರ ಮುಂದೆ ತನ್ನನ್ನು ಪರಿಚಯಿಸಿಕೊಳ್ಳಲು ಮೂರು ಗಂಟೆಗಳ ಕಾಲ ನಿಲ್ಲುವಂತೆ ಮಾಡಿದ ನಂತರ ಮೆಥಾನಿಯಾ ಸಾವನ್ನಪ್ಪಿದ್ದಾನೆ ಎಂದು ಆತನ ಸಹಪಾಠಿಗಳು ಹೇಳಿದ್ದಾರೆ" ಎಂದು ಹಾರ್ದಿಕ್ ಅವರು ವರದಿಯಲ್ಲಿ ತಿಳಿಸಿದ್ದಾರೆ.
ಕಾಲೇಜಿನಲ್ಲಿ ರಚಿಸಲಾಗಿರುವ ರ್ಯಾಗಿಂಗ್ ವಿರೋಧಿ ಸಮಿತಿಯು ಘಟನೆಯ ತನಿಖೆ ಪ್ರಾರಂಭಿಸಿದೆ. ತಪ್ಪು ಮಾಡಿದ ಹಿರಿಯ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಲೇಜಿನ ಮೊದಲ ವರ್ಷದ ವೈದ್ಯಕೀಯ ವಿದ್ಯಾರ್ಥಿಯೊಬ್ಬನಿಗೆ ಏಳೆಂಟು ಹಿರಿಯ ವಿದ್ಯಾರ್ಥಿಗಳ ಗುಂಪು ಸುಮಾರು ಮೂರು ಗಂಟೆಗಳ ಕಾಲ ನಿಂತುಕೊಳ್ಳುವಂತೆ ಒತ್ತಾಯಿಸಿದೆ. ಈ ವೇಳೆ ಮಾನಸಿಕ ಹಿಂಸೆ ನೀಡಿದ ಕಾರಣ ಆತ ಕುಸಿದು ಬಿದ್ದಿದ್ದ.
"ಅವರು ನಮ್ಮನ್ನು ಸತತವಾಗಿ ನಿಲ್ಲುವಂತೆ ಒತ್ತಾಯಿಸಿದ್ದರ. ನಮ್ಮೊಂದಿಗೆ ನಿಂತಿದ್ದ ಒಬ್ಬ ವಿದ್ಯಾರ್ಥಿ ಪ್ರಜ್ಞೆ ತಪ್ಪಿದ. ನಾವು ಆತನನ್ನು ಆಸ್ಪತ್ರೆಗೆ ಸಾಗಿಸಿದೆವು, ಅಲ್ಲಿ ಆತ ನಿಧನ ಹೊಂದಿದ್ದಾನೆ" ಎಂದು ಅವರು ಹೇಳಿದ್ದಾರೆ.
ಪ್ರಜ್ಞೆ ತಪ್ಪಿದ ನಂತರ ಅನಿಲ್ ಮಥಾನಿಯಾ ಆಸ್ಪತ್ರೆಗೆ ದಾಖಲಿಸಿದೆವು. ಆದರೆ ಆತ ಮೃತಪಟ್ಟಿದಾನೆ ಎಂದು ಧರ್ಮೇಂದ್ರ ಮೆಥಾನಿಯಾ ಹೇಳಿದ್ದಾರೆ.
ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ನಾವು ಮರಣೋತ್ತರ ವರದಿಗಾಗಿ ಕಾಯುತ್ತಿದ್ದೇವೆ. ರ್ಯಾಗಿಂಗ್ ಪ್ರಮುಖ ಕಾರಣ ಎಂದು ನಾವು ನಂಬಿದ್ದೇವೆ ಎಂಬುದಾಗಿ ಅವರು ಹೇಳಿದ್ದಾರೆ.