
ಮಣಿಪುರದಲ್ಲಿ 10 ನಕ್ಸಲರನ್ನು ಹತ್ಯೆ ಮಾಡಿದ ಅಸ್ಸಾಂ ರೈಫಲ್ಸ್
ಸಾಕಷ್ಟು ಪ್ರಮಾಣದಲ್ಲಿ ಶಸ್ತ್ರವಾಗಿ ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೈನ್ಯ ಮಾಹಿತಿ ನೀಡಿದೆ.
ಮಣಿಪುರದ ಚಂದೇಲ್ ಜಿಲ್ಲೆಯ ಗಡಿ ಭಾಗದಲ್ಲಿ ಅಸ್ಸಾಂ ರೈಫಲ್ಸ್ ಸತತವಾಗಿ ಕಾರ್ಯಾಚರಣೆ ನಡೆಸಿ. ಕನಿಷ್ಠ 10 ಉಗ್ರರನ್ನು ಹತ್ಯೆ ಮಾಡಿದೆ. ಭಾರತ-ಮ್ಯಾನ್ಮಾರ್ ಗಡಿಯ ಸಮೀಪದ ಖೆಂಗ್‌ಜಾಯ್ ತೆಹಸಿಲ್‌ನ ನ್ಯೂ ಸಾಮ್ಟಲ್ ಗ್ರಾಮದ ಬಳಿ ಶಸ್ತ್ರಸಜ್ಜಿತ ಉಗ್ರರ ಚಲನವಲನದ ಬಗ್ಗೆ ಖಚಿತ ಮಾಹಿತಿ ಪಡೆದು ಈ ದಾಳಿ ನಡೆಸಿದೆ.
ಮೇ 14ರಂದು ನಡೆದ ಈ ಕಾರ್ಯಾಚರಣೆಯನ್ನು ಸ್ಪಿಯರ್ ಕಾರ್ಪ್ಸ್‌ನ ಅಸ್ಸಾಂ ರೈಫಲ್ಸ್ ಘಟಕವು ನಡೆಸಿದೆ. ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶೋಧ ಕಾರ್ಯ ನಡೆಯುತ್ತಿದ್ದಾಗ, ನಕ್ಸಲರು ಗುಂಡಿನ ದಾಳಿ ನಡೆಸಿದ್ದು, ತಕ್ಷಣವೇ ಯೋಧರು ಪ್ರತಿದಾಳಿ ನಡೆಸಿದರು. ಈ ಗುಂಡಿನ ಕಾಳಗದಲ್ಲಿ 10 ಉಗ್ರರು ನೆಲಕ್ಕುರುಳಿದ್ದಾರೆ. ಅಲ್ಲದೆ, ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆಯ ಈಸ್ಟರ್ನ್ ಕಮಾಂಡ್ ತಿಳಿಸಿದೆ. ಸದ್ಯಕ್ಕೆ ಆ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story