1 in 3 Girls, 1 in 8 Boys Sexually Abused Before 18: Lancet
x

ಭಾರತದಲ್ಲಿ 30%ಕ್ಕಿಂತ ಹೆಚ್ಚು ಬಾಲಕಿಯರು, 13% ಬಾಲಕರು 18 ವರ್ಷಕ್ಕಿಂತ ಮುಂಚೆ ಲೈಂಗಿಕ ದೌರ್ಜನ್ಯಕ್ಕೆ ಈಡು

ವಿಶ್ವಾದ್ಯಂತ, ಸುಮಾರು ಐವರಲ್ಲಿ ಒಬ್ಬಳು ಬಾಲಕಿ ಮತ್ತು ಏಳರಲ್ಲಿ ಒಬ್ಬ ಬಾಲಕ 18 ವರ್ಷಕ್ಕಿಂತ ಮುಂಚೆ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಾರೆ ಎಂದು ಅಂದಾಜಿಸಲಾಗಿದೆ.


2023ರಲ್ಲಿ ಭಾರತದಲ್ಲಿ 30.8% ಬಾಲಕಿಯರು ಮತ್ತು 13% ಬಾಲಕರು 18 ವರ್ಷಕ್ಕಿಂತ ಮುಂಚೆ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಾರೆ ಎಂದು ದಿ ಲ್ಯಾನ್ಸೆಟ್ ಜರ್ನಲ್‌ ವರದಿಯೊಂದನ್ನು ಪ್ರಕಟಿಸಿದೆ. 1990ರಿಂದ 2023ರವರೆಗೆ ಅಂಕಿ ಅಂಶಗಳ ಆಧಾರದಲ್ಲಿ ಈ ಅಧ್ಯಯನ ನಡೆಸಲಾಗಿದ್ದು. 200ಕ್ಕೂ ಹೆಚ್ಚು ದೇಶಗಳಲ್ಲಿ ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯದ ಸಮಸ್ಯೆಗೆ ಬೆಳಕು ಚೆಲ್ಲಲಾಗಿದೆ.

ಅಧ್ಯಯನ ವರದಿ ಪ್ರಕಾರ, ದಕ್ಷಿಣ ಏಷ್ಯಾದಲ್ಲಿ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಮಾಣವು ಅತಿ ಗರಿಷ್ಠ ಮಟ್ಟದಲ್ಲಿದೆ. ಬಾಂಗ್ಲಾದೇಶದಲ್ಲಿ 9.3% ರಷ್ಟಿದ್ದು, ಭಾರತದಲ್ಲಿ 30.8% ವರೆಗೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅದೇ ರೀತಿ ವಿಶ್ವಾದ್ಯಂತ, ಸುಮಾರು ಐವರಲ್ಲಿ ಒಬ್ಬಳು ಬಾಲಕಿ ಮತ್ತು ಏಳರಲ್ಲಿ ಒಬ್ಬ ಬಾಲಕ 18 ವರ್ಷಕ್ಕಿಂತ ಮುಂಚೆ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಾರೆ ಎಂದು ಅಂದಾಜಿಸಲಾಗಿದೆ.

ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಆ್ಯಂಡ್​ ಎವ್ಯಾಲ್ಯೂಷನ್‌ನ ಸಂಶೋಧಕರು ಈ ಅಧ್ಯಯನ ತಂಡದಲ್ಲಿದ್ದರು. ಅವರು ಸಹಾರಾ-ದಕ್ಷಿಣ ಆಫ್ರಿಕಾದಲ್ಲಿ ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಮಾಣವು ಅತಿ ಹೆಚ್ಚಾಗಿದೆ ಎಂಬುದನ್ನೂ ಕಂಡುಕೊಂಡಿದ್ದಾರೆ. ಇದು ಜಿಂಬಾಬ್ವೆಯಲ್ಲಿ ಸುಮಾರು 8% ರಿಂದ ಕೋಟ್ ಡಿ’ಐವೊರ್‌ನಲ್ಲಿ 28% ವರೆಗೆ ಇದೆ ಎಂದು ವರದಿ ಮಾಡಿದ್ದಾರೆ.

ಲೈಂಗಿಕ ದೌರ್ಜನ್ಯದ ಪರಿಣಾಮಗಳು

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವು ಗಂಭೀರ ಸಾರ್ವಜನಿಕ ಆರೋಗ್ಯ ಮತ್ತು ಮಾನವ ಹಕ್ಕುಗಳ ಸಮಸ್ಯೆಯಾಗಿದೆ. ಲೈಂಗಿಕ ದೌರ್ಜನ್ಯದ ಪರಿಣಾಮಗಳು ದೀರ್ಘಕಾಲೀನ ಆರೋಗ್ಯದ ಮೇಲೆ ಪರಿಣಾಮ ಬೀರಿ, ಮಾನಸಿಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಲೈಂಗಿಕ ದೌರ್ಜನ್ಯದ ತಡೆಗಟ್ಟುವಿಕೆ ದೊಡ್ಡ ಸಮಸ್ಯೆಯಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಆದರೆ, ಅಸ್ತಿತ್ವದಲ್ಲಿರುವ ಅಧ್ಯಯನಗಳು ಸೀಮಿತ ದೇಶಗಳಿಗೆ ಮಾತ್ರ ಅನ್ವಯವಾಗಿದ್ದು. ಡೇಟಾ ಕೊರತೆ ಹಾಗೂ ನಿಖರತೆ ಸವಾಲುಗಳನ್ನು ಎದುರಿಸುತ್ತಿದೆ. ಹೀಗಾಗಿ ಸಮಸ್ಯೆಗೆ ಪರಿಹಾರವೂ ಸುಲಭವಲ್ಲ ಎಂದಿದೆ

2023ರಲ್ಲಿ ಜಾಗತಿಕ ವಯಸ್ಸು-ಪ್ರಮಾಣೀಕೃತ ಲೈಂಗಿಕ ದೌರ್ಜನ್ಯದ (SVAC) ವ್ಯಾಪ್ತಿಯು ಮಹಿಳೆಯರಲ್ಲಿ 18.9% ಮತ್ತು ಪುರುಷರಲ್ಲಿ 14.8% ಇದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಸಂಶೋಧಕರು, ದೌರ್ಜನ್ಯದ ಕುರಿತು ಡೇಟಾ ಕೊರತೆ ಇರುವುದನ್ನು ಹೇಳಿದ್ದು, ಇದಕ್ಕಾಗಿ ವಿಸ್ತೃತ ಸಮೀಕ್ಷೆಗಳು ಮತ್ತು ನಿಗಾ ವ್ಯವಸ್ಥೆ ಅಗತ್ಯ ಎಂದು ಒತ್ತಿ ಹೇಳಿದ್ದಾರೆ.

ಲೈಂಗಿಕ ದೌರ್ಜನ್ಯದಿಂದ ಬದುಕುಳಿದವರಿಗೆ ಜೀವನಪೂರ್ತಿ ಬೆಂಬಲ ನೀಡಲು ಹೆಚ್ಚಿನ ಸೇವೆಗಳು ಮತ್ತು ವ್ಯವಸ್ಥೆಗಳನ್ನು ಸ್ಥಾಪಿಸಬೇಕೆಂದೂ, ಲೈಂಗಿಕ ದೌರ್ಜನ್ಯ-ಮುಕ್ತ ಬಾಲ್ಯವನ್ನು ಸೃಷ್ಟಿಸಬೇಕೆಂದೂ ಕರೆ ನೀಡಿದ್ದಾರೆ.

Read More
Next Story