Honey Rose: ನಟಿ ಹನಿ ರೋಸ್‌ ಬಗ್ಗೆ ಕಳಪೆ ಕಾಮೆಂಟ್‌; ಒಬ್ಬನ ಸೆರೆ; 30 ಮಂದಿ ವಿರುದ್ಧ ಕೇಸ್‌
x
ನಟಿ ಹನಿ ರೋಸ್‌.

Honey Rose: ನಟಿ ಹನಿ ರೋಸ್‌ ಬಗ್ಗೆ ಕಳಪೆ ಕಾಮೆಂಟ್‌; ಒಬ್ಬನ ಸೆರೆ; 30 ಮಂದಿ ವಿರುದ್ಧ ಕೇಸ್‌

Honey Rose : ಸೈಬರ್ ಸೆಲ್ ಬೆಂಬಲದೊಂದಿಗೆ ಆರೋಪಿಗಳನ್ನು ಗುರುತಿಸಲಾಗುವುದು ಮತ್ತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಮಲಯಾಳಂ ನಟಿ ಹನಿ ರೋಸ್ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಸೋಮವಾರ ಬಂಧಿಸಲಾಗಿದೆ. ಇದೇ ಪ್ರಕರಣದಲ್ಲಿ ಕನಿಷ್ಠ 30 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತನನ್ನು ಸಮೀಪದ ಪನಂಗಾಡು ನಿವಾಸಿ ಶಾಜಿ (60) ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ನಟಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದ ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ ಎಂದು ಕೊಚ್ಚಿ ಕೇಂದ್ರ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಐಟಿ ಕಾಯ್ದೆಯ ಸೆಕ್ಷನ್ 75 ಮತ್ತು ಸೆಕ್ಷನ್ 67 ಸೇರಿದಂತೆ ಬಿಎನ್ಎಸ್‌ನ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಿಎನ್ಎಸ್ 75 ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ್ದು. ಐಟಿ ಕಾಯ್ದೆಯ ಸೆಕ್ಷನ್ 67 ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಅಶ್ಲೀಲ ವಿಷಯ ಪ್ರಕಟಿಸುವ ಅಥವಾ ಪ್ರಸಾರ ಮಾಡುವ ಆರೋಪದ್ದಾಗಿದೆ.

ಸೈಬರ್ ಸೆಲ್ ಬೆಂಬಲದೊಂದಿಗೆ ಆರೋಪಿಗಳನ್ನು ಗುರುತಿಸಲಾಗುವುದು ಮತ್ತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಟಿಯಿಂದ ದೂರು

ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಒಬ್ಬ ಲೈಂಗಿಕವಾಗಿ ಅನುಚಿತ ಹೇಳಿಕೆಗಳನ್ನು ನೀಡಿದ್ದಾನೆ ಎಂದು ಆರೋಪಿಸಿ ನಟಿ ಫೇಸ್ಬುಕ್ ಪೋಸ್ಟ್ ಹಾಕಿದ ಒಂದು ದಿನದ ನಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ನಿರ್ದಿಷ್ಟ ಪೋಸ್ಟ್ ಕೆಳಗೆ ಹಲವಾರು ಜನರು ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ.

ಆ ವ್ಯಕ್ತಿ ಆರಂಭದಲ್ಲಿ ತನ್ನನ್ನು ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ. ಆ ಆಹ್ವಾನವನ್ನು ಸ್ವೀಕರಿಸಿ ಎಂದು ನಟಿ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ. ನಂತರದ ಆಹ್ವಾನಗಳನ್ನು ನಿರಾಕರಿಸಿದ ನಂತರ ಆ ವ್ಯಕ್ತಿಯು ಪ್ರತೀಕಾರದ ರೂಪವಾಗಿ ತನ್ನನ್ನು ಅವಮಾನಿಸಲು ಪ್ರಾರಂಭಿಸಿದ್ದಾನೆ ಎಂದು ನಟಿ ಆರೋಪಿಸಿದ್ದಾಳೆ.

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತನ್ನ ಉಡುಗೆ ತೊಡುಗೆಯ ಬಗ್ಗೆ ಆಕ್ಷೇಪಾರ್ಹ ಟೀಕೆಗಳನ್ನು ಮಾಡುವವರ ವಿರುದ್ಧ ರೋಸ್ ಸೋಮವಾರ ಬೇಸರ ವ್ಯಕ್ತಪಡಿಸಿದ್ದರು,.

"ಭಾರತೀಯ ಕಾನೂನು ವ್ಯವಸ್ಥೆ ಅನುಮತಿಸದ ಯಾವುದೇ ಉಡುಪನ್ನು ಧರಿಸಿ ನಾನು ಎಂದಿಗೂ ಸಾರ್ವಜನಿಕ ವೇದಿಕೆಗಳಲ್ಲಿ ಹೊರಬಂದಿಲ್ಲ" ಎಂದು ಅವರು ಫೇಸ್ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

ನಟಿಯಾಗಿ ತನ್ನ ಕೆಲಸದ ಭಾಗವಾಗಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಹೇಳಿಕೊಂಡಿರುವ ರೋಸ್, ಡ್ರೆಸ್ಸಿಂಗ್ ಶೈಲಿಯ ವಿರುದ್ಧ ಯಾವುದೇ ಟೀಕೆಗಳಿಗೆ ಸಮಂಜಸವಾದ ಉತ್ತರವಿರಬೇಖು ಎಂದು ಹೇಳಿದ್ದರು.

ಹನಿ ರೋಸ್ ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬೆರಳೆಣಿಕೆಯಷ್ಟು ಚಲನಚಿತ್ರಗಳಲ್ಲಿ ಪಾತ್ರ ಮಾಡಿದ್ದಾರೆ.

Read More
Next Story