ಐಪಿಎಲ್‌ 2024: ಫೈನಲ್‌ ತಲುಪಿದ ಕೆಕೆಆರ್‌
x

ಐಪಿಎಲ್‌ 2024: ಫೈನಲ್‌ ತಲುಪಿದ ಕೆಕೆಆರ್‌

ಎಸ್‌ಆರ್‌ಎಚ್‌ ಮೇಲೆ ಅಮೋಘ ಜಯ


ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎಂಟು ವಿಕೆಟ್‌ಗಳ ಗೆಲುವು ಗಳಿಸಿದ ಕೋಲ್ಕತ್ತಾ ನೈಟ್ ರೈಡರ್ಸ್‌ ಫೈನಲ್‌ ತಲುಪಿದೆ.

ಮಿಚೆಲ್ ಸ್ಟಾರ್ಕ್‌ ಪವರ್‌ಪ್ಲೇಯಲ್ಲಿ ಎಸ್‌ಆರ್‌ಎಚ್‌ನ ಅಪಾಯಕಾರಿ ಬ್ಯಾಟಿಂಗ್‌ನ ಬೆನ್ನು ಮುರಿದು, ಮೂರು ವಿಕೆಟ್‌ ಗಳಿಸಿದರು. ಹೈದರಾಬಾದ್‌ 19.3 ಓವರ್‌ಗಳಲ್ಲಿ ಕೇವಲ 159 ರನ್‌ಗೆ ಔಟಾಯಿತು. ರಾಹು ಲ್ ತ್ರಿಪಾಠಿ 55 ರನ್ ಗಳಿಸಿದರು; ಹೆನ್ರಿಚ್ ಕ್ಲಾಸೆನ್ (32) ಮತ್ತು ಪ್ಯಾಟ್ ಕಮ್ಮಿನ್ಸ್ (30) ಜೊತೆ ನೀಡಿದರು.

ತೀವ್ರವಾದ ಉಷ್ಣ ವಾತಾವರಣದಲ್ಲಿ ನಾಯಕ ಶ್ರೇಯಸ್ ಅಯ್ಯರ್ (24 ಚೆಂಡು, ಔಟಾಗದೆ 58) ಮತ್ತು ವೆಂಕಟೇಶ್ ಅಯ್ಯರ್ (ಔಟಾಗದೆ 51) ಪ್ರಯತ್ನದಿಂದ ಕೆಕೆಆರ್ ಕೇವಲ 13.4 ಓವರ್‌ಗಳಲ್ಲಿ 160 ರನ್‌ ಗುರಿ ಮುಟ್ಟಿತು.

ಕೆಕೆಆರ್ 4ನೇ ಫೈನಲ್: ಭಾನುವಾರ ಚೆನ್ನೈನಲ್ಲಿ ಕೆಕೆಆರ್ ನಾಲ್ಕನೇ ಐಪಿಎಲ್ ಫೈನಲ್ ಆಡಲಿದೆ. ಲೀಗ್ ಹಂತದ ಅಂತಿಮ ದಿನದಂದು ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದ್ದ ಎಸ್‌ಆರ್‌ಎಚ್, ಮೇ 24 ರಂದು ನಡೆಯಲಿರುವ ಕ್ವಾಲಿಫೈಯರ್ 2 ರಲ್ಲಿ ಆಡಲು ಚೆನ್ನೈಗೆ ತೆರಳಲಿದೆ. ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಎಲಿಮಿನೇಟರ್ ಪಂದ್ಯದ ವಿಜೇತರನ್ನು ಪ್ಯಾಟ್ ಕಮ್ಮಿನ್ಸ್ ನೇತೃತ್ವದ ತಂಡ ಎದುರಿಸಲಿದೆ.

ಋತುವಿನ‌ ಮೊದಲ ಪಂದ್ಯದಲ್ಲಿ ರೆಹಮಾನುಲ್ಲಾ ಗುರ್ಬಾಜ್ (14 ಎಸೆತ 23), ವಿಕೆಟ್ ಹಿಂದೆ ಎರಡು ನಿರ್ಣಾಯಕ ಕ್ಯಾಚ್‌ ಹಿಡಿದರು. ಸುನಿಲ್‌ ನರೇನ್‌(21) ಅವರ ಬಳಿಕ ಜತೆಯಾದ ಶ್ರೇಯಸ್ ಮತ್ತು ವೆಂಕಟೇಶ್ ಜೋಡಿ ಮೂರನೇ ವಿಕೆಟ್‌ಗೆ 97 ರನ್‌ಗಳ ಜೊತೆಯಾಟ ಆಡಿತು. 10ನೇ ಓವರ್‌ನಲ್ಲಿ ಶ್ರೇಯಸ್‌ ಗೆ ಜೀವದಾನ ಸಿಕ್ಕಿತು. 11 ನೇ ಓವರ್‌ನಲ್ಲಿ ಟಿ. ನಟರಾಜನ್‌ ಕ್ಯಾಚ್ ಕೈಚೆಲ್ಲಿದರು. ಕೆಕೆಆರ್‌ ನಾಯಕನಿಗೆ ಮತ್ತೊಂದು ಜೀವದಾನ ನೀಡಿತು.

ವೆಂಕಟೇಶ್ ದಾಳಿ: ಶ್ರೇಯಸ್ ಚೆಂಡನ್ನು ಅಂಕಣದ ಸುತ್ತ ಹೊಡೆಯುತ್ತಿದ್ದರೆ, ವೆಂಕಟೇಶ್ ಅವರು 28 ಎಸೆತಗಳಲ್ಲಿಅರ್ಧ ಶತಕ ಪೂರ್ಣಗೊಳಿಸಿದರು. 28 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ 51 ರನ್ ಗಳಿಸಿ ಅಜೇಯರಾಗಿ ಉಳಿದರು. ಬೌಲರ್‌ ಸ್ಟಾರ್ಕ್ ವೇಗ ಮತ್ತು ಸ್ವಿಂಗ್ ಮಾಡುವ ಮೂಲಕ ವಿಕೆಟ್‌ ಪಡೆದರು. ಎರಡನೇ ಎಸೆತದಲ್ಲಿ ಹೆಡ್‌ ಅವರ ಸ್ಟಂಪ್‌ ಉರುಳಿಸಿದರು. ಐಪಿಎಲ್‌ನಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಹೆಡ್, ಸ್ಟಾರ್ಕ್‌ ಅವರ ಚೆಂಡಿಗೆ ಬಲಿಯಾದರು. ನಿತೀಶ್ ರೆಡ್ಡಿ (9) ಮತ್ತು ಶಹಬಾಜ್ ಅಹ್ಮದ್ (0) ಅವರ ವಿಕೆಟ್‌ ಉರುಳಿಸಿದರು.

ಎಡಗೈ ಆಟಗಾರ ಅಭಿಷೇಕ್ ಶರ್ಮಾ ಕೂಡ ವಿಫಲವಾದರು. ಈ ಋತುವಿನಲ್ಲಿ ಉತ್ತಮವಾಗಿ ಆಟವಾಡಿದ್ದ ಅಭಿಷೇಕ್‌, ವೈಭವ್ ಅರೋರಾ ಬೌಲಿಂಗಿನಲ್ಲಿ ಆಂಡ್ರೆ ರಸೆಲ್ ಗೆ ಕ್ಯಾಚ್‌ ನೀಡಿ ಪೆವಿಲಿಯನ್‌ ಗೆ ತೆರಳಿದರು.

Read More
Next Story