ಬೇಲೂರಿನಿಂದ ಮೂಡಿಗೆರೆಗೆ ಬಂದ ಕಾಡಾನೆಗಳು; ಗ್ರಾಮಸ್ಥರಿಗೆ ಅಲರ್ಟ್
x

ಗ್ರಾಮಗಳ ಬಳಿಯೇ ಕಾಡಾನೆಗಳ ಸಂಚಾರ; ಅರಣ್ಯ ಇಲಾಖೆಯಿಂದ ಎಚ್ಚರಿಕೆ

ಬೇಲೂರಿನಿಂದ ಮೂಡಿಗೆರೆಗೆ ಬಂದ ಕಾಡಾನೆಗಳು; ಗ್ರಾಮಸ್ಥರಿಗೆ ಅಲರ್ಟ್

ಮೂಡಿಗೆರೆ ತಾಲೂಕಿನ ಬಾರದಹಳ್ಳಿ ಗ್ರಾಮದ ಸುತ್ತಮುತ್ತ ಕಾಡಾನೆಗಳು ಸಂಚರಿಸುತ್ತಿವೆ. ಅಲ್ಲದೆ, ತುದಿಯಾಲ, ಹೊರಟ್ಟಿ, ನಂದೀಪುರ ಹಾಗೂ ಮೂಡಸಸಿ ಗ್ರಾಮಗಳ ವ್ಯಾಪ್ತಿಯಲ್ಲೂ ಕಾಡಾನೆಗಳ ಓಡಾಟ ಕಂಡುಬಂದಿದೆ.


Click the Play button to hear this message in audio format

ಬೇಲೂರು ಕಡೆಯಿಂದ ಮೂಡಿಗೆರೆ ತಾಲೂಕಿನತ್ತ ಕಾಡಾನೆಗಳ ಸಂಚಾರ ಹೆಚ್ಚಾಗಿದ್ದು, ತಾಲೂಕಿನ ಹಲವು ಗ್ರಾಮಗಳ ಸುತ್ತಮುತ್ತ ಆನೆಗಳು ಓಡಾಡುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕಾಡಾನೆಗಳು ಯಾವಾಗ ಬೇಕಾದರೂ ಗ್ರಾಮಗಳ ಸಮೀಪಕ್ಕೆ ಬರುವ ಸಾಧ್ಯತೆ ಇರುವುದರಿಂದ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಹಲವು ಗ್ರಾಮಗಳ ಸುತ್ತ ಕಾಡಾನೆಗಳ ಓಡಾಟ

ಮೂಡಿಗೆರೆ ತಾಲೂಕಿನ ಬಾರದಹಳ್ಳಿ ಗ್ರಾಮದ ಸುತ್ತಮುತ್ತ ಕಾಡಾನೆಗಳು ಸಂಚರಿಸುತ್ತಿವೆ. ಅಲ್ಲದೆ, ತುದಿಯಾಲ, ಹೊರಟ್ಟಿ, ನಂದೀಪುರ ಹಾಗೂ ಮೂಡಸಸಿ ಗ್ರಾಮಗಳ ವ್ಯಾಪ್ತಿಯಲ್ಲೂ ಕಾಡಾನೆಗಳ ಓಡಾಟ ಕಂಡುಬಂದಿದೆ. ಹೀಗಾಗಿ ಈ ಭಾಗದ ಜನರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

ತೋಟದ ಕೆಲಸಕ್ಕೆ ತೆರಳದಂತೆ ಸೂಚನೆ

ಕಾಡಾನೆಗಳ ಸಂಚಾರ ಹೆಚ್ಚಿರುವ ಹಿನ್ನೆಲೆಯಲ್ಲಿ ತೋಟದ ಮಾಲೀಕರು ಹಾಗೂ ಕಾರ್ಮಿಕರು ಸದ್ಯಕ್ಕೆ ತೋಟದ ಕೆಲಸಗಳಿಗೆ ತೆರಳದಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ. ಕಾಡಾನೆಗಳು ಗುಂಪಿನಲ್ಲಿದ್ದಾಗ ಸಾಮಾನ್ಯವಾಗಿ ದಾಳಿ ಮಾಡುವ ಸಾಧ್ಯತೆ ಕಡಿಮೆ ಇದ್ದರೂ, ಅವುಗಳನ್ನು ಕೆರಳಿಸಿದರೆ ಅಪಾಯ ಎದುರಾಗಬಹುದು ಎಂದು ಎಚ್ಚರಿಸಿದೆ.

ಪಟಾಕಿ ಸಿಡಿಸದಂತೆ ಅರಣ್ಯ ಇಲಾಖೆ ಮನವಿ

ಕಾಡಾನೆಗಳು ಸಂಚರಿಸುವ ಪ್ರದೇಶಗಳಲ್ಲಿ ಪಟಾಕಿ ಸಿಡಿಸುವುದು, ಕಲ್ಲು ತೂರುವುದು ಹಾಗೂ ಕೋಲಿನಿಂದ ಹೊಡೆಯುವಂತಹ ಕೃತ್ಯಗಳನ್ನು ಮಾಡಬಾರದು ಎಂದು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಆನೆಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಅವುಗಳ ಚಲನವಲನಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಪಡಿಸಬಾರದು ಎಂದು ಮನವಿ ಮಾಡಲಾಗಿದೆ.

ಜಿಲ್ಲಾ ಆನೆ ಕಾರ್ಯಪಡೆ ಹಾಗೂ ಮೂಡಿಗೆರೆ ಅರಣ್ಯ ಇಲಾಖೆ ವತಿಯಿಂದ ಈ ಎಚ್ಚರಿಕೆ ನೀಡಲಾಗಿದ್ದು, ಕಾಡಾನೆಗಳ ಸಂಚಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.

Read More
Next Story