x

ಧರ್ಮಸ್ಥಳ ಸೌಜನ್ಯ ಪ್ರಕರಣದ ಆರೋಪಿಗಳು ಒಂದು ವರ್ಷದಲ್ಲಿ ಜೈಲಿಗೆ: ಹೋರಾಟಗಾರ ದಿನೇಶ್‌ ಗಾಣಿಗ ಹೇಳಿಕೆ

ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿರುವ ಬೆನ್ನಲ್ಲೇ ಸೌಜನ್ಯಪರ ಹೋರಾಟಗಾರ ದಿನೇಶ್ ಗಾಣಿಗ ಮಾತನಾಡಿದ್ದಾರೆ.


Click the Play button to hear this message in audio format

14 ವರ್ಷಗಳಿಂದ ಬಗೆಹರಿಯದೆ ಉಳಿದಿದ್ದ ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಹೊಸ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಬೇಕು. ಈ ಹಿಂದೆ ತನಿಖೆ ನಡೆಸಿದ್ದ ಪೊಲೀಸ್, ಸಿಐಡಿ ಹಾಗೂ ಸಿಬಿಐ ಅಧಿಕಾರಿಗಳನ್ನು ತನಿಖಾ ತಂಡದಲ್ಲಿ ಸೇರಿಸಬಾರದು ಎಂದು ಸೂಚಿಸಿದೆ. ಸುಪ್ರೀಂಕೋರ್ಟಿನ ಆದೇಶದ ಬಗ್ಗೆ ಸೌಜನ್ಯಪರ ಹೋರಾಟಗಾರ ದಿನೇಶ್ ಗಾಣಿಗ ಅವರು ದ 'ಫೆಡರಲ್ ಕರ್ನಾಟಕ' ಸಂದರ್ಶನದಲ್ಲಿ ಹಲವು ಪ್ರಮುಖ ವಿಚಾರಗಳನ್ನು ಹೇಳಿದ್ದಾರೆ.

ಸೌಜನ್ಯ ಪ್ರಕರಣದಲ್ಲಿ ಮರು ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿರುವುದು ಬಹಳ ಸಂತೋಷತಂದಿದೆ ಎಂದು ಹೇಳಿದರು.ಸೌಜನ್ಯ ಪ್ರಕರಣದಲ್ಲಿ ಸಿಬಿಐ ನಡೆಸಿದ ತನಿಖೆ ಯಾವ ರೀತಿಯಿತ್ತು ಎಂದು ಸುಪ್ರೀಂ ಕೋರ್ಟ್ ಹೇಳಿದೆ ಇದರಿಂದಲೇ ಗೊತ್ತಾಗುತ್ತದೆ ಸತ್ಯ ಏನಿದೆ ಎಂದು ಅಭಿಪ್ರಾಯಿಸಿದರು.

ಸಾಮಾನ್ಯವಾಗಿ ಪೊಲೀಸರು ನಡೆಸುವ ತನಿಖೆಯನ್ನು ಪ್ರಶ್ನಿಸಿ ಸಿಬಿಐ ತನಿಖೆಗೆ ಕೇಳುತ್ತಾರೆ ಆದರೆ ಸೌಜನ್ಯ ಪ್ರಕರಣದಲ್ಲಿ ಸಿಬಿಐ ನಡೆಸಿದ ತನಿಖೆಯನ್ನು ಸುಪ್ರೀಂಕೋರ್ಟ್ ಕಳಪೆ ಎಂದು ಹೇಳಿದೆ ಎಂದು ತಿಳಿಸಿದರು. ಸೌಜನ್ಯ ತಾಯಿಯನ್ನು ಸಾಕ್ಷಿಯನ್ನಾಗಿ ಸಿಬಿಐನವರು ಪರಿಗಣಿಸಿಲ್ಲ ಸರಿಯಾದ ಸಾಕ್ಷಿಗಳನ್ನು ವಿಚಾರಣೆ ನಡೆಸಿಲ್ಲ ಅದಕ್ಕೆ ಸೌಜನ್ಯ ತಾಯಿ ಮತ್ತು ಹೋರಾಟಗಾರರು ಮರು ತನಿಖೆಗಾಗಿ ಆಗ್ರಹಿಸಿ ಸುಪ್ರೀಂಕೋರ್ಟಿಗೆ ಅರ್ಜಿಸಲ್ಲಿಸಲಾಗಿತ್ತು ಎಂದರು.

ನಮ್ಮ ಅಭಿಪ್ರಾಯ ನಾವು ಕೊಟ್ಟಿರುವ ಸಾಕ್ಷಿಗಳ ಆಧಾರದ ಮೇಲೆ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ ಎಂದು ಹೇಳಿದರು. ಸೌಜನ್ಯ ಪ್ರಕರಣ ಮರು ತನಿಖೆಯಾಗುತ್ತಿರುವ ಹಿನ್ನೆಲೆಯಲ್ಲಿ ಈಗ ನ್ಯಾಯ ಸಿಗಲಿದೆ ಒಂದು ವರ್ಷದಲ್ಲಿ ಕೆಲವರು ಜೈಲಿಗೆ ಹೋಗುತ್ತಾರೆ ಎಂದು ಹೇಳಿದರು.

ಎಸ್ ಐಟಿ ತನಿಖೆಯ ವೇಳೆ ನಮ್ಮಲ್ಲಿರುವ ಸಾಕ್ಷಿಗಳನ್ನು ಕೊಡುತ್ತೇವೆ ಏನು ಸಾಕ್ಷಿಗಳು ಅಂತಾ ಈಗ ಹೇಳಲ್ಲ ಎಂದು ಹೇಳಿದರು. ನಾವು ನ್ಯಾಯಕ್ಕೆ ಆಗ್ರಹಿಸಿದಾಗ ಷಡ್ಯಂತ್ರ ಅಂತಾ ಹೇಳಿ ಬಿಜೆಪಿ ಕಾಂಗ್ರೆಸ್ ನಾಯಕರು ಧರ್ಮಸ್ಥಳ ಚಲೋ ಮಾಡಿದರು ಈಗ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು

ಬಿಜೆಪಿ ಶಾಸಕರು ಸೌಜನ್ಯ ಪ್ರಕರಣದ ಮರು ತನಿಖೆ ಬಗ್ಗೆ ಮಾತನಾಡಬೇಕು ಎಲ್ಲಾ ಸತ್ಯಾಂಶ ಗೊತ್ತಾದಾಗ ಜನ ಪಾಠ ಕಲಿಸುತ್ತಾರೆ ಎಂದು ಹೇಳಿದರು. ಹಿಂದಿನ ಇತಿಹಾಸಗಳನ್ನು ನೋಡಿದರೆ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಸಿಕ್ಕಿಲ್ಲ ಎಂದರೆ ಅವರ ಆತ್ಮಗಳೇ ನ್ಯಾಯ ದೊರಕಿಸಿಕೊಂಡ ಕಥೆಗಳಿವೆ. ಈಗಲೂ ಸೌಜನ್ಯ ಆತ್ಮವೇ ನ್ಯಾಯ ಕೊಡಿಸಿಕೊಳ್ಳುತ್ತಿದೆ ಎಂದು ಅಭಿಪ್ರಾಯ ಪಟ್ಟರು.

14 ವರ್ಷಗಳ ಹೋರಾಟ ಈಗ ತಾರ್ಕಿಕ ಅಂತ್ಯಕ್ಕೆ ಬಂದಿದೆ ಈಗ ಎಸ್ ಐಟಿಯ ಮರು ತನಿಖೆಯೇ ಅಂತಿಮವಾಗಲಿದೆ ಎಲ್ಲಾ ಗೊತ್ತಾಗಲಿದೆ ಎಂದು ಹೇಳಿದರು. ಈಗ ಎಸ್ ಐಟಿಯ ತನಿಖೆಯ ಬಳಿಕ ಎಲ್ಲದಕ್ಕೂ ಅಂತಿಮ ಬೀಳಲಿದೆ ಎಂದರು. ಈಗ ತನಿಖೆಯಲ್ಲಿ ನಾವು ಹೇಳುವುದು ಸುಳ್ಳಾ ಅಥವಾ ಷಡ್ಯಂತ್ರ ಎನ್ನುವವರ ಹೇಳಿಕೆಗಳು ಸುಳ್ಳಾ ಎವ್ವುವುದು ಗೊತ್ತಾಗಲಿದೆ ಎಂದರು

ತಲೆ ಬುರುಡೆ ಪ್ರಕರಣ ಬಗ್ಗೆ ಈಗಾಗಲೇ ತನಿಖೆ ನಡೆಸಿರುವ ಎಸ್ ಐಟಿ ತನಿಖಾ ವರದಿ ಸರ್ಕಾರ ಯಾಕೆ ಬಿಡುಗಡೆ ಮಾಡಿಲ್ಲ ವರದಿ ಹೊರಗಡೆ ಬಂದರೆ ಸರ್ಕಾರ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಹೇಳಿದರು. ತ. ಸೌಜನ್ಯ ಪ್ರಕರಣದ ಮರು ತನಿಖೆಯ ನಂತರ ಬಹುತೇಕ ಬುರುಡೆ ಪತ್ತೆ ಪ್ರಕರಣದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದರು.


Read More
Next Story