ಸೌಜನ್ಯ ಪ್ರಕರಣ: ಹೋರಾಟಗಾರರ ವಿರುದ್ಧ ವಾಯ್ಸ್ ಆಪ್ ಪಬ್ಲಿಕ್ ಗಂಭೀರ ಆರೋಪ
ಸೌಜನ್ಯ ಸಾವು ಪ್ರಕರಣದ ಮರುತನಿಖೆ ಆರಂಭವಾಗಿರುವ ಬೆನ್ನಲ್ಲೇ ಹಿರಿಯ ವಕೀಲ ಅಮೃತೇಶ್ ಎಸ್.ಪಿ. ಅವರು ಹೋರಾಟಗಾರರ ವಿರುದ್ಧ ಆರೋಪ ಮಾಡಿದ್ದಾರೆ. ಸಂತೋಷ್ ರಾವ್ ವಿಚಾರಣೆ, ಎಸ್ಐಟಿ ತನಿಖೆ ಮತ್ತು ತಲೆಬುರುಡೆ ವರದಿ ಬಹಿರಂಗಕ್ಕೆ ಆಗ್ರಹಿಸಿದ್ದಾರೆ.
ಧರ್ಮಸ್ಥಳದ ಸೌಜನ್ಯ ಸಾವು ಪ್ರಕರಣ ಮರು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಆದೇಶಿಸಿದ್ದು ಈ ಬಗ್ಗೆ ತನಿಖೆ ಆರಂಭವಾಗಿದೆ. ಇದರ ಬೆನ್ನಲ್ಲೇ ವಾಯ್ಸ್ ಆಪ್ ಪಬ್ಲಿಕ್ ನಿಂದ ಹಿರಿಯ ವಕೀಲ ಅಮೃತೇಶ್ ಎಸ್.ಪಿ. ಅವರು ಸೌಜನ್ಯ ಪರ ಹೋರಾಟಗಾರರ ಮೇಲೆ ಕೆಲವೊಂದು ಗಂಭೀರ ಆರೋಪ ಮಾಡಿದ್ದಾರೆ.
ದ "ಫೆಡರಲ್ ಕರ್ನಾಟಕ"ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅಮೃತೇಶ್ ಅವರು ಹಲವು ವಿಚಾರಗಳನ್ನು ಹೇಳಿದ್ದಾರೆ. ಸೌಜನ್ಯಪರ ಹೋರಾಟಗಾರರಲ್ಲಿ ಕೆಲವರು ಅಡ್ಡದಾರಿ ಹಿಡಿದಿದ್ದು ದುಡ್ಡು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ನಾನು ಕೂಡ ಸೌಜನ್ಯಗೆ ನ್ಯಾಯ ಸಿಗಬೇಕು ಎಂದು ಹೇಳುವವನು ಆದರೆ ಅದರ ಪರ ಹೋರಾಟ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಕೆಲವರು ಬೇರೆ ಬೇರೆ ಸಂಸ್ಥೆಗಳಿಂದ ಹಣ ಪಡೆದಿದ್ದಾರೆ ಎಂದು ಆರೋಪಿಸಿದರು. ಬೇಕಾದರೆ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲಿ ಎಂದು ಸವಾಲು ಹಾಕಿದರು. ಸೌಜನ್ಯ ಸಾವಿನ ಬಗ್ಗೆ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಎಸ್ ಐಟಿ ರಚನೆಯಾಗಿದೆ. ಆದರೆ ಎಸ್ ಐಟಿ ಸಂತೋಷ್ ರಾವ್ ರನ್ನು ವಿಚಾರಣೆಗೆ ಒಳಪಡಿಸಬೇಕು ಇಲ್ಲದಿದ್ದರೆ ಸತ್ಯಾಂಶಹೊರಬರಲ್ಲ ಎಂದು ಹೇಳಿದರು
ಸುಪ್ರೀಂಕೋರ್ಟಿಗೂ ಕೂಡ ಈ ವಿಚಾರದಲ್ಲಿ ಕೆಲವು ತಪ್ಪು ಮಾಹಿತಿ ನೀಡಲಾಗಿದೆ. ಈಗ ಎಸ್ ಐಟಿಯವರು ಸಂತೋಷ್ ರಾವ್ ತನಿಖೆಗೆ ಒಳಪಡಿಸಲು ಅವಕಾಶ ಕೋರಿ ಸುಪ್ರೀಂ ಕೋರ್ಟಿಗೆ ಅರ್ಜಿಸಲ್ಲಿಸಬೇಕು ಎಂದು ಹೇಳಿದರು.
ನಾನು ಕೂಡ ಎಸ್ ಐಟಿಗೆ ಇಂತಹವರನ್ನು ತನಿಖೆ ಮಾಡಿ ಎಂದು ಮನವಿ ನೀಡುತ್ತೇನೆ ಎಂದು ಹೇಳಿದರು. ಸೌಜನ್ಯ ಪ್ರಕರಣ ಇಟ್ಟುಕೊಂಡು ಕ್ಷೇತ್ರದ ಹೆಸರನ್ನು ಹಾಳು ಮಾಡಲು ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದರು.ತಲೆಬುರುಡೆ ಬಗ್ಗೆ ತನಿಖೆ ನಡೆಸಿರುವ ಎಸ್ ಐಟಿ ವರದಿಯನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು. ಈ ವರದಿ ಬಹಿರಂಗವಾದರೆ ಬುರುಡೆಗ್ಯಾಂಗ್ ಗೆ ಸಂಕಷ್ಟ ತರಲಿದೆ ಎಂದು ಹೇಳಿದರು.
