ಕನ್ನಡಿಗರ ನೆರವಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದಿಂದ ಸಹಾಯವಾಣಿ ಸ್ಥಾಪನೆ
x

ಕನ್ನಡಿಗರ ನೆರವಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದಿಂದ ಸಹಾಯವಾಣಿ ಸ್ಥಾಪನೆ

ಯುದ್ಧದ ಭೀತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ನೆರವಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತವು ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಪ್ರಕಟಿಸಿದೆ.


ಮಧ್ಯಪ್ರಾಚ್ಯ ಮತ್ತು ಕೊಲ್ಲಿ ದೇಶಗಳಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯಿಂದಾಗಿ ಅಲ್ಲಿ ನೆಲೆಸಿರುವ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿರುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ತುರ್ತು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ.

ಯುದ್ಧ ಪೀಡಿತ ದೇಶಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯಾರಾದರೂ ಕನ್ನಡಿಗರು ಸಿಲುಕಿಕೊಂಡಿದ್ದರೆ ಅಥವಾ ಅವರ ಬಗ್ಗೆ ಮಾಹಿತಿ ಲಭ್ಯವಿದ್ದರೆ, ತಕ್ಷಣವೇ ಆಯಾ ದೇಶಗಳ ಕಂಟ್ರೋಲ್ ರೂಂ ಅಥವಾ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ನೀಡುವಂತೆ ಕೋರಲಾಗಿದೆ.

ವಿವಿಧ ದೇಶಗಳ ತುರ್ತು ಸಹಾಯವಾಣಿ ಸಂಖ್ಯೆಗಳಿಗೆ ಸಂಕಷ್ಟದಲ್ಲಿರುವವರು ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಕತಾರ್ (Qatar): 00974-55647502

ಬಹ್ರೇನ್ (Bahrain): 00973-39418071

ಜೋರ್ಡಾನ್ (Jordan): 00962-770 422 276

ಒಮಾನ್ (Oman): ಟೋಲ್ ಫ್ರೀ: 8007 1234 | ವಾಟ್ಸಾಪ್: +968 9828 2270

ಇರಾಕ್ (Iraq): +964 771 651 1185 (ಇಂಗ್ಲಿಷ್ ಮತ್ತು ಹಿಂದಿ), +964 770 444 4899 (ಅರೇಬಿಕ್)

ಕುವೈತ್ (Kuwait): +965 65501946

ಪ್ಯಾಲೆಸ್ತೀನ್ (Palestine): +970 592916418

ಇಲ್ಲವೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ಥಳೀಯ ಸಹಾಯವಾಣಿಯಾದ ದೂರವಾಣಿ ಸಂಖ್ಯೆ 080-28388005 ಗೆ ಕರೆ ಮಾಡಬಹುದು

Read More
Next Story