ಖಮೇನಿ ಹತ್ಯೆ: ಅಲಿಪುರದಲ್ಲಿ ಇಂದು ಬೃಹತ್ ಶೋಕಾಚರಣೆ ಮೆರವಣಿಗೆ
x
ಅಲಿಪುರದಲ್ಲಿ ಫಾತಿಮಿಯೂನ್‌ ಯುವಕರ ಬಳಗದವರು ಶನಿವಾರ ಶೋಕ ಮೆರವಣಿಗೆ ನಡೆಸಿದರು.

ಖಮೇನಿ ಹತ್ಯೆ: ಅಲಿಪುರದಲ್ಲಿ ಇಂದು ಬೃಹತ್ ಶೋಕಾಚರಣೆ ಮೆರವಣಿಗೆ

ಶೋಕಾಚರಣೆ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಲಿಪುರದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಒದಗಿಸಲಾಗಿದೆ.


ಇರಾನ್ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲಿಪುರದಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ಬೃಹತ್‌ ಶೋಕಾಚರಣೆ ಮೆರವಣಿಗೆ ಆಯೋಜಿಸಲಾಗಿದೆ.

ಅಲಿಪುರದ ಫಾತಿಮಯೂನ್ ಯುವಕರ ಬಳಗದ ವತಿಯಿಂದ ಶೊಕಾಚರಣೆ ಮೆರವಣಿಗೆ ನಡೆಯಲಿದೆ. ಅಲಿಪುರದಲ್ಲಿ ಶಿಯಾ ಮುಸ್ಲಿಮರು ಸುಮಾರು 20 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇರಾನ್ ಧರ್ಮಗುರು ಖಮೇನಿ ಅವರ ಅನುಯಾಯಿಗಳಾಗಿದ್ದಾರೆ. 1986 ರಲ್ಲಿ ಅಲಿಪುರಕ್ಕೆ ಆಗಮಿಸಿದ್ದ ಖಮೇನಿ ಅವರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಅವರ ಭೇಟಿಯ ಸ್ಮರಣಾರ್ಥ ಅಲಿಪುರದಲ್ಲಿ ಖಮೇನಿ ಗುರುಗಳಾದ ಖೊಮೇನಿ ಹೆಸರಿನಲ್ಲಿ ಆಸ್ಪತ್ರೆ ಸಹ ಕಟ್ಟಿಸಲಾಗಿದೆ.

ಖಮೇನಿ ಹತ್ಯೆ ಸುದ್ದಿ ತಿಳಿದ ಅಲಿಪುರ ಗ್ರಾಮಸ್ಥರು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಮೂರು ದಿನ ಶೋಕಾಚರಣೆ ಆಚರಿಸಲು ನಿರ್ಧರಿಸಿದ್ದಾರೆ. ಮಧ್ಯಪ್ರಾಚ್ಯದ ದೇಶಗಳಲ್ಲಿರುವ ಅಲಿಪುರದ ಗ್ರಾಮದ ಹಲವರು ಸುರಕ್ಷಿತವಾಗಿದ್ದು, ಯುದ್ಧ ವಿಸ್ತರಿಸುವ ಭೀತಿಯಲ್ಲಿ ತಾಯ್ನಾಡಿಗೆ ಮರಳಲು ಸಿದ್ಧತೆ ನಡೆಸಿದ್ದಾರೆ ಎಂದು ಅಲಿಪುರ ಗ್ರಾಮಸ್ಥ

ಬಿಗಿ ಪೊಲೀಸ್ ಬಂದೋಬಸ್ತ್

ಶೋಕಾಚರಣೆ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಲಿಪುರದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಒದಗಿಸಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್‌ ಚೌಕ್ಸೆ ನೇತೃತ್ವದಲ್ಲಿ ಬಂದೋಬಸ್ತ್‌ ಮಾಡಲಾಗಿದೆ. ಡಿವೈಎಸ್‌ಪಿ, ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಸುಮಾರು 100 ಕ್ಕೂ ಹೆಚ್ಚು ಪೊಲೀಸರು, ಕೆಎಸ್‌ಆರ್‌ಪಿ ಹಾಗೂ ಡಿಎಆರ್‌ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಮಧ್ಯಾಹ್ನ ಮಸೀದಿ ಆವರಣದಲ್ಲಿ ವಿಶೇಷ ಪ್ರಾರ್ಥನೆ ನಡೆಯಲಿದ್ದು, ಅಲ್ಲಿಂದ ಬೆಂಗಳೂರು ಸರ್ಕಲ್‌ವರೆಗೆ ಮೆರವಣಿಗೆ ನಡೆಯಲಿದೆ.

Read More
Next Story