ರೇಣುಕಾಸ್ವಾಮಿ ಕೇಸ್: ಪ್ರದೋಷ್ ಮಾಫಿ ಸಾಕ್ಷ್ಯ ಹೇಳಿಕೆ ಇಂದು ಮುಕ್ತಾಯವಾಗುವ ಸಾಧ್ಯತೆ
x

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಷ್ ಮಾಫಿ ಸಾಕ್ಷ್ಯ ನಾಲ್ಕನೇ ದಿನವೂ ಮುಂದುವರಿಯಲಿದೆ.

ರೇಣುಕಾಸ್ವಾಮಿ ಕೇಸ್: ಪ್ರದೋಷ್ ಮಾಫಿ ಸಾಕ್ಷ್ಯ ಹೇಳಿಕೆ ಇಂದು ಮುಕ್ತಾಯವಾಗುವ ಸಾಧ್ಯತೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಷ್ ಮಾಫಿ ಸಾಕ್ಷ್ಯ ಹೇಳಿಕೆ ನಾಲ್ಕನೇ ದಿನವಾದ ಇಂದೂ ಮುಂದುವರಿಯಲಿದೆ. ಇಂದು ಹೇಳಿಕೆ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಎವಿಡೆನ್ಸ್ ಆಕ್ಟ್ ಅರ್ಜಿಯ ವಿಚಾರಣೆಯೂ ನಡೆಯಲಿದೆ.


Click the Play button to hear this message in audio format

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಿ ನೀಡುತ್ತಿರುವ ಹೇಳಿಕೆ ಸೋಮವಾರವೂ ಮುಂದುವರಿಯಲಿದೆ. ನಾಲ್ಕನೇ ದಿನದ ವಿಚಾರಣೆ ನಡೆಯಲಿದ್ದು, ಇಂದು ಮಾಫಿ ಸಾಕ್ಷ್ಯ ದಾಖಲಿಸುವ ಪ್ರಕ್ರಿಯೆ ಬಹುತೇಕ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಮಾಫಿ ಸಾಕ್ಷ್ಯ ಹೇಳಿಕೆ ಪೂರ್ಣಗೊಂಡ ಬಳಿಕ ಪ್ರದೋಷ್‌ನ ಕ್ರಾಸ್ ಎಗ್ಸಾಮಿನೇಷನ್‌ಗೆ ದಿನಾಂಕ ನಿಗದಿಯಾಗುವ ನಿರೀಕ್ಷೆಯಿದೆ. ನ್ಯಾಯಾಲಯ ನಿಗದಿಪಡಿಸುವ ದಿನದಂದು ಆರೋಪಿಗಳ ಪರ ವಕೀಲರು ಪ್ರದೋಷ್ ಅವರನ್ನು ವಿಚಾರಣೆಗೊಳಪಡಿಸಲಿದ್ದಾರೆ.

ಎವಿಡೆನ್ಸ್ ಆಕ್ಟ್ ಅರ್ಜಿ ಕುರಿತು ಇಂದು ಆದೇಶ

ಇದೇ ವೇಳೆ, ಮಾಫಿ ಸಾಕ್ಷ್ಯದ ವೇಳೆ ನಡೆದಿರುವ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ದರ್ಶನ್ ಪರ ವಕೀಲರು ಸಲ್ಲಿಸಿರುವ ಅರ್ಜಿಯ ಬಗ್ಗೆಯೂ ಇಂದು ಆದೇಶ ಹೊರಬರುವ ಸಾಧ್ಯತೆ ಇದೆ. ಎವಿಡೆನ್ಸ್ ಆಕ್ಟ್‌ನ 137 ಮತ್ತು 138ನೇ ಸೆಕ್ಷನ್‌ಗಳನ್ನು ಉಲ್ಲೇಖಿಸಿ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.

ಪ್ರದೋಷ್ ಮಾಫಿ ಸಾಕ್ಷ್ಯ ಹೇಳಿಕೆ ದಾಖಲಿಸುವ ಸಂದರ್ಭದಲ್ಲಿ ಕೆಲವು ಮಾಹಿತಿಯನ್ನು ಹೇಳಲು ಮರೆತಿದ್ದರು ಎನ್ನಲಾಗಿದೆ. ಬಳಿಕ ಮರುದಿನ ಆ ಮಾಹಿತಿಯನ್ನು ಮತ್ತೆ ದಾಖಲಿಸಲಾಗಿತ್ತು. ಇದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರದೋಷ್‌ಗೆ ಹೊರಗಿನಿಂದ ಮಾಹಿತಿ ನೀಡಲಾಗುತ್ತಿದ್ದು, ಅದರ ಆಧಾರದಲ್ಲಿ ಅವರು ಹೇಳಿಕೆಗಳನ್ನು ಪುನರಾವರ್ತಿಸುತ್ತಿದ್ದಾರೆ ಎಂದು ದರ್ಶನ್ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು. ಈ ರೀತಿಯಾಗಿ ನಂತರ ದಾಖಲಿಸಲಾಗುತ್ತಿರುವ ಹೇಳಿಕೆಗಳನ್ನು ನ್ಯಾಯಾಲಯದ ದಾಖಲೆಗಳಲ್ಲಿ ಪರಿಗಣಿಸಬಾರದು ಎಂದು ಅವರು ಆಕ್ಷೇಪಿಸಿದ್ದರು.

ಎವಿಡೆನ್ಸ್ ಆಕ್ಟ್‌ನ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿಯ ವಿಚಾರವಾಗಿ ಬೆಂಗಳೂರಿನ 59ನೇ ಸೆಷನ್ಸ್ ಕೋರ್ಟ್ ಇಂದು ತನ್ನ ಆದೇಶ ಪ್ರಕಟಿಸುವ ನಿರೀಕ್ಷೆಯಿದೆ.

Read More
Next Story