EVM Confidence Survey Controversy: ‘Whose organization conducted the survey?’ – Minister Priyank Kharge questions
x

ಸಚಿವ ಪ್ರಿಯಾಂಕ್‌ ಖರ್ಗೆ

RSSಗೆ ಹೆದರಿದವನಲ್ಲ, ನಿಮ್ಮ ಬೆದರಿಕೆಗೆ ಹೆದರುತ್ತೇನಾ? - ಎಚ್‌ಡಿಕೆಗೆ ತಿರುಗೇಟು

ಎಚ್‌ಡಿಕೆಯವರ ಏಕವಚನ ಪ್ರಯೋಗಕ್ಕೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, "ಮರ್ಯಾದೆ ಕೊಟ್ಟು ಮಾತನಾಡುತ್ತಿದ್ದೇವೆ. ನಾವೂ ಅದೇ ಭಾಷೆಯಲ್ಲಿ ಉತ್ತರಿಸಲು ಸಿದ್ಧ ಎಂದು ವಾಗ್ದಾಳಿ ನಡೆಸಿದ್ದಾರೆ.


Click the Play button to hear this message in audio format

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅಷ್ಟೇ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. "ನನ್ನನ್ನು ಬಂಧಿಸುವ ತಾಕತ್ತು ಸರ್ಕಾರಕ್ಕಿಲ್ಲ" ಎಂಬ ಕುಮಾರಸ್ವಾಮಿಯವರ ಸವಾಲಿಗೆ ಉತ್ತರಿಸಿರುವ ಖರ್ಗೆ, "ತಪ್ಪು ಮಾಡಿದ್ದರೆ ಅರೆಸ್ಟ್ ಮಾಡೇ ಮಾಡುತ್ತೇವೆ, ನಾವೇನು ನಿಮ್ಮ ಅಪ್ಪನ ಆಸ್ತಿ ಬಗ್ಗೆ ಮಾತನಾಡುತ್ತಿಲ್ಲ, ಕಾನೂನುಬದ್ಧವಾಗಿ ನಡೆಯುತ್ತಿದ್ದೇವೆ" ಎಂದು ಗುಡುಗಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿಯವರು ಬಳಸುತ್ತಿರುವ ಭಾಷಾ ಪ್ರಯೋಗದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. "ತನಿಖೆ ಹೇಗೆ ಮಾಡಬೇಕು ಎಂದು ನಾನು ನಿಮ್ಮಿಂದ ಕಲಿಯಬೇಕಾಗಿಲ್ಲ. ರಾಜ್ಯದಲ್ಲಿ ಕಾನೂನಿನ ಆಡಳಿತವಿದೆ. ತನಿಖೆ ವೇಳೆ ಯಾರ ಹೆಸರುಗಳು ಕೇಳಿಬರುತ್ತವೆಯೋ, ಅವರನ್ನು ವಿಚಾರಣೆಗೆ ಕರೆಸುವುದು ನಮ್ಮ ಕರ್ತವ್ಯ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ನಿಮ್ಮನ್ನು ಬಂಧಿಸಲು ನಮಗೇನು ಇಷ್ಟವಿಲ್ಲ, ಆದರೆ ನೀವು ತಪ್ಪು ಮಾಡಿದ್ದರೆ ಅರೆಸ್ಟ್ ಮಾಡುವುದು ಖಚಿತ" ಎಂದು ಸ್ಪಷ್ಟಪಡಿಸಿದ್ದಾರೆ.

"ಆರ್‌ಎಸ್‌ಎಸ್‌ಗೇ ಹೆದರಿಲ್ಲ, ನಿಮಗೆ ಹೆದರುತ್ತೇನಾ?"

ಕುಮಾರಸ್ವಾಮಿಯವರ ಏಕವಚನದ ಭಾಷಾ ಪ್ರಯೋಗಕ್ಕೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, "ನಾವು ಮರ್ಯಾದೆ ಕೊಟ್ಟು ಮಾತನಾಡುತ್ತಿದ್ದೇವೆ. ನೀವು ಏಕವಚನದಲ್ಲಿ ಮಾತನಾಡಿದರೆ ನಾವೂ ಅದೇ ಭಾಷೆಯಲ್ಲಿ ಉತ್ತರಿಸಲು ಸಿದ್ಧರಿದ್ದೇವೆ. ನಾನು ಆರ್‌ಎಸ್‌ಎಸ್‌ನಂತಹ ಸಂಘಟನೆಗಳಿಗೇ ಹೆದರಿದವನಲ್ಲ, ಇನ್ನು ನಿಮ್ಮ ಬೆದರಿಕೆಗಳಿಗೆ ಹೆದರುತ್ತೇನಾ? ನಾಲಿಗೆ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡುವುದು ಕಲಿಯಿರಿ" ಎಂದು ತರಾಟೆಗೆ ತೆಗೆದುಕೊಂಡರು.ರಾಜಕೀಯ ನಾಯಕರಾಗಿ ಗೌರವಯುತವಾಗಿ ಮಾತನಾಡುವುದು ಕನಿಷ್ಠ ಸೌಜನ್ಯ. ಅದನ್ನು ಬಿಟ್ಟು, ಸರ್ಕಾರದ ಮೇಲೆ ಬಾಯಿಗೆ ಬಂದಂತೆ ಆರೋಪ ಮಾಡುವುದು, ವೈಯಕ್ತಿಕ ನಿಂದನೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಖರ್ಗೆ ತಿರುಗೇಟು ನೀಡಿದರು.

"ಗಾಳಿಯಲ್ಲಿ ಗುಂಡು ಹಾರಿಸುವುದನ್ನು ನಿಲ್ಲಿಸಿ"

ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿಯವರು ಮಾಡುತ್ತಿರುವ ಆರೋಪಗಳ ಬಗ್ಗೆ ಪ್ರಿಯಾಂಕ್ ಖರ್ಗೆ ಗಂಭೀರವಾಗಿ ಪ್ರತಿಕ್ರಿಯಿಸಿದರು. "ನಿಮ್ಮ ಬಳಿ ಮಾಹಿತಿ ಇದ್ದರೆ ಕೊಡಿ, ತನಿಖೆ ಮಾಡುತ್ತೇವೆ. ಅದನ್ನು ಬಿಟ್ಟು ಗಾಳಿಯಲ್ಲಿ ಗುಂಡು ಹಾರಿಸುತ್ತಾ ರಾಜ್ಯದ ಜನತೆಯನ್ನು ದಾರಿ ತಪ್ಪಿಸಬೇಡಿ. ನೀವು ಸುಮ್ಮನೆ ಆಕ್ರೋಶ ವ್ಯಕ್ತಪಡಿಸಿದರೆ ಕಾನೂನು ಕ್ರಮಗಳೇನೂ ಬದಲಾಗುವುದಿಲ್ಲ. ತನಿಖೆ ನಡೆಯುತ್ತಿದೆ, ತನಿಖೆಯ ಹಾದಿಯಲ್ಲಿ ಯಾರ್ಯಾರ ಹೆಸರು ಬರುತ್ತದೆಯೋ ಅವರನ್ನೆಲ್ಲಾ ಕರೆಸಿ ವಿಚಾರಣೆ ಮಾಡುವುದು ಸಹಜ ಪ್ರಕ್ರಿಯೆ. ಅದನ್ನು ಗೌರವಿಸುವುದನ್ನು ಕಲಿಯಿರಿ" ಎಂದು ಸಲಹೆ ನೀಡಿದರು.

ರಾಜ್ಯ ಸರ್ಕಾರ ಜೆಡಿಎಸ್ ನಾಯಕರ ಮೇಲೆ ವೈಯಕ್ತಿಕ ದ್ವೇಷ ಸಾಧಿಸುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ ಗೃಹ ಸಚಿವರು, "ನಾವು ಎಲ್ಲರಿಗೂ ಮರ್ಯಾದೆ ಕೊಡುತ್ತಿದ್ದೇವೆ. ಆದರೆ, ಪದೇ ಪದೇ ಸರ್ಕಾರವನ್ನೇ ಗುರಿ ಮಾಡಿಕೊಂಡು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಮಾತುಗಳನ್ನು ಆಡಿದರೆ ಸುಮ್ಮನಿರಲು ಸಾಧ್ಯವಿಲ್ಲ. ಕುಮಾರಸ್ವಾಮಿಯವರು ಕೇಂದ್ರದಲ್ಲಿ ಸಚಿವರಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅವರು ಮಾತನಾಡುವಾಗ ರಾಜ್ಯದ ಜನತೆಗೆ ಏನು ಸಂದೇಶ ಹೋಗುತ್ತದೆ ಎಂಬುದನ್ನು ಯೋಚಿಸಬೇಕು" ಎಂದರು.

ಕುಮಾರಸ್ವಾಮಿ ಮತ್ತು ಪ್ರಿಯಾಂಕ್ ಖರ್ಗೆ ನಡುವಿನ ಈ ವಾಕ್ಸಮರ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ಸಂಚಲನ ಮೂಡಿಸಿದೆ. ರಾಜ್ಯ ಸರ್ಕಾರವು ತನ್ನ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಮಟ್ಟ ಹಾಕುತ್ತಿದೆ ಎಂದು ಜೆಡಿಎಸ್ ಮತ್ತು ಬಿಜೆಪಿ ಆರೋಪಿಸುತ್ತಿದ್ದರೆ, ಕಾನೂನು ಎಲ್ಲರಿಗೂ ಸಮಾನ, ತಪ್ಪು ಮಾಡಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಕಾಂಗ್ರೆಸ್ ಪ್ರತಿಪಾದಿಸುತ್ತಿದೆ. ಈಗಾಗಲೇ ಸ್ಟಿಂಗ್ ಆಪರೇಷನ್, ಪೆನ್ ಡ್ರೈವ್ ವಿವಾದ ಮತ್ತು ನೈಸ್ ಅಕ್ರಮದ ವಿಚಾರಗಳು ಒಂದಕ್ಕೊಂದು ಹೆಣೆದುಕೊಂಡಿದ್ದು, ರಾಜ್ಯದ ರಾಜಕೀಯ ವಾತಾವರಣ ಬಿಸಿಯಾಗಿದೆ. ತನಿಖೆಯ ನೆಪದಲ್ಲಿ ಸರ್ಕಾರ ಕುಮಾರಸ್ವಾಮಿಯವರನ್ನು ಬಂಧಿಸಲು ನೋಡುತ್ತಿದೆಯೇ ಅಥವಾ ಕುಮಾರಸ್ವಾಮಿಯವರು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಇಂತಹ ತಂತ್ರಗಳನ್ನು ಮಾಡುತ್ತಿದ್ದಾರೆಯೇ ಎಂಬುದು ಸದ್ಯದ ಚರ್ಚೆಯ ವಿಷಯ.

Read More
Next Story