ಜನಸಂಘ ಸ್ಥಾಪಕ ಶಾಮಪ್ರಸಾದ್ ಮುಖರ್ಜಿ ಮಂತ್ರಿಯಾಗಿದ್ದು ಮುಸ್ಲಿಂ ಲೀಗ್‌ ಸರ್ಕಾರದಲ್ಲಿ: ಬಿ.ಕೆ. ಹರಿಪ್ರಸಾದ್
x

ಜನಸಂಘ ಸ್ಥಾಪಕ ಶಾಮಪ್ರಸಾದ್ ಮುಖರ್ಜಿ ಮಂತ್ರಿಯಾಗಿದ್ದು ಮುಸ್ಲಿಂ ಲೀಗ್‌ ಸರ್ಕಾರದಲ್ಲಿ: ಬಿ.ಕೆ. ಹರಿಪ್ರಸಾದ್

ಸಚಿವ ನಾಗೇಂದ್ರಗೆ ED ಬಲೆ, ಸಿಎಂ ದೆಹಲಿಗೆ, ಜೆಡಿಎಸ್‌-ಬಿಜೆಪಿ ಬಿಡದಿ ಪಾದಯಾತ್ರೆ ʼಪ್ರಾಯಶ್ಚಿತ್ತʼವೆಂದ ಕಾಂಗ್ರೆಸ್


Click the Play button to hear this message in audio format

ಜನಸಂಘದ ಸಂಸ್ಥಾಪಕ ಶಾಮಪ್ರಸಾದ್ ಮುಖರ್ಜಿ ಅವರು 1942ರಲ್ಲಿ ಬಂಗಾಳದ ಮುಸ್ಲೀಂ ಲೀಗ್ ಜತೆಗಿನ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಆಗ ಮುಖರ್ಜಿ ಅವರು ವೈಸ್ ರಾಯ್ ಅವರಿಗೆ ಪತ್ರ ಬರೆದು ಕಾಂಗ್ರೆಸ್‌ನ ಕ್ವಿಟ್ ಇಂಡಿಯಾ ಚಳುವಳಿಯನ್ನು ಯಶಸ್ವಿಯಾಗಲಿ ಬಿಡಬಾರದು ಎಂದು ಹೇಳಿದ್ದರು ಎಂದು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಟೀಕಿಸಿದ್ದಾರೆ.

ಅವರು ಕ್ವಿಟ್ ಇಂಡಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, "ಬಿಜೆಪಿ-ಅರ್‌ಎಸ್‌ಎಸ್‌ನವರು ನಮಗೆ ದೇಶಭಕ್ತಿ, ದೇಶಪ್ರೇಮದ ಬಗ್ಗೆ ಹೇಳುತ್ತಾರೆ ಮತ್ತು ಹಿಂದೂ ಮುಸ್ಲಿಂ ಎಂದು ಮಾತನಾಡುತ್ತಾರೆ. ಅವರ ನಾಯಕ ಶಾಮಪ್ರಸಾದ್ ಮುಖರ್ಜಿ ಮಂತ್ರಿಯಾಗಿದ್ದು ಮುಸ್ಲಿಂ ಲೀಗ್ ಸರ್ಕಾರದಲ್ಲಿ (1941ರಲ್ಲಿ ಎ.ಕೆ. ಫಜ್ಲುಲ್ ಹಕ್ ಅವರ ನೇತೃತ್ವದಲ್ಲಿ ರಚನೆಯಾದ 'ಪ್ರೋಗ್ರೆಸಿವ್ ಕೋಲಿಷನ್' (ಪ್ರಗತಿಪರ ಮೈತ್ರಿ) ಸರ್ಕಾರದಲ್ಲಿ ಅವರು 1941–42ರಲ್ಲಿ ಬಂಗಾಳ ಪ್ರಾಂತ್ಯದ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದರು.) ಪಾಕಿಸ್ತಾನ ಬೇರೆ ದೇಶವಾಗಬೇಕು ಎಂದು ಮೊದಲು ನಿರ್ಣಯ ಹೊರಡಿಸಿದ್ದು ಇದೇ ಮುಸ್ಲಿಂ ಲೀಗ್ ಹಾಗೂ ಶಾಮ ಪ್ರಸಾದ್ ಮುಖರ್ಜಿ. ಈಗ ದೇಶ ವಿಭಜನೆ ಮಾಡಿದ್ದು ಗಾಂಧಿ ಹಾಗೂ ನೆಹರು ಎಂದು ಹೇಳುತ್ತಾರೆ. ನಿರಂತರವಾಗಿ ಸ್ವಾತಂತ್ರ್ಯ ಹೋರಾಟದ ವಿರುದ್ಧ ಇದ್ದ ಆರ್ ಎಸ್ಎಸ್ ನವರು ನಮಗೆ ಸಿಕ್ಕಿರುವ ಸೌಲಭ್ಯಗಳನ್ನು ಮುಗಿಸುವ ಷಡ್ಯಂತ್ರ ಮಾಡುತ್ತಿದ್ದಾರೆ," ಎಂದು ಹರಿಪ್ರಸಾದ್‌ ಅರೋಪಿಸಿದರು.

ಎಸ್‌ಐಆರ್‌ ಮೂಲಕ ಹಕ್ಕು ಕಸಿಯಲು ಯತ್ನ

ಎಸ್ಐಆರ್ ಮೂಲಕ ನಿಮ್ಮ ಹಕ್ಕು ಕಸಿಯುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ ನೀಡಿರುವ ಹಕ್ಕನ್ನು ಹತ್ತಿಕ್ಕಲು ಮುಂದಾಗಿದ್ದು, 1.09 ಕೋಟಿ ಮತ ತೆಗೆಯಲು ಮುಂದಾಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಜಾಗೃತರಾಗಿ ರಾಜ್ಯದ ಹಳ್ಳಿ ಹಳ್ಳಿಯಲ್ಲಿ ನೈಜ್ಯ ಮತದಾರರು ಮತಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಈ ಸ್ವಾತಂತ್ರಯ ಹೋರಾಟಗಾರರಿಗೆ ಗೌರವ ನೀಡಬೇಕಾದರೆ ಎಸ್ಐಆರ್ ಪ್ರಕ್ರಿಯೆಲ್ಲಿ ನೈಜ್ಯ ಮತದಾರರ ಹಕ್ಕು ಉಳಿಯಬೇಕು," ಎಂದು ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.

"ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುವ ಬಿಜೆಪಿ ಆರ್ ಎಸ್ಎಸ್, ಅಯೋಧ್ಯೆಯಲ್ಲಿ ಹುಂಡಿ ಕಳ್ಳತನ ಮಾಡಿ ಧರ್ಮದ ಮೇಲೂ ಭಕ್ತಿ ಇಲ್ಲ ಎಂಬುದನ್ನು ತೋರಿದ್ದಾರೆ. ಪಂಡಿತ್ ನೆಹರೂ ಅವರ ಬಗ್ಗೆ ಬಿಜೆಪಿಯವರು ಮಾತನಾಡುತ್ತಾರೆ. ನೆಹರೂ ಅವರ ಕಾಲದಲ್ಲಿ ದೇವಾಲಯಗಳ ಮುಂದೆ ಚಪ್ಪಲಿ ಕಳ್ಳರಿದ್ದಾರೆ ಎಚ್ಚರಿಕೆ ಎಂಬ ಫಲಕವಿತ್ತು. ಬಿಜೆಪಿಯವರ ಕಾಲದಲ್ಲಿ ಹುಂಡಿ ಕಳ್ಳರಿದ್ದಾರೆ ಎಚ್ಚರಿಕೆ ಎಂಬ ಫಲಕ ಹಾಕಲಾಗುತ್ತಿದೆ. ಈ ಹುಂಡಿ ಕಳ್ಳರ ಬಗ್ಗೆ ಎಚ್ಚರವಾಗಿರಿ. ಇವರಿಗೆ ಧರ್ಮ ಬೇಕಾಗಿರುವುದೇ ಹುಂಡಿ ಕಳ್ಳತನ ಮಾಡಲು," ಎಂದು ಹರಿಪ್ರಸಾದ್‌ ಆರೋಪ ಮಾಡಿದ್ದಾರೆ.

"ನಾನು ಹಿಂದೂ ಧರ್ಮದವನಾದರೆ ನಾನು ಗಾಂಧಿ, ನೆಹರೂ ಅವರು ಪಾಲಿಸುವ ಹಿಂದೂ ಧರ್ಮ ಪಾಲಿಸುತ್ತೇನೆ. ಗೋಲ್ವಾಲ್ಕರ್ ಹೆಡಗೇವಾರ್ ಅವರ ಹಿಂದೂ ಧರ್ಮ ಪಾಲನೆ ಮಾಡುವುದಿಲ್ಲ. ಅದು ಹಿಂದೂ ಧರ್ಮವಲ್ಲ ಹಿಂದುತ್ವ. ಸಾರ್ವರ್ಕರ್ ಮಹಾ ಸ್ವಾತಂತ್ರ ಹೋರಾಟಗಾರ ಎಂದು ಹೋಳುತ್ತಾರೆ. ಸಾರ್ವಕರ್ ಅವರಿಗೆ ದೇವರ ಮೇಲೆ ನಂಬಿಕೆ ಇರಲಿಲ್ಲ. ಅವರು ನಾಸ್ತಿಕರು. ಹಸು ದೇವರು ಎಂದು ಯಾವತ್ತೂ ಹೇಳಿಲ್ಲ, ಅದೊಂದು ಉಪಯುಕ್ತ ಪ್ರಾಣಿ ಎಂದು ಹೇಳಿದ್ದರು ಎಂದು ಅವರ ಮೊಮ್ಮಗ ನ್ಯಾಯಾಲಯದಲ್ಲಿ ಹೇಳುತ್ತಿದ್ದಾರೆ. ಇದನ್ನು ನಾವು ಹೇಳಿದರೆ ದೇಶದ್ರೋಹಿಗಳಾಗುತ್ತೇವೆ," ಎಂದು ವ್ಯಂಗ್ಯ ಮಾಡಿದರು..

ಕ್ವಿಟ್‌ ಇಂಡಿಯಾ ಚಳುವಳಿಯಲ್ಲಿ ಆರ್‌ಎಸ್‌ಎಸ್‌ ಇರಲಿಲ್ಲ!

"ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಆರ್ ಎಸ್ಎಸ್ ನವರು ಭಾಗವಹಿಸಿರಲಿಲ್ಲ. ಬಿಜೆಪಿಯವರು ಅಟಲ್ ಬಿಹಾರಿ ವಾಜಪೇಯಿ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ್ದರು ಎಂದು ಹೇಳುತ್ತಾರೆ. ಭಕ್ತೇಶ್ವರದಲ್ಲಿ ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಸ್ವತಂತ್ರ ಹೋರಾಟಗಾರರ ಗುಂಪಲ್ಲಿ ವಾಜಪೇಯಿ ಅವರನ್ನು ಬಂಧಿಸುತ್ತಾರೆ. ಆಗ ವಾಜಪೇಯಿ ಅವರು ಈ ಹೋರಾಟದಲ್ಲಿ ಯಾರೆಲ್ಲಾ ಪಾಲ್ಗೊಳ್ಳುತ್ತಾರೆ ಎಂದು ಹೆಸರು ಬರೆದುಕೊಳ್ಳಲು ಹೋಗಿದ್ದೆ, ನಾನು ಈ ಹೋರಾಟದಲ್ಲಿ ಇಲ್ಲ. ಬ್ರಿಟಿಷರ ಸರ್ಕಾರದ ವಿರುದ್ಧ ಇರುವವರ ಹೆಸರು ಬರೆದುಕೊಳ್ಳಲು ಹೋಗಿದ್ದೆ ಎಂದು ಕ್ಷಮಾಪಣೆ ಬರೆದುಕೊಟ್ಟಿದ್ದರು. ಇತಹವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಕೊಟ್ಟಿದ್ದಾರೆ," ಎಂದು ಹರಿಪ್ರಸಾದ್‌ ಟೀಕಿಸಿದರು.

"ಈ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿರುವ ಗಾಂಧಿ, ನೆಹರು, ಇಂದಿರಾ ಗಾಂಧಿ ರಾಜೀವ್ ಗಾಂಧಿ ಅವರನ್ನು ದೇಶದ್ರೋಹಿ ಮಾಡಿದ್ದಾರೆ. ಮುಂದಿನ ಪೀಳಿಗೆ ಯುವಕರು ನಮಗೆ ಯಾರ ಹೋರಾಟದಿಂದ ಸ್ವಾತಂತ್ರ್ಯ ಸಿಕ್ಕಿದೆ ಎಂದು ತಿಳಿಯಬೇಕು. ಪ್ರಜಾಪ್ರಭುತ್ವ ಹೊರತಾಗಿ ನಮಗೆ ಬೇರೆ ಯಾವುದೇ ವ್ಯವಸ್ಥೆ ಉತ್ತಮವಲ್ಲ. ಈ ಹಿಂದೆ ಜಾತಿ ಆಧಾರದ ಮೇಲೆ ತೆರಿಗೆ ಪಾವತಿ ಮಾಡುವವರು ಮಾತ್ರ ಮತದಾನ ಮಾಡುವ ಹಕ್ಕಿತ್ತು. ಸ್ವತಂತ್ರಯ ಬಂದ ನಂತರ ಎಲ್ಲರಿಗೂ ಹಕ್ಕು ನೀಡಿರುವುದು ನಮ್ಮ ಸಂವಿಧಾನ. ನಾವು ಇದನ್ನು ಕಳೆದುಕೊಳ್ಳಬಾರದು. ನಾವು ದೇಶವನ್ನು ಹೇಗೆ ಕಾಪಾಡಿ ಮುಂದಕ್ಕೆ ಕೊಂಡೊಯ್ಯಬೇಕು ಎಂಬುದರ ಬಗ್ಗೆ ಗಮನಹರಿಸಬೇಕು," ಎಂದರು.‌

ತುರ್ತುಪರಿಸ್ಥಿತಿ ಸಮರ್ಥಿಸಿದ ಹರಿಪ್ರಸಾದ್

"ಬಿಜೆಪಿಯವರು ಆಗಾಗ್ಗೆ ನಾವು ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದ್ದೇವೆ ಎಂದು ಹೇಳುತ್ತಾರೆ. ಆ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ ಅವರ ಆಂದೋಲನ, ಜಾರ್ಜ್ ಫರ್ನಾಂಡೀಸ್ ಆಂದೋಲನ ನಡೆಯುತ್ತಿತ್ತು. ಅಲಹಬಾದ್ ಹೈಕೋರ್ಟ್ ನಲ್ಲಿ ಅವರ ಆಯ್ಕೆಯನ್ನು ಅನರ್ಹ ಎಂದು ತಿಳಿಸುತ್ತದೆ. 20 ದಿನಗಳ ಕಾಲ ಸುಪ್ರೀಂ ಕೋರ್ಟ್ ಮೇಲ್ಮನವಿಗೆ ಅವಕಾಶ ನೀಡುತ್ತಾರೆ. ಆಗ ಇಂದಿರಾ ಗಾಂಧಿ ಅವರ ಮೇಲೆ ಇದ್ದಿದ್ದು ಚುನಾವಣೆಯಲ್ಲಿ ಮೈಕ್ ಗೆ ಹೆಚ್ಚು ಹಣ ನೀಡಿದ್ದಾರೆ ಎಂದು ವಾದ ಮಾಡಿದ್ದರು. ಆಗ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡುತ್ತದೆ," ಎಂದು ಹರಿಪರಾಮಲೀಲಾ ಮೈದಾನದಲ್ಲಿ ದೊಡ್ಡ ಸಭೆ ಮಾಡಿದ ಜಯಪ್ರಕಾಶ್ ನಾರಾಯಣ ಅವರು ದೇಶದ ಪೊಲೀಸರು, ಮಿಲಿಟರಿಯವರು ಸರ್ಕಾರದ ಮಾತು ಕೇಳದೇ ದಂಗೆ ಏಳಿ ಎಂದು ಕರೆ ನೀಡುತ್ತಾರೆ. ವಾಜಪೇಯಿ ಅವರು ಇಂದಿರಾ ಗಾಂಧಿ ಮನೆಯಿಂದ ಯಾರೂ ಆಚೆ ಬರಬಾರದು ಘೆರಾವ್ ಮಾಡಿ ಎಂದು ಹೇಳಿಕೆ ನೀಡುತ್ತಾರೆ. ಆಗ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರು ರಾಷ್ಟ್ರಪತಿ ಬಳಿ ಹೋಗಿ ಸವಿಧಾನದ 352 ವಿಧಿ ಅಡಿ ಆಂತರಿಕ ಷಡ್ಯಂತ್ರಕ್ಕೆ ತುರ್ತು ಪರಿಸ್ಥಿತಿ ಹೇರುವ ಅವಕಾಶವಿತ್ತು. ಅದನ್ನೇ ಅವರು ಮಾಡಿದ್ದರು. ಅವರು ತುರ್ತು ಪರಿಸ್ಥಿತಿ ಮಾಡದಿದ್ದರೆ ಅಂದೇ ದೇಶವನ್ನು ಛಿದ್ರಗೊಳಿಸುತ್ತಿದ್ದರು. ಈಗ ಅವರು ತಾವೇ ಪ್ರಜಾಪ್ರಭುತ್ವ ಉಳಿಸಿದ್ದಾಗಿ ಹೇಳುತ್ತಾರೆ," ಎಂದು ಹರಿಪ್ರಸಾದ್‌ ಅಭಿಪ್ರಾಯಪಟ್ಟರು.

Read More
Next Story