ಸಂಪುಟ ಪುನಾರಚನೆ|ಶಾಸಕರಿಂದ ‘ದೆಹಲಿ ಚಲೋ’: ಇಲ್ಲಿದೆ ಸಚಿವ ಆಕಾಂಕ್ಷಿಗಳ ಪಟ್ಟಿ
x

ಸಂಪುಟ ಪುನಾರಚನೆ|ಶಾಸಕರಿಂದ ‘ದೆಹಲಿ ಚಲೋ’: ಇಲ್ಲಿದೆ ಸಚಿವ ಆಕಾಂಕ್ಷಿಗಳ ಪಟ್ಟಿ

ಸುಮಾರು 20ಕ್ಕೂ ಹೆಚ್ಚು ಹಿರಿಯ ಸಚಿವರನ್ನು ಕೈಬಿಟ್ಟು, ಹೊಸಬರಿಗೆ ಮತ್ತು ಸತತವಾಗಿ ಗೆಲ್ಲುತ್ತಾ ಬಂದಿರುವ ಶಾಸಕರಿಗೆ ಅವಕಾಶ ನೀಡಬೇಕೆಂಬ ಆಗ್ರಹದೊಂದಿಗೆ 'ಶಾಸಕರ ಪಡೆ' ದೆಹಲಿಗೆ ತೆರಳುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.


ರಾಜ್ಯ ರಾಜಕಾರಣದಲ್ಲಿ ಮತ್ತೆ ಸಂಪುಟ ಪುನಾರಚನೆಯ ಸದ್ದು ಜೋರಾಗಿದೆ. ಸಚಿವ ಸ್ಥಾನ ಆಕಾಂಕ್ಷಿಗಳಾದ ಹೊಸ ಹಾಗೂ ಹಿರಿಯ ಶಾಸಕರು ಹೈಕಮಾಂಡ್ ಮೇಲೆ ಒತ್ತಡ ಹೇರಲು ಇಂದು(ಭಾನುವಾರ) ದೆಹಲಿಗೆ ತೆರಳಲಿದ್ದಾರೆ.

ಸುಮಾರು 20ಕ್ಕೂ ಹೆಚ್ಚು ಹಿರಿಯ ಸಚಿವರನ್ನು ಕೈಬಿಟ್ಟು, ಹೊಸಬರಿಗೆ ಮತ್ತು ಸತತವಾಗಿ ಗೆಲ್ಲುತ್ತಾ ಬಂದಿರುವ ಶಾಸಕರಿಗೆ ಅವಕಾಶ ನೀಡಬೇಕೆಂಬ ಆಗ್ರಹದೊಂದಿಗೆ 'ಶಾಸಕರ ಪಡೆ' ದೆಹಲಿಗೆ ತೆರಳುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಸಿ. ವೇಣುಗೋಪಾಲ್ ಸೇರಿದಂತೆ ವರಿಷ್ಠರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ.

ಸಂಪುಟದಲ್ಲಿರುವ ಸುಮಾರು 20 ಸಚಿವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಆದ್ಯತೆ ನೀಡಬೇಕೆಂಬುದು ಶಾಸಕರ ಪ್ರಬಲ ಬೇಡಿಕೆ ಮುಂದಿಟ್ಟಿದ್ದು, ಈ ಯಾತ್ರೆಯಲ್ಲಿ ಮುಖ್ಯಮಂತ್ರಿಗಳ ಆಪ್ತ ವಲಯದ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ಕೂಡ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷ ತಲುಪಲಿದೆ. ಪಕ್ಷಕ್ಕಾಗಿ ದುಡಿದ ಮತ್ತು ಸತತವಾಗಿ ಗೆಲುವು ಸಾಧಿಸಿದ ನಮಗೆ ಅವಕಾಶ ನೀಡಬೇಕು. ಸಂಪುಟದಲ್ಲಿ ಹೊಸಬರಿಗೆ ಅವಕಾಶ ನೀಡುವ ಮೂಲಕ ಆಡಳಿತಕ್ಕೆ ಚುರುಕು ಮುಟ್ಟಿಸಬೇಕು ಎಂದು ದೆಹಲಿ ಯಾತ್ರೆ ಹೊರಟಿರುವ ಶಾಸಕರ ಆಗ್ರಹವಾಗಿದೆ.

ಈ ದಿಢೀರ್ ಬೆಳವಣಿಗೆಯು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ನಡುವಿನ ಅಧಿಕಾರ ಹಂಚಿಕೆಯ ಸೂತ್ರದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಗೆ ತೆರಳುವ ಶಾಸಕರು ಯಾರು?

ಎಸ್.ಎನ್.ಸುಬ್ಬಾರೆಡ್ಡಿ (ಬಾಗೆಪಲ್ಲಿ), ಪುಟ್ಟರಂಗಶೆಟ್ಟಿ (ಚಾಮರಾಜನಗರ), ಹಂಪನಗೌಡ ಬಾದರ್ಲಿ (ಸಿಂಧನೂರು),ಡಿ.ಜಿ. ಶಾಂತನಗೌಡ (ಹೊನ್ನಾಳಿ), ಜೆ.ಟಿ.ಪಾಟೀಲ್ (ಬೀಳಗಿ),ಬಸವರಾಜ್ ಶಿವಣ್ಣ (ಬ್ಯಾಡಗಿ),ಎ.ಆರ್. ಕೃಷ್ಣ ಮೂರ್ತಿ (ಕೊಳ್ಳೆಗಾಲ), ಪ್ರಸಾದ್ ಅಬ್ಬಯ್ಯ (ಹು-ಧಾ ಪೂರ್ವ), ಯು.ಬಿ. ಬಣಕಾರ್ (ಹಿರೆಕೆರೂರು), ಜಿ.ಎಸ್. ಪಾಟೀಲ್ (ರೋಣ),ಯಶವಂತರಾಯ ಗೌಡ ಪಾಟೀಲ್ (ಇಂಡಿ), ಷಡಕ್ಷರಿ (ತಿಪಟೂರು),ಟಿ.ಬಿ. ಜಯಚಂದ್ರ (ಶಿರಾ), ಅಶೋಕ್ ಪಟ್ಟಣ (ರಾಮದುರ್ಗ), ಎಸ್.ಎನ್. ನಾರಾಯಣ್ ಸ್ವಾಮಿ (ಬಂಗಾರಪೇಟೆ), ಲಕ್ಷ್ಮಣ ಸವದಿ (ಅಥಣಿ), ಅಪ್ಪಾಜಿ ನಾಡಗೌಡ (ಮುದ್ದೆ ಬಿಹಾಳ), ರಿಜ್ವಾನ್ ಅರ್ಷದ್ (ಶಿವಾಜಿನಗರ), ಪ್ರಿಯಾಕೃಷ್ಣ (ಗೋವಿಂದರಾಜನಗರ),ರಮೇಶ್ ಬಂಡಿಸಿದ್ದೇಗೌಡ (ಶ್ರೀರಂಗಪಟ್ಟಣ),ವಿ. ಶಿವಣ್ಣ (ಆನೇಕಲ್),ನರೇಂದ್ರ ಸ್ವಾಮಿ (ಮಳವಳ್ಳಿ), ವಿನಯ್ ಕುಲಕರ್ಣಿ (ಧಾರವಾಡ), ರಾಘವೇಂದ್ರ ಇಟ್ನಾಳ್ (ಕೊಪ್ಪಳ), ಬೇಳೂರು ಗೋಪಾಲಕೃಷ್ಣ (ಸಾಗರ).

Read More
Next Story