ಉಪಚುನಾವಣೆ: ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ. 52.24ರಷ್ಟು ಮತದಾನ
x

 ಮಧ್ಯಾಹ್ನ 3 ಗಂಟೆಯ ವೇಳೆಗೆ ಎರಡೂ ಕ್ಷೇತ್ರಗಳಲ್ಲಿ ಒಟ್ಟಾರೆ ಸರಾಸರಿ ಶೇ. 52.24ರಷ್ಟು ಮತದಾನವಾಗಿರುವ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಉಪಚುನಾವಣೆ: ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ. 52.24ರಷ್ಟು ಮತದಾನ

ಮಧ್ಯಾಹ್ನ 3.00 ಗಂಟೆಯವರೆಗಿನ ಬಾಗಲಕೋಟೆಯಲ್ಲಿ ಶೇ. 54.82% ಮತದಾನವಾಗಿದ್ದರೆ, ದಾವಣಗೆರೆ (ದಕ್ಷಿಣ)ಯಲ್ಲಿ ಶೇ. 49.66%ರಷ್ಟು ಮತದಾನವಾಗಿದೆ.


Click the Play button to hear this message in audio format

ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಬಾಗಲಕೋಟೆ ಹಾಗೂ ದಾವಣಗೆರೆ (ದಕ್ಷಿಣ) ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಮಧ್ಯಾಹ್ನದ ಬಳಿಕ ಮತ್ತಷ್ಟು ಚುರುಕುಗೊಂಡಿದೆ. ಮಧ್ಯಾಹ್ನ 3 ಗಂಟೆಯ ವೇಳೆಗೆ ಎರಡೂ ಕ್ಷೇತ್ರಗಳಲ್ಲಿ ಒಟ್ಟಾರೆ ಸರಾಸರಿ ಶೇ. 52.24ರಷ್ಟು ಮತದಾನವಾಗಿರುವ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಬೆಳಿಗ್ಗೆಯಿಂದಲೇ ಬಿರುಸಿನಿಂದ ಸಾಗುತ್ತಿರುವ ಮತದಾನವು ಮಧ್ಯಾಹ್ನದ ಹೊತ್ತಿಗೆ ಗಣನೀಯ ಏರಿಕೆ ಕಂಡಿದೆ. ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ತಾತ್ಕಾಲಿಕ ವರದಿಯ ಅನ್ವಯ ಕ್ಷೇತ್ರವಾರು ಮತದಾನದ ವಿವರ ಈ ಕೆಳಗಿನಂತಿದೆ:

ಮಧ್ಯಾಹ್ನ 3.00 ಗಂಟೆಯವರೆಗಿನ ಬಾಗಲಕೋಟೆಯಲ್ಲಿ ಶೇ. 54.82% ಮತದಾನವಾಗಿದ್ದರೆ, ದಾವಣಗೆರೆ (ದಕ್ಷಿಣ)ಯಲ್ಲಿ ಶೇ. 49.66%ರಷ್ಟು ಮತದಾನವಾಗಿದೆ.

ಬಾಗಲಕೋಟೆ ಕ್ಷೇತ್ರದಲ್ಲಿ ಬೆಳಿಗ್ಗೆಯಿಂದಲೇ ಮತದಾರರು ಹೆಚ್ಚಿನ ಉತ್ಸಾಹ ತೋರುತ್ತಿದ್ದು ದಾವಣಗೆರೆ ದಕ್ಷಿಣದಲ್ಲಿಯೂ ಮತದಾನದ ಪ್ರಮಾಣ ಉತ್ತಮವಾಗಿದ್ದು, ಬಿಸಿಲಿನ ತಾಪ ಕಡಿಮೆಯಾಗುತ್ತಿದ್ದಂತೆ ಸಂಜೆಯ ವೇಳೆಗೆ ಮತಗಟ್ಟೆಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿದೆ.

ಶಾಂತಿಯುತ ಪ್ರಕ್ರಿಯೆ:

ಸಹಾಯಕ ಮುಖ್ಯ ಚುನಾವಣಾಧಿಕಾರಿ ರಾಘವನ್ ಆರ್.ವಿ. ಅವರು ಈ ತಾತ್ಕಾಲಿಕ ವರದಿಯನ್ನು ಬಿಡುಗಡೆ ಮಾಡಿ ದೃಢಪಡಿಸಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಎರಡೂ ಕ್ಷೇತ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗದೆ ಮತದಾನ ಪ್ರಕ್ರಿಯೆಯು ಸಂಪೂರ್ಣ ಶಾಂತಿಯುತವಾಗಿ ಸಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Read More
Next Story