Karnataka By Election |  ಕಾಂಗ್ರೆಸ್ ಗುರಿ ವಿದೇಶಿ ಗುಲಾಮಗಿರಿ, ಬಿಜೆಪಿ ಗುರಿ ಜನಸೇವೆ
x

ಸಂಸದ ಬಸವರಾಜ ಬೊಮ್ಮಾಯಿ

Karnataka By Election | ಕಾಂಗ್ರೆಸ್ ಗುರಿ ವಿದೇಶಿ ಗುಲಾಮಗಿರಿ, ಬಿಜೆಪಿ ಗುರಿ ಜನಸೇವೆ

ಇಂದಿರಾಗಾಂಧಿ ಎರಡನೇ ಅವಧಿಯಲ್ಲಿ ಪ್ರಧಾನಿಯಾಗಿದ್ಧಾಗ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಈ ವೇಳೆ ಅಟಲ್ ಬಿಹಾರಿ ವಾಜಪೇಯಿ, ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಹಲವಾರು ನಾಯಕರನ್ನು ಜೈಲಿಗೆ ಹಾಕಲಾಗಿತ್ತು ಎಂದು ಸಂಸದ ಬೊಮ್ಮಾಯಿ ತಿಳಿಸಿದರು.


Click the Play button to hear this message in audio format

ಕಾಂಗ್ರೆಸ್ ಈ ದೇಶದ ಪಕ್ಷವಲ್ಲ ಹೀಗಾಗಿ ಈ ದೇಶದ ಮೇಲಿನ ಅಭಿಮಾನ, ಪೀತಿ, ದೇಶದ ಬಗ್ಗೆ ಚಿಂತನೆ, ಹೋರಾಟ, ಮಾಡುವ ಯಾವುದೇ ಕಾರ್ಯ ಆಡಳಿತದಲ್ಲಿದ್ದಾಗ ಪಕ್ಷ ಮಾಡಿಲ್ಲ. ಅದರ ಮೂಲ ಉದ್ದೇಶವೇ ವಿದೇಶಿ ಗುಲಾಮಗಿರಿ. ವಿದೇಶಿ ಪೌರತ್ವ ಇರುವವರು ಕಾಂಗ್ರೆಸ್ ಆಳುತ್ತಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಸೋಮವಾರ(ಏ.6) ಬಾಗಲಕೋಟೆಯ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಾರ್ಯಾಲಯದಲ್ಲಿ ಏರ್ಪಡಿಸಿದ ಪಾರ್ಟಿಯ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಭಾರತದ ಇತಿಹಾಸದಲ್ಲಿ ನಿಜವಾಗಲೂ ಜನರಿಂದ, ಜನರಿಗೋಸ್ಕರ ಒಂದು ರಾಜಕೀಯ ಪಕ್ಷ ಆಡಳಿತ ನಡೆಸಿದ್ದರೆ ಅದು ಬಿಜೆಪಿ ಕಾಲದಲ್ಲಿ. ಭಾರತೀಯರಿಂದಲೇ ಭಾರತೀಯರನ್ನು ಶೋಷಣೆ ಮಾಡಲು ಹುಟ್ಟಿಕೊಂಡಿರುವುದೇ ಕಾಂಗ್ರೆಸ್ ಪಕ್ಷ" ಎಂದರು.

ಸ್ವತಂತ್ರ ಹೋರಾಟದ ಸಮಯದಲ್ಲಿ ಮುಂಚೂಣಿಯಲ್ಲಿದ್ದ ನಿಜವಾದ ಹೋರಾಟಗಾರರಾದ ಭಗತ್ ಸಿಂಗ್, ರಾಜಗುರು, ಸುಭಾಷ್‌ ಚಂದ್ರ ಬೋಸ್‌ ಅವರ ಹೆಸರನ್ನು ಕಾಂಗ್ರೆಸ್ ಹೇಳುವುದಿಲ್ಲ. ಸುಭಾಷ್‌ ಚಂದ್ರ ಬೋಸ್‌ ಅವರು ನೆಹರು, ಗಾಂಧಿ ವಿರುದ್ಧ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಚುನಾವಣೆ ನಡೆದಾಗ ಸುಭಾಷ್ ಚಂದ್ರ ಬೋಸ್‌ಗೆ ಅತಿ ಹೆಚ್ಚು ಮತ ಬಿದ್ದಿದ್ದವು ಎಂದು ಹೇಳಿದರು.

ಕಾಂಗ್ರೆಸ್ಸೇತರ ಸರ್ಕಾರ

ಇಂದಿರಾಗಾಂಧಿ ಎರಡನೇ ಅವಧಿಯಲ್ಲಿ ಪ್ರಧಾನಿಯಾಗಿದ್ಧಾಗ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಈ ವೇಳೆ ಅಟಲ್ ಬಿಹಾರಿ ವಾಜಪೇಯಿ, ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಹಲವಾರು ನಾಯಕರನ್ನು ಜೈಲಿಗೆ ಹಾಕಲಾಗಿತ್ತು. ಆಗ ನಾನು, ಅನಂತಕುಮಾರ್ ಬೀದಿಗಿಳಿದು ಪ್ರತಿಭಟನೆ ಮಾಡಿ ಹಲವಾರು ಬಸ್‌ಗಳಿಗೆ ಬೆಂಕಿ ಹಚ್ಚಿದ್ದೆವು. ಅದು ದೇಶ್ಯಾದ್ಯಂತ ಸುದ್ದಿಯಾಗಿತ್ತು. ತುರ್ತು ಪರಿಸ್ಥಿತಿ ಹಿಂಪಡೆದ ನಂತರ ದೇಶದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂತು. ಜನಸಂಘ ಮತ್ತು ಆರ್‌ಎಸ್‌ಎಸ್‌ ಹಿನ್ನೆಲೆಯವರು ಹೊರ ಬಂದ ಮೇಲೆ 1980 ರಲ್ಲಿ ಬಿಜೆಪಿ ಸ್ಥಾಪನೆಯಾಯಿತು ಎಂದರು.

ಬಾಗಲಕೋಟೆಯ ಪಕ್ಷದ ಕಚೇರಿಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಶಿಕಾರಿಪುರದ ಮುನ್ಸಿಪಾಲಿಟಿಯ ಮೇಂಬರ್ ಆಗಿ, ಅಧ್ಯಕ್ಷರಾಗಿ ಬಿಜೆಪಿಯ ಬಾವುಟ ಹಾರಿಸಿದವರು. ಡಾ. ವಿ.ಎಸ್. ಆಚಾರ್ಯ ಉಡುಪಿಯ ಮುನ್ಸಿಪಾಲಿಟಿಯ ಧ್ವಜ ಹಾರಿಸಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್‌ ಸರ್ಕಾರದ ಮಂತ್ರಿ ಇವರ ರಾಜಕೀಯ ದಿಟ್ಟತನ ನೋಡಿ ಇವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು ಎಂದು ನೆನಪಿಸಿಕೊಂಡರು.

ಬಿ.ಎಸ್‌. ಯಡಿಯೂರಪ್ಪ ಶ್ರಮದ ಫಲ

ಕರ್ನಾಟಕದ ಯಾವುದೇ ಮೂಲೆಗೆ ಹೋದರೂ ಇಲ್ಲಿಗೆ ಬಿ.ಎಸ್‌. ಯಡಿಯೂರಪ್ಪ ಬಂದಿದ್ದರು. ಹೋರಾಟ ಮಾಡಿದ್ದರು, ಪಾದಯಾತ್ರೆ ಮಾಡಿದ್ದರು ಎನ್ನುತ್ತಾರೆ. ಶಿವಮೊಗ್ಗದಿಂದ ಬೆಂಗಳೂರುವರೆಗೂ ಬಗರ್ ಹುಕುಂಗಾಗಿ ಪಾದಯಾತ್ರೆ ಮಾಡಿದ್ದರು. ಅವರ ಹೋರಾಟದ ಫಲದಿಂದ ರೈತರು, ಕೂಲಿಕಾರರು, ದೀನ ದಲಿತರು ಬಿಜೆಪಿಯನ್ನು ಬೆಂಬಲಿಸಿದರು. ಅದರ ಪರಿಣಾಮ ಶಾಸಕರ ಸಂಖ್ಯೆ ನಾಲ್ಕರಿಂದ 110 ಕ್ಕೇರಿತು. ಹೋರಾಟದಿಂದ ಛಲದಿಂದ ಈ ಪಕ್ಷವನ್ನು ಕಟ್ಟಿದ್ದಾರೆ. ಮತ್ತೆ ಅಂತಹದೇ ಹೋರಾಟ ಮಾಡುವ ಕಾಲ ಬಂದಿದೆ. ಯಾವುದೇ ಮುಲಾಜಿಗಾಗಿ ಪಕ್ಷ ಕಟ್ಟಬೇಕಿಲ್ಲ. ಜನರ ಧ್ವನಿಯಾಗಿ ಪಕ್ಷ ಕಟಬೇಕಿದೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ಬಿಜೆಪಿ ಗೆಲುವಿಗೆ ಶ್ರಮಿಸಲು ಕರೆ

ಒಂದೇ ದಿನಕ್ಕೆ ಪಕ್ಷ ಕಟ್ಟಿಲ್ಲ. ಬಿ.ಎಸ್‌. ಯಡಿಯೂರಪ್ಪನವರ ಶ್ರಮಕ್ಕೆ ಬೆವರಿನ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದನ್ನು ಬಾಗಲಕೋಟೆ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ಅವರ ಶ್ರಮಕ್ಕೆ, ಬೆವರಿಗೆ ಬೆಲೆ ಕಟ್ಟಬೇಕೆಂದರೆ 2028ಕ್ಕೆ ಮತ್ತೆ ಬಿಜೆಪಿ ಸರ್ಕಾರ ತರಬೇಕು. ಇದು ಆಗಬೇಕೆಂದರೆ ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚಂರತಿಮಠರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.

Read More
Next Story