Union Budget-2026| ʼಕಿತ್ತಳೆ ಆರ್ಥಿಕತೆʼ ಉತ್ತೇಜಿಸಲು ಐಐಸಿಟಿ ಸ್ಥಾಪನೆಗೆ ಪ್ರಸ್ತಾಪ; ಏನಿದು ಕಿತ್ತಳೆ ಆರ್ಥಿಕತೆ?
x
ಅನಿಮೇಷನ್‌ ಚಿತ್ರ

Union Budget-2026| ʼಕಿತ್ತಳೆ ಆರ್ಥಿಕತೆʼ ಉತ್ತೇಜಿಸಲು ಐಐಸಿಟಿ ಸ್ಥಾಪನೆಗೆ ಪ್ರಸ್ತಾಪ; ಏನಿದು ಕಿತ್ತಳೆ ಆರ್ಥಿಕತೆ?

ಎವಿಜಿಸಿ ವಲಯಕ್ಕೆ 2030 ರ ವೇಳೆಗೆ 20 ಲಕ್ಷ ವೃತ್ತಿಪರರು ಬೇಕಾಗುವ ನಿರೀಕ್ಷೆಯಿದೆ. ಈ ವಲಯದಲ್ಲಿ ಉದ್ಯೋಗಾವಕಾಶಗಳು ಹೆಚ್ಚು ಸೃಷ್ಟಿಯಾಗುವ ಹಿನ್ನೆಲೆಯಲ್ಲಿ ಐಐಸಿಟಿ ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.


ಅನಿಮೇಷನ್, ವಿಶ್ಯುವಲ್ ಎಫೆಕ್ಟ್ಸ್, ಗೇಮಿಂಗ್ ಹಾಗೂ ಕಾಮಿಕ್ಸ್ (ಎವಿಜಿಸಿ) ವಲಯವು ಭಾರತದಲ್ಲಿ ಉದ್ಯಮದ ಸ್ವರೂಪ ಪಡೆದುಕೊಂಡಿದೆ. ಆರ್ಥಿಕತೆಯಲ್ಲಿ ಹೊಸ ಎಂಜಿನ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿತ್ತಳೆ ಅಥವಾ ಸೃಜನಶೀಲ ಹೆಸರಿನ ಈ ಉದ್ಯಮವು ಈಗಾಗಲೇ ಬೇರೆ ದೇಶಗಳಲ್ಲಿ ಬೃಹತ್ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ.

ಎವಿಜಿಸಿ ವಲಯಕ್ಕೆ 2030 ರ ವೇಳೆಗೆ 20 ಲಕ್ಷ ವೃತ್ತಿಪರರು ಬೇಕಾಗುವ ನಿರೀಕ್ಷೆಯಿದೆ. ಮುಂಬೈನಲ್ಲಿ 15,000 ಮಾಧ್ಯಮಿಕ ಶಾಲೆಗಳು ಮತ್ತು 500 ಕಾಲೇಜುಗಳಲ್ಲಿ ಕಂಟೆಂಟ್ ಕ್ರಿಯೇಟರ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದೆ. ಈ ವಲಯದಲ್ಲಿ ಉದ್ಯೋಗಾವಕಾಶಗಳು ಹೇರಳವಾಗಿ ಸೃಷ್ಟಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.

ಭಾರತೀಯ ವಿನ್ಯಾಸ ಕ್ಷೇತ್ರ ಶರವೇಗದಲ್ಲಿ ವಿಸ್ತರಿಸುತ್ತಿದೆ. ಆದರೆ, ವಿನ್ಯಾಸಕರ ಕೊರತೆ ಎದ್ದುಕಾಣುತ್ತಿದೆ. ಈಶಾನ್ಯ ಭಾರತದಲ್ಲಿ ಡಿಸೈನಿಂಗ್ಗೆ ಸಂಬಂಧಿಸಿದ ಶಿಕ್ಷಣ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಸವಾಲು ಇರುವುದರಿಂದ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ ಸಂಸ್ಥೆ ಸ್ಥಾಪಿಸುವುದು ಅನಿವಾರ್ಯವಾಗಿದೆ.

ಕಿತ್ತಳೆ ಆರ್ಥಿಕತೆ ಎಂದರೇನು?

ಉದ್ಯೋಗ ಮತ್ತು ಸೇವಾ ವಲಯದಲ್ಲಿ ಬೆಳವಣಿಗೆಯ ಹೊಸ ಎಂಜಿನ್ ಆಗಿ ಸೃಜನಶೀಲ ಕೈಗಾರಿಕೆಗಳು ಪ್ರಮುಖ ಪಾತ್ರ ವಹಿಸಿವೆ. ಇಂತಹ ಸೃಜನಶೀಲ ಕೈಗಾರಿಕೆಗಳ ವಹಿವಾಟನ್ನೇ ಕಿತ್ತಳೆ ಆರ್ಥಿಕತೆ ಎಂದು ಕರೆಯಲಾಗುತ್ತದೆ. ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಈ ʼಕಿತ್ತಳೆ ಆರ್ಥಿಕತೆʼಗೆ ಹೊಸ ಬೆಂಬಲ ಘೋಷಿಸಲಾಗಿದೆ. ʼಕಿತ್ತಳೆ ಆರ್ಥಿಕತೆʼಯ ಚಟುವಟಿಕೆಗಳು ಪ್ರಾಥಮಿಕವಾಗಿ ಭೌತಿಕ ಸರಕುಗಳಿಗಿಂತ ಕಲ್ಪನೆಗಳು, ಕಲಾತ್ಮಕ ಅಭಿವ್ಯಕ್ತಿ ಮತ್ತು ಸಾಂಸ್ಕೃತಿಕ ಬಂಡವಾಳದಿಂದ ಮೌಲ್ಯ ಪಡೆಯುತ್ತವೆ.

ವಿದೇಶಗಳಲ್ಲಿ ಹೇಗಿದೆ ಕಿತ್ತಳೆ ಆರ್ಥಿಕತೆ?

ಅಮೆರಿಕದಲ್ಲಿ ಲೈವ್ ಸಂಗೀತವು 130 ಶತಕೋಟಿ ಡಾಲರ್ಗಿಂತ ಹೆಚ್ಚು ಆರ್ಥಿಕತೆಯನ್ನು ಹೊಂದಿದೆ. ಅಲ್ಲದೇ 9 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಒದಗಿಸಿದೆ. ಬ್ರಿಟನ್‌ನಲ್ಲಿ ಸಂಗೀತ ಪ್ರವಾಸೋದ್ಯಮವು 2022 ರಲ್ಲಿ 6.6 ಬಿಲಿಯನ್ ಪೌಂಡ್ ಕೊಡುಗೆ ನೀಡಿದೆ. ಭಾರತದಲ್ಲೂ ಇದೀಗ ಇದೇ ಕಿತ್ತಳೆ ಆರ್ಥಿಕತೆಗೆ ಹೆಚ್ಚು ಪ್ರೋತ್ಸಾಹ ನೀಡಲು ಉದ್ದೇಶಿಸಲಾಗಿದೆ.

Read More
Next Story