ಮೈಸೂರು ದಸರಾ ಕಾಮಗಾರಿಯಲ್ಲಿ ಅಕ್ರಮದ ಆರೋಪ; ಡಾ. ರಾಜ್‌ಕುಮಾರ್ ಪ್ರತಿಮೆ ಸ್ಥಳಾಂತರಕ್ಕೂ ಆಕ್ಷೇಪ
ಮೈಸೂರು ದಸರಾ ವಸ್ತುಪ್ರದರ್ಶನ ಪ್ರಾಧಿಕಾರದಲ್ಲಿ ದಸರಾ ಅಂಗವಾಗಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಕೋಟ್ಯಾಂತರ ಅವ್ಯವಹಾರ ಆಗಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿದೆ. ಬಿಜೆಪಿ ವಿಧಾನ ಪರಿಷತ್ ಸದಸ್ಯ ಆರ್. ರಘು ಕೌಟಿಲ್ಯ ಅವರು ಅವ್ಯವಹಾರದ ಬಗ್ಗೆ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಮೈಸೂರು ದಸರಾ ವಸ್ತುಪ್ರದರ್ಶನ ಪ್ರಾಧಿಕಾರದಲ್ಲಿ ದಸರಾ ಅಂಗವಾಗಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಕೋಟ್ಯಾಂತರ ಅವ್ಯವಹಾರ ಆಗಿರುವ ಬಗ್ಗೆ, ಗಂಭೀರ ಆರೋಪಗಳು ಕೇಳಿಬಂದಿದೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಹಾಗು ಮೈಸೂರು ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆಗಿರುವ ಆರ್. ರಘು ಕೌಟಿಲ್ಯ ಅವರು ಇತ್ತೀಚೆಗೆ ಕಾಮಗಾರಿಗಳು ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಭೇಟಿಯ ವೇಳೆ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರದ ಬಗ್ಗೆ, ಆರೋಪ ಮಾಡಿದ್ದರು. ದ 'ಫೆಡರಲ್ ಕರ್ನಾಟಕ ಸಂದರ್ಶನದಲ್ಲಿ ರಘು ಕೌಟಿಲ್ಯ ಅವರು ದಾಖಲೆಗಳ ಸಮೇತ ಭ್ರಷ್ಟಾಚಾರದ ಬಗ್ಗೆ, ಆರೋಪ ಮಾಡಿದ್ದು ಸರ್ಕಾರಕ್ಕೆ ಒಂದಷ್ಟು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರ.
ವಸ್ತುಪ್ರದರ್ಶನದ ಆವರಣದಲ್ಲಿ ಕಾರಂಜಿ ನಿರ್ಮಾಣಕ್ಕೆ ಸುಮಾರು 9.5 ಕೋಟಿ ವೆಚ್ಚವನ್ನು ತೋರಿಸಲಾಗಿದೆ.ಕಾರಂಜಿ ನಿರ್ಮಾಣ ಮಾಡುತ್ತಿದ್ದಾರೋ ಅರಮನೆ ನಿರ್ಮಿಸುತ್ತಿದ್ದಾರೊ ಎಂದು ಪ್ರಶ್ನಿಸಿದರು. ಇದಕ್ಕೆ 9.5 ಕೋಟಿ ಖರ್ಚಾಗಿಲ್ಲ ಲಕ್ಷಗಳು ಮಾತ್ರ ಖರ್ಚಾಗಿದೆ ಎಂದು ಆರೋಪ ಮಾಡಿದರು.
ಇದರ ಜತೆಗೆ 9.4 ಕೋಟಿ ವೆಚ್ಚದಲ್ಲಿ ಮಳಿಗೆಗಳ ನಿರ್ಮಾಣ ಸೇರಿದಂತೆ ಕೆಲ ನವೀಕರಣ ಕಾಮಗಾರಿಗಳನ್ನು ಮಾಡುತ್ತಿದ್ದಾರೆ. ಆದರೆ ಅಲ್ಲಿ ಹಾಕಿರುವ ಶೀಟುಗಳನ್ನು ನೋಡಿದರೆ ಇದಕ್ಕೆ ಕೋಟಿಗಟ್ಟಲೆ ಖರ್ಚಾಗಿಲ್ಲ ಎಂದು ಹೇಳಿದರು. ಇದರಲ್ಲಿ ಸಾಕಷ್ಟು ಅವ್ಯವಹಾರ ಆಗಿದೆ ಎಂದು ಆರೋಪಮಾಡಿದರು. ಡ್ರಾಗನ್ ಪ್ರತಿಮೆ ನಿರ್ಮಿಸಿದ್ದಾರ ಇದಕ್ಕೂ ಕೋಟಿ ಖರ್ಚುಮಾಡಿದ್ದಾರೆ ಇದಕ್ಕೆ ಅಷ್ಟು ಖರ್ಚಾಗಲ್ಲ ಎಂದು ಹೇಳಿದರು. ಈ ಸಂಬಂಧಿಸಿದಂತೆ ನಾನು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಅಧಿಕಾರಿಗಳನ್ನು ಕೇಳಿದಾಗ ನಮಗೆ ಗೊತ್ತಿಲ್ಲ ಬಾಂಬೆಯವರಿಗೆ ಈ ಕಾಮಗಾರಿಗಳ ಗುತ್ತಿಗೆ ನೀಡಲಾಗಿದೆ ಎಂದು ಹೇಳಿದರು.
ಇದರ ಜತೆಗೆ ಕಾರಂಜಿ ನಿರ್ಮಾಣ ಮಾಡುವ ಸಲುವಾಗಿ ಡಾ.ರಾಜ್ ಕುಮಾರ್ ಪ್ರತಿಮೆಯನ್ನು ತೆರವು ಮಾಡಲಾಗಿದೆ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ನಾವು ರಾಜ್ ಕುಮಾರ್ ಪ್ರತಿಮೆಯನ್ನು ನಿರ್ಮಿಸಿದ್ದೆವು. ಈಗ ಅದನ್ನು ತೆರವುಗೊಳಿಸಿ ಒಂದು ಮೂಲೆಯಲ್ಲಿ ಕಟ್ಟದಾಗಿ ರಾಜ್ ಕುಮಾರ್ ಪ್ರತಿಮೆಯನ್ನು ಮಾಡಿಟ್ಟಿದ್ದಾರೆ ಎಂದು ಹೇಳಿದರು. ರಾಜ್ ಕುಮಾರ್ ಪ್ರತಿಮೆ ತೆರವುಗೊಳಿಸುವ ಅವಶ್ಯಕತೆ ಇರಲಿಲ್ಲ ಎಂದು ಹೇಳಿದರು. ಇದಲ್ಲದೆ ವಿವೇಕಾನಂದ ಪ್ರತಿಮೆಯನ್ನು ಸಹಾ ಸ್ಥಳಾಂತರ ಮಾಡಿದ್ದಾರೆ ಎಂದರು. ಇದು ಸೂಕ್ಷ್ಮ ವಿಚಾರ ನಾವು ಈಗಾಗಲೇ ಈ ಬಗ್ಗೆ, ಜಿಲ್ಲಾಡಳಿತ ಗಮನಕ್ಕೆ ತರಲಾಗಿದೆ ಮುಂಚೆ ಇದಜಾಗದಲ್ಲಿ ಡಾ.ರಾಜ್ ಕುಮಾರ್ ಪ್ರತಿಮೆಯನ್ನು ಇಡಿ ಅಂತಾ ಇಲ್ಲದಿದ್ದರೆ ಇದು ಹೋರಾಟ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು
ಕಾಮಗಾರಿಗಳ ಅವ್ಯವಹಾರ ಬಗೆ, ಮೇಲ್ನೋಟಕ್ಕೆ ಗೊತ್ತಾಗುತ್ತದೆ ಈ ಬಗ್ಗೆ, ಲೋಕಾಯುಕ್ತಕ್ಕೆ ದೂರು ಸಲ್ಲಿಸುತ್ತೇವೆ ಎಂದು ಹೇಳಿದರು. ಈಗ ಆಗಿರುವ ಕಾಮಗಾರಿಗಳ ಬಗ್ಗೆ ಲೆಕ್ಕ ನೀಡಬೇಕು ನಾನು ಮಾಡುತ್ತಿರುವ ಆರೋಪ ಸುಳ್ಳು ಎನ್ನುವವರು ಕಾಮಗಾರಿ ಜಾಗದಲ್ಲಿ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು

