ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ನಿಷೇಧ; ನ.11ರವರೆಗೆ ನಿರ್ಬಂಧ
x

ದೀಪಾವಳಿ ಜಾತ್ರೆಯ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ನ.11ರವರೆಗೆ ರಾತ್ರಿ 6ರಿಂದ ಬೆಳಗ್ಗೆ 7ರವರೆಗೆ ಪಾದಯಾತ್ರೆ ನಿಷೇಧಿಸಿ ಜಿಲ್ಲಾಧಿಕಾರಿ ಶ್ರೀರೂಪ ಆದೇಶ ಹೊರಡಿಸಿದ್ದಾರೆ.

ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ನಿಷೇಧ; ನ.11ರವರೆಗೆ ನಿರ್ಬಂಧ

ಕಳೆದ ವರ್ಷ ಪಾದಯಾತ್ರೆ ಸಂದರ್ಭದಲ್ಲಿ ಚಿರತೆ ದಾಳಿಗೆ ಮಂಡ್ಯ ಮೂಲದ ಭಕ್ತರೊಬ್ಬರು ಮೃತಪಟ್ಟಿದ್ದರು. ಮತ್ತೊಂದು ಘಟನೆಯಲ್ಲಿ ಚನ್ನಪಟ್ಟಣ ಮೂಲದ ಬಾಲಕ ಗಾಯಗೊಂಡಿದ್ದ.


Click the Play button to hear this message in audio format

ದೀಪಾವಳಿ ಹಬ್ಬದ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಭಕ್ತರ ದೊಡ್ಡ ಸಂಖ್ಯೆಯ ಆಗಮನ ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಚಾಮರಾಜನಗರ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಕಾಲ್ನಡಿಗೆ ಹಾಗೂ ಪಾದಯಾತ್ರೆಯನ್ನು ನವೆಂಬರ್ 11ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಶ್ರೀರೂಪ ಆದೇಶ ಹೊರಡಿಸಿದ್ದಾರೆ.

ದೀಪಾವಳಿ ಜಾತ್ರೆಗೆ ಕರ್ನಾಟಕ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಪಾದಯಾತ್ರೆಯ ಮೂಲಕ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಅರಣ್ಯ ಮಾರ್ಗದಲ್ಲಿ ವನ್ಯಜೀವಿಗಳ ಸಂಚಾರ ಹೆಚ್ಚಿರುವುದರಿಂದ ಭಕ್ತರಿಗೆ ಅಪಾಯ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಸಂಜೆ 6 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಕಾಲ್ನಡಿಗೆ ಮತ್ತು ಪಾದಯಾತ್ರೆಗೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಚಿರತೆ ದಾಳಿ ಘಟನೆಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ

ಈ ನಿರ್ಧಾರಕ್ಕೆ ಈ ಹಿಂದಿನ ವನ್ಯಜೀವಿ ದಾಳಿ ಘಟನೆಗಳೂ ಪ್ರಮುಖ ಕಾರಣವಾಗಿವೆ. ಕಳೆದ ವರ್ಷ ಪಾದಯಾತ್ರೆ ವೇಳೆ ಚಿರತೆ ದಾಳಿಗೆ ಮಂಡ್ಯ ಮೂಲದ ಭಕ್ತರೊಬ್ಬರು ಮೃತಪಟ್ಟಿದ್ದರು. ಮತ್ತೊಂದು ಘಟನೆಯಲ್ಲಿ ಚನ್ನಪಟ್ಟಣ ಮೂಲದ ಬಾಲಕ ಗಾಯಗೊಂಡಿದ್ದ. ಅಲ್ಲದೆ, ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ತೆರಳುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿ ಜೀವ ತೆಗೆದಿತ್ತು.

ಇಂತಹ ದುರ್ಘಟನೆಗಳು ಮತ್ತೆ ಸಂಭವಿಸದಂತೆ ತಡೆಯಲು ಜಿಲ್ಲಾಡಳಿತ, ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ. ಹೀಗಾಗಿ ನವೆಂಬರ್ 11ರವರೆಗೆ ರಾತ್ರಿ ಮತ್ತು ಮುಂಜಾನೆಯ ಅವಧಿಯಲ್ಲಿ ಪಾದಯಾತ್ರೆಗೆ ನಿರ್ಬಂಧ ವಿಧಿಸಲಾಗಿದೆ. ಭಕ್ತರು ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸಿ ಸುರಕ್ಷಿತವಾಗಿ ದೇವರ ದರ್ಶನ ಪಡೆಯುವಂತೆ ಮನವಿ ಮಾಡಲಾಗಿದೆ.

Read More
Next Story