x

ಕಾಂಗ್ರೆಸ್‌ ಮುಟ್ಟಿ ನೋಡ್ಕೋಬೇಕು; ಕುರುಬರ ಸಂಘದ ವಾರ್ನಿಂಗ್‌

ಸಿದ್ದರಾಮಯ್ಯ ನಾಲ್ಕು ಹೆಜ್ಜೆ ಹಿಂದಿಟ್ಟಿದ್ದಾರೆಂದರೆ ಕಾದಿದೆ ಆಪತ್ತು ಕುರುಬರ ಸಂಘ ವ್ಯಾಖ್ಯಾನ ಸಚಿವ ಸಂಪುಟ ರಚನೆಯಲ್ಲಿ ಸಿದ್ದರಾಮಯ್ಯ ಕಡೆಗಣನೆ ಆಗಿದ್ದರೂ ಸೈಲೆಂಟ್ ಆಗಿದ್ದಾರೆ ಎಂಬ ಚರ್ಚೆಗೆ ಪ್ರತಿಕ್ರಿಯೆ


ರಾಜ್ಯ ಸಚಿವ ಸಂಪುಟದಲ್ಲಿ ಕುರುಬರಿಗೆ ಕೊಟ್ಟಿರುವ ಸ್ಥಾನ ನಮಗೆ ಸಮಾಧಾನವಿಲ್ಲ, ನ್ಯಾಯಸಿಕ್ಕಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುತ್ತಾರೆಂದು ಕಾಂಗ್ರೆಸ್‌ಗೆ ಶೇ. 90 ರಷ್ಟು ಕುರುಬರ ಮತಗಳು ಬಂದಿವೆ. ಸಿದ್ದರಾಮಯ್ಯ ಅವರಿಂದ ಮೂರೇ ವರ್ಷಕ್ಕೆ ರಾಜೀನಾಮೆ ಪಡೆದುಕೊಂಡರು. ಒಪ್ಪಂದ ಇರಬಹುದು ಎಂದು ಆಗಲೂ ನಾವು ಸುಮ್ಮನಿದ್ದೆವು. ಆದರೆ, ಕಡಿಮೆ ಮತಹಾಕಿದ ಸಮುದಾಯಕ್ಕೆ ಹೆಚ್ಚು ಸಚಿವ ಸ್ಥಾನ ನೀಡಿ, ಶೇ. 90 ರಷ್ಟು ಮತ ನೀಡಿದ ಕುರುಬರ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಕುರುಬ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಇನ್ನೂ ಮೂರು ಸಚಿವ ಸ್ಥಾನ ಕುರುಬ ಸಮುದಾಯಕ್ಕೆ ನೀಡಬೇಕು. 2028 ಕ್ಕೆ ಕುರುಬ ಸಮುದಾಯ ಬೆಂಬಲ ಕಾಂಗ್ರೆಸ್‌ಗೆ ಬೇಕಾದರೆ ಸಚಿವ ಸಂಪುಟ ಪುನರ್ ರಚನೆ ಮಾಡಿ ಒಟ್ಟು 5 ಕುರುಬ ಶಾಸಕರಿಗೆ ಸಚಿವ ಸ್ಥಾನ ಸಿಗುವಂತೆ ಮಾಡಿ ಎಂದು ಆಗ್ರಹಿಸಿದರು.

ಒಂದು ವೇಳೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ಕಾಂಗ್ರೆಸ್ ಹಾಗು ಹೈಕಮಾಂಡ್ ವಿರುದ್ಧ ಜಿಲ್ಲೆಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ. ಕುರುಬ ಸಮುದಾಯ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠ ಕಲಿಸುತ್ತೇವೆ ರಾಜ್ಯಾದ್ಯಂತ ಕಾಂಗ್ರೆಸ್ ವಿರುದ್ಧ ಚಳುವಳಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯ ಕಡೆಗಣಿಸಿದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ

ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಮಾತನಾಡಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕುರುಬ ಸಮುದಾಯದ ಮತಗಳಿವೆ. ಮುಂಬೈ ಕರ್ನಾಟಕ, ಉತ್ತರ ಕರ್ನಾಟಕ ಹಾಗು ಮಧ್ಯಕರ್ನಾಟಕದಲ್ಲಿ ಕುರುಬರಿಗೆ ಸಚಿವ ಸ್ಥಾನ ನೀಡಿಲ್ಲ ಅವರು ಎಲ್ಲಿ ಹೋಗಬೇಕು ಎಂದು ಪ್ರಶ್ನಿಸಿದರು. ತಾಲ್ಲೂಕು ಹಾಗು ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ತಾಲ್ಲೂಕು ಗ್ರೇಟರ್ ಬೆಂಗಳೂರು ಚುನಾವಣೆಯಲ್ಲಿ ನಮ್ಮ ಶಕ್ತಿ ಏನು ಅಂತಾ ತೋರಿಸಬೇಕಾಗುತ್ತದೆ ಕುರುಬರ ಮತ ಬೇಕಾ ಬೇಡವಾ ಎಂದು ಕಾಂಗ್ರೆಸ್ ನಿರ್ಧರಿಸಲಿ ಎಂದು ಎಚ್ಚರಿಕೆ ನೀಡಿದರು. ಸಿದ್ದರಾಮಯ್ಯ ಅವರಿಗೆ ಅವರು ಹೇಳಿದವರಿಗೆ ಸಚಿವ ಸ್ಥಾನ ನೀಡಿಲ್ಲ ಎನ್ನುವ ಅಸಮಧಾನವಿದೆ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷದಲ್ಲಿ ತುಳಿದರೆ ಕಾಂಗ್ರೆಸ್ ಪಕ್ಷ ತಲೆ ಮೇಲೆ ಚಪ್ಪಡಿ ಕಲ್ಲುಹಾಕಿಕೊಂಡಂತೆ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ಎಚ್ಚರಿಕೆ ನೀಡಿದರು. ಸಿದ್ದರಾಮಯ್ಯ ಸೈಲೆಂಟಾಗಿದ್ದಾರೆ ಎಂದರೆ ಹುಲಿ ನಾಲ್ಕು ಹೆಜ್ಜೆ ಹಿಂದೆ ಇಟ್ಟಿದೆ ಎಂದರೆ ಮುಂದಿನ ಅಟ್ಯಾಕ್ ಗೆ ಸಿದ್ದತೆ ಎಂದು ಹೇಳಿದರು.

Read More
Next Story