x

ಕಾಂಗ್ರೆಸ್‌ನಲ್ಲಿ KMF ಅಧ್ಯಕ್ಷ ಗಾದಿಗಾಗಿ ಶುರುವಾಯ್ತು ಪೈಫೋಟಿ, ಯಾರು ಮುಂದಿನ ಬಾಸ್‌?

ಕರ್ನಾಟಕ ಹಾಲು ಒಕ್ಕೂಟ ಅಧ್ಯಕ್ಷ ಸ್ಥಾನದ ಚುನಾವಣೆ ಕಾಂಗ್ರೆಸ್ ನಲ್ಲಿ ರಾಜಕೀಯ ಸಂಘರ್ಷಕ್ಕೆ ಕಾರಣವಾಗುವ ಚರ್ಚೆಗಳು ಶುರುವಾಗಿದೆ. ಡಿ.ಕೆ.ಸುರೇಶ್ ಹಾಗೂ ಸಿದ್ದರಾಮಯ್ಯ ಆಪ್ತರಾದ ಕೆ.ವೈ. ನಂಜೇಗೌಡ, ರಾಘವೇಂದ್ರ ಹಿಟ್ನಾಳ್ ನಡುವೆ ಪೈಪೋಟಿ ಏರ್ಪಟ್ಟಿದೆ.


ಕರ್ನಾಟಕ ಹಾಲು ಒಕ್ಕೂಟ (KMF) ಅಧ್ಯಕ್ಷ ಸ್ಥಾನದ ಚುನಾವಣೆ ಕಾಂಗ್ರೆಸ್‌ನಲ್ಲಿ ರಾಜಕೀಯ ಸಂಘರ್ಷಕ್ಕೆ ಕಾರಣವಾಗುವ ಚರ್ಚೆಗಳು ಶುರುವಾಗಿದೆ. ಅಪೆಕ್ಸ್ ಬ್ಯಾಂಕ್ ಚುನಾವಣೆ ಮುಗಿದ ಬೆನ್ನಲ್ಲೇ ಇದೀಗ ಕೆಎಂಎಫ್ ಚುನಾವಣೆಗೆ ಪೈಪೋಟಿ ಆರಂಭವಾಗಿದೆ. ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಹಾಗೂ ಸಿದ್ದರಾಮಯ್ಯ ಆಪ್ತರಾದ ಮಾಲೂರು ಕ್ಷೇತ್ರದ ಶಾಸಕ ಕೆ.ವೈ. ನಂಜೇಗೌಡ, ಕೊಪ್ಪಳ‌‌ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ್ ನಡುವೆ ಪೈಪೋಟಿ ಏರ್ಪಟ್ಟಿದೆ. ʼದ ಫೆಡರಲ್ ಕರ್ನಾಟಕ' ಸಂದರ್ಶನದಲ್ಲಿ ಕೆ.ವೈ.ನಂಜೇಗೌಡ ಅವರು ಮಾತನಾಡಿದ್ದಾರೆ.

ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಈಗಾಗಲೇ ವಿಳಂಬವಾಗಿದೆ ಇನ್ನು ತಡ ಮಾಡದೆ ಚುನಾವಣೆ ಮಾಡಬೇಕು ಎಂದು ಆಗ್ರಹಿಸಿದರು.ಸರ್ಕಾರ ಕೆಎಂಎಫ್‌ ಚುನಾವಣೆ ಚುನಾವಣೆಯನ್ನು ಘೋಷಣೆ ಮಾಡಬೇಕು ಶೀಘ್ರದಲ್ಲೇ ಚುನಾವಣೆ ಮಾಡುವ ಭರವಸೆಯಿದೆ ಎಂದು ಹೇಳಿದ್ದಾರೆ.

ಕಳೆದ ಬಾರಿ ನಾನು ಕೆಎಂಎಫ್ ಅಧ್ಯಕ್ಷ‌ ಸ್ಥಾನದ ಆಕಾಂಕ್ಷಿಯಾಗಿದ್ದೆ, ಆಗ ಸಿದ್ದರಾಮಯ್ಯ ಸಿಎಂ ಹಾಗೂ ಡಿ.ಕೆ.ಶಿವಕುಮಾರ್ ಡಿಸಿಎಂ ಇದ್ದರು. ಇಬ್ಬರೂ ಮುಂದಿನ ಬಾರಿ ನಿನಗೆ ಅವಕಾಶ ನೀಡುವ ಮಾತು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಕೊಟ್ಟ ಮಾತಿನಂತೆ ನನಗೆ ಈ ಬಾರಿ ಕೆಎಂಎಫ್ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಹೇಳಿ‌ದದರು. ಈಗ ಮಾತಿಗೆ ತಪ್ಪಬಾರದು ಎಂದು ಹೇಳಿದ್ದಾರೆ.

ಡಿ.ಕೆ.ಸುರೇಶ್ ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಅಕಾಂಕ್ಷಿ ಆಗಿರುವ ಪ್ರಶ್ನೆಗೆ ಉತ್ತರಿಸಿದ ನಂಜೇಗೌಡ ಅಂತಹ ದೊಡ್ಡವರು ಈ ಚುನಾವಣೆಗೆಲ್ಲ ಬರಬಾರದು ಬರಲ್ಲ ಎಂದು ಕೊಂಡಿದ್ದೇನೆ. ಅವರು ರಾಜ್ಯಸಭೆಗೆ ಸಹ ಹೋಗಬಹುದು. ಒಂದು ವೇಳೆ ಅವರು ಸ್ಪರ್ಧಿಸಿದರೆ ಎಂಬ ಪ್ರಶ್ನೆಗೆ ದೊಡ್ಡವರು ಸ್ಪರ್ಧೆ ಮಾಡಿದರು ಏನು ಮಾಡುವುದು ಎಂದು ಹೇಳಿದ್ದಾರೆ.

ನಮ್ಮ‌ ಜಿಲ್ಲೆಗೆ ಈ ಸಚಿವ ಸಂಪುಟದಲ್ಲಿ ಸ್ಥಾನ‌ ನೀಡಿಲ್ಲ.‌ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ, ಆದರೆ ನನಗೆ ಸಿಕ್ಕಿಲ್ಲ ಅಂದರೂ ಪರವಾಗಿಲ್ಲ ನಮ್ಮ ಜಿಲ್ಲೆಗೆ ಯಾರಿಗಾದರೂ ಸಚಿವ ಸ್ಥಾನ ನೀಡಬೇಕಿತ್ತು ಎಂದು ಹೇಳಿದ್ದಾರೆ.

Read More
Next Story