ವೀಕೆಂಡ್‌ ಮಜಾಕ್ಕೆ ಮಳೆಯ ಸಾಥ್‌!  ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಳೆ ಹೇಗಿದೆ?  ವಿಜ್ಞಾನಿ  ಸಿ.ಎಸ್.ಪಾಟೀಲ್ ಮಾಹಿತಿ
x

ವೀಕೆಂಡ್‌ ಮಜಾಕ್ಕೆ ಮಳೆಯ ಸಾಥ್‌! ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಳೆ ಹೇಗಿದೆ? ವಿಜ್ಞಾನಿ ಸಿ.ಎಸ್.ಪಾಟೀಲ್ ಮಾಹಿತಿ

ದಿಢೀರ್ ಮಳೆ ಬಂದು ಬರಗಾಲದಲ್ಲಿ ಬೆಂದಿದ್ದ ಜನರಿಗೆ ತುಸು ನೆಮ್ಮದಿಯಾಗಿದೆ. ಮಳೆ ಪ್ರಮಾಣ ಹೇಗಿದೆ ಎಂಬ ಬಗ್ಗೆ ಹವಾಮಾನ ಹಿರಿಯ ವಿಜ್ಞಾನಿ ಸಿ.ಎಸ್.‌ಪಾಟೀಲ್ ಮಾಹಿತಿ ನೀಡಿದ್ದಾರೆ,


Click the Play button to hear this message in audio format

ರಾಜ್ಯದಲ್ಲಿ ಶುಕ್ರವಾರ ಸಂಜೆ ಬಳಿಕ ದಿಢೀರನೆ ಸುರಿದ ಮಳೆ, ಬರದ ಬಿಸಿಗೆ ಕಂಗೆಟ್ಟಿದ್ದ ಜನರಿಗೆ ತುಸು ನೆಮ್ಮದಿ ತಂದಿದೆ.

ಆದರೆ, ರಾಜಧಾನಿ ಬೆಂಗಳೂರಿನ ಹಲವೆಡೆ ಮಳೆಯಿಂದಾಗಿ ಸಾರ್ವಜನಿಕರಿಗೆ ಕಿರಿಕಿರಿಯೂ ಉಂಟಾಗಿದೆ. ದಸರಾ ರಜೆಗೆಂದು ಕುಟುಂಬ ಸಮೇತ ಊರಿಗೆ ತೆರಳುವ ಹಾಗೂ ಸ್ನೇಹಿತ ಸಹಿತ ಪ್ರವಾಸ ತೆರಳುವ ಹಾಗೂ ವೀಕೆಂಡ್‌ ಕಾರ್ಯಕ್ರಮಗಳಲ್ಲಿ ತೊಡಗುವವರಿಗೆ ತುಸು ತೊಂದರೆಯಾಗಿದೆ.

ವಾರಾಂತ್ಯದಲ್ಲಿ ಮಳೆ ಪ್ರಮಾಣ ಹೇಗಿರಲಿದೆ ಮತ್ತು ಎಷ್ಟು ದಿನ ಮುಂದುವರಿಯಲಿದೆ ಎಂಬ ಕುರಿತು ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಸಿ.ಎಸ್. ಪಾಟೀಲ್ ಅವರು ‘ದ ಫೆಡರಲ್ ಕರ್ನಾಟಕ’ಕ್ಕೆ ನೀಡಿದ ಸಂದರ್ಶನದಲ್ಲಿ ವಿವರಣೆ ನೀಡಿದ್ದಾರೆ.

ಈಶಾನ್ಯ ಮುಂಗಾರಿನ ಪ್ರಭಾವ ಹಾಗೂ ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕ್ಟೋಬರ್ 22ರವರೆಗೆ ಮಳೆ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಕೆಲವೆಡೆ ಸಾಧಾರಣ ಗುಡುಗು-ಮಿಂಚು ಕಂಡುಬರಲಿದ್ದು, ಭಾರೀ ಪ್ರಮಾಣದ ಗುಡುಗು ಇರುವುದಿಲ್ಲ ಎಂದಿದ್ದಾರೆ.

ಕರಾವಳಿ ಮತ್ತು ಮಲೆನಾಡು ಭಾಗಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಸೇರಿದಂತೆ ದಾವಣಗೆರೆ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಮಳೆ ಬಿರುಸು ಪಡೆದುಕೊಳ್ಳಲಿದೆ. ದಕ್ಷಿಣ ಒಳನಾಡಿನಲ್ಲಿ ಮಳೆಯ ಪ್ರಮಾಣ ಹೆಚ್ಚಿರಲಿದ್ದರೂ, ಒಟ್ಟಾರೆಯಾಗಿ ವಾಡಿಕೆಗಿಂತ ಕಡಿಮೆ ಇರಲಿದೆ.

ಇತ್ತೀಚಿನ ದಿನಗಳಲ್ಲಿ ವಾಡಿಕೆಗಿಂತ ಸುಮಾರು 3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದ್ದ ಉಷ್ಣಾಂಶವು, ಸದ್ಯ ಸುರಿದ ಮಳೆಯ ಪರಿಣಾಮವಾಗಿ ಸಹಜ ಸ್ಥಿತಿಗೆ ಮರಳಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Read More
Next Story