x

ಸೌದಿಯಲ್ಲಿ 600 ಕನ್ನಡಿಗರ ಆರ್ತನಾದ: ಕೈಯಲ್ಲಿ ಕಾಸಿಲ್ಲ, ಊಟಕ್ಕೂ ಗತಿಯಿಲ್ಲ

ಸೌದಿ ಅರೇಬಿಯಾದಲ್ಲಿ ವಿಮಾನಗಳ ಬಂದ್ ನಿಂದ ಕರ್ನಾಟಕದ 600 ಉಮ್ರಾ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೌದಿ ಅರೇಬಿಯಾದಲ್ಲಿರುವ ಕನ್ನಡಿಗ ಅಪ್ಸರ್ ಹಿಂದುಸ್ತಾನಿ ಅವರು ದ 'ಫೆಡರಲ್ ಕರ್ನಾಟಕ' ನೀಡಿದ ವಿಶೇಷ ಸಂದರ್ಶನದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ.


Click the Play button to hear this message in audio format

ಸೌದಿ ಅರೇಬಿಯಾದಲ್ಲಿ ಭದ್ರತಾ ಆತಂಕದ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟ ರದ್ದಾಗಿದ್ದು, ಉಮ್ರಾ ಯಾತ್ರೆಗೆ ತೆರಳಿರುವ ನೂರಾರು ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಊರಿಗೆ ಮರಳಲು ಸಾಧ್ಯವಾಗದೆ, ಊಟ ಮತ್ತು ವಸತಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸೌದಿ ಅರೇಬಿಯಾದಲ್ಲಿ ಸುಮಾರು 600 ಕನ್ನಡಿಗರು ಸಿಲುಕಿಕೊಂಡಿದ್ದಾರೆ ಎಂದು ಅಫ್ಸರ್ ಹಿಂದೂಸ್ತಾನಿ ತಿಳಿಸಿದ್ದಾರೆ. ವಿಮಾನ ಟಿಕೆಟ್‌ಗಳು ರದ್ದಾಗಿರುವುದರಿಂದ ಯಾತ್ರಿಕರು ತೀವ್ರ ಆತಂಕದಲ್ಲಿದ್ದಾರೆ. ಹೋಟೆಲ್‌ಗಳ ಬಾಡಿಗೆ ಮತ್ತು ಊಟದ ವೆಚ್ಚ ಹೆಚ್ಚುತ್ತಿರುವುದರಿಂದ ಆರ್ಥಿಕ ಸಂಕಷ್ಟವೂ ಎದುರಾಗಿದೆ ಎಂದು ಅವರು ಹೇಳಿದ್ದಾರೆ.

ಸಹಾಯವಾಣಿ ಸಂಪರ್ಕಿಸಿದರೂ ಪ್ರತಿಕ್ರಿಯೆ ಇಲ್ಲ ಎಂಬ ಆರೋಪ

ಸಂಕಷ್ಟದಲ್ಲಿರುವ ಯಾತ್ರಿಕರ ವಿವರಗಳನ್ನು ಸಹಾಯವಾಣಿ ಸಂಖ್ಯೆಗೆ ನೀಡಿದ್ದರೂ, ತಮ್ಮನ್ನು ಸಂಪರ್ಕಿಸಿ ಪರಿಸ್ಥಿತಿ ವಿಚಾರಿಸುವವರಿಲ್ಲ ಎಂದು ಅಫ್ಸರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರು ಹೋಟೆಲ್ ವೆಚ್ಚ ಭರಿಸಲಾಗದೆ ಹೊರಬರುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ವಿಶೇಷ ವಿಮಾನದ ಮೂಲಕ ಸುರಕ್ಷಿತವಾಗಿ ಕರೆತರಲು ಆಗ್ರಹ

ಕರ್ನಾಟಕ ಮತ್ತು ಕೇಂದ್ರ ಸರ್ಕಾರಗಳು ತಕ್ಷಣ ಮಧ್ಯಪ್ರವೇಶಿಸಿ, ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಮನ್ವಯ ಸಾಧಿಸಬೇಕು. ಅಗತ್ಯವಿದ್ದರೆ ವಿಶೇಷ ವಿಮಾನದ ವ್ಯವಸ್ಥೆ ಮಾಡಿ, ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಬೇಕು ಎಂದು ಅವರು ಮನವಿ ಮಾಡಿದ್ದಾರೆ.

Read More
Next Story