No census of its own state bird: Forest Department fails to provide data on blue-throated birds
x

ರಾಜ್ಯ ಪಕ್ಷಿ ನೀಲಕಂಠ (ಸಾಂದರ್ಭಿಕ ಚಿತ್ರ)

ರಾಜ್ಯ ಪಕ್ಷಿ ʼನೀಲಕಂಠʼದ ಗಣತಿಯೂ ಇಲ್ಲ, ಸಂರಕ್ಷಣಾ ಕಾರ್ಯವೂ ಇಲ್ಲ! ಸರ್ಕಾರದ ಅಚ್ಚರಿಯ ಉತ್ತರ!

ನೀಲಕಂಠ ಪಕ್ಷಿಗಳ ಸಂಖ್ಯೆ ಎಷ್ಟಿದೆ ಎಂಬ ಗಣತಿ ಕಾರ್ಯ ನಡೆದಿಲ್ಲ ಎಂದು ಉತ್ತರಿಸುವ ಮೂಲಕ ತನ್ನದೇ ಆದ ರಾಜ್ಯ ಪಕ್ಷಿಯ ಸಂಖ್ಯೆಯ ಬಗ್ಗೆ ಮಾಹಿತಿ ಇಲ್ಲ ಎಂದಿರುವುದು ಅಚ್ಚರಿ ತಂದಿದೆ.


Click the Play button to hear this message in audio format

ಕರ್ನಾಟಕದ ಹೆಮ್ಮೆಯ ಸಂಕೇತ, ಕರುನಾಡಿನ ರಾಜ್ಯಪಕ್ಷಿಯಾಗಿರುವ ನೀಲಕಂಠ ಸಂತತಿಯ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇಲ್ಲ! ಅಳಿವಿನಂಚಿಲ್ಲಿರುವ ನೀಲಕಂಠ ಸಂತತಿಯ ಸಂರಕ್ಷಣಾ ಕ್ರಮವೂ ಇಲ್ಲ!

ಅರಣ್ಯ ಸಚಿವ ಈಶ್ವರ್‌ ಖಂಡ್ರೆಯವರೇ ವಿಧಾನಸಭೆ ಅಧಿವೇಶನದಲ್ಲಿ ನೀಲಕಂಠ ಪಕ್ಷಿಯ ಅಂಕಿ-ಅಂಶಗಳಿಲ್ಲ ಎಂದಿರುವುದು ಅಚ್ಚರಿಗೆ ಕಾರಣವಾಗಿದೆ.

ಸೋಮವಾರ (ಮಾ.23) ವಿಧಾನ ಪರಿಷತ್ತಿನಲ್ಲಿ ಸದಸ್ಯರಾದ ವೈ.ಎಂ. ಸತೀಶ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ, "ರಾಜ್ಯದಲ್ಲಿ ನೀಲಕಂಠ ಪಕ್ಷಿಗಳ ಸಂಖ್ಯೆ ಎಷ್ಟಿದೆ ಎಂಬ ಬಗ್ಗೆ ಈವರೆಗೂ ಯಾವುದೇ ಗಣತಿ ಕಾರ್ಯ ನಡೆದಿಲ್ಲ" ಎಂದು ಉತ್ತರ ನೀಡಿದ್ದಾರೆ.

ಒಂದು ದಶಕದಲ್ಲಿ ಶೇ.30 ರಷ್ಟು ಸಂತತಿ ಕುಸಿತ

ತಿರುಪತಿಯ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಮತ್ತು ತಂಡ ನಡೆಸಿದ ಅಧ್ಯಯನದ ಪ್ರಕಾರ ಕಳೆದ 12 ವರ್ಷಗಳಲ್ಲಿ ಕರ್ನಾಟಕದಲ್ಲಿ ಶೇ.30ರಷ್ಟು ನೀಲಕಂಠ ಪಕ್ಷಿಗಳು ಕಡಿಮೆಯಾಗಿವೆ. ಜೊತೆಗೆ ಪಕ್ಷಿಗಳ ಅವನತಿಗೆ ಕಾರಣಗಳನ್ನು ತಿಳಿಸಿದ್ದು, ನೀಲಕಂಠ ಪಕ್ಷಿಗಳು (Indian Roller) ಕಣ್ಮರೆಯಾದರೆ ಅದರಿಂದಾಗುವ ಸಮಸ್ಯೆಗಳ ಬಗ್ಗೆಯೂ ಹೇಳಿದೆ.

ಆರು ವರ್ಷಗಳಲ್ಲಿ ಗಣನೀಯ ಇಳಿಕೆ

ಕಳೆದ ಆರು ವರ್ಷಗಳ ಎಣಿಕೆಯನ್ನು ಗಮನಿಸಿದಾಗ ಪಕ್ಷಿಗಳು ಗಮನಾರ್ಹವಾಗಿ ಇಳಿಕೆಯಾಗಿರುವುದನ್ನು ಗಮನಿಸಬಹುದಾಗಿದೆ. 2019, 2020, 2021, 2022, 2023 ಹಾಗೂ 2024 ರ ಸಮೀಕ್ಷೆಯಂತೆ ಆಂಧ್ರ ಪ್ರದೇಶದಲ್ಲಿ ಕ್ರಮವಾಗಿ 10, 20, 30, 40, 20 ಹಾಗೂ 70 ಪಕ್ಷಿಗಳು, ಕರ್ನಾಟಕದಲ್ಲಿ 60, 140, 340, 220, 140 ಹಾಗೂ 240 ಪಕ್ಷಿಗಳು, ಒಡಿಶಾದಲ್ಲಿ 5, 5, 10, 15, 5 ಹಾಗೂ 20 ಪಕ್ಷಿಗಳು, ತೆಲಂಗಾಣದಲ್ಲಿ15, 20, 10, 25, 15 ಹಾಗೂ 20 ಪಕ್ಷಿಗಳು ಕಾಣಿಸಿಕೊಂಡಿದ್ದವು.

ರಾಜ್ಯ ಪಕ್ಷಿಯ ವೈಶಿಷ್ಟ್ಯ ಮತ್ತು ಮಹತ್ವವೇನು ?

ತನ್ನ ಆಕರ್ಷಕ ನೀಲಿ ಮತ್ತು ಕಡು ನೀಲಿ ಬಣ್ಣಗಳಿಂದ ಪಕ್ಷಿ ಪ್ರಿಯರನ್ನು ಮತ್ತು ಪರಿಸರಾಸಕ್ತರನ್ನು ಸದಾ ಮಂತ್ರಮುಗ್ಧಗೊಳಿಸುವ 'ನೀಲಕಂಠ' (Indian Roller), ದಕ್ಷಿಣ ಏಷ್ಯಾದಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ಸುಂದರ ಪಕ್ಷಿಯಾಗಿದೆ. ಇದರ ಕಂಠದ ಭಾಗವು ನೀಲಿ ಬಣ್ಣದಿಂದ ಕೂಡಿರುವುದರಿಂದ, ಇದಕ್ಕೆ 'ನೀಲಕಂಠ' ಎಂಬ ಅನ್ವರ್ಥನಾಮ ಬಂದಿದೆ. ಇದು ಕೇವಲ ತನ್ನ ಸೌಂದರ್ಯದಿಂದ ಮಾತ್ರವಲ್ಲದೆ, ಸಾಂಸ್ಕೃತಿಕವಾಗಿಯೂ ಮಹತ್ವ ಪಡೆದಿದೆ. ನೀಲಕಂಠ ಪಕ್ಷಿಯು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ ಮತ್ತು ಒಡಿಶಾ ರಾಜ್ಯಗಳ 'ರಾಜ್ಯ ಪಕ್ಷಿ' ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದು ಈ ರಾಜ್ಯಗಳ ನೈಸರ್ಗಿಕ ಸಂಪತ್ತು ಮತ್ತು ಜೀವವೈವಿಧ್ಯದ ಸಂಕೇತವಾಗಿದೆ.

Read More
Next Story