ಅನಧಿಕೃತ ಫ್ಲೆಕ್ಸ್ ಹಾಕಿದ್ರೆ ಇನ್ಮುಂದೆ ಕ್ರಿಮಿನಲ್ ಕೇಸ್:  ಎಲ್ಇಡಿ ಜಾಹೀರಾತಿಗೆ ಪ್ರತ್ಯೇಕ ದರ
x

ಅನಧಿಕೃತ ಫ್ಲೆಕ್ಸ್ ಹಾಕಿದ್ರೆ ಇನ್ಮುಂದೆ ಕ್ರಿಮಿನಲ್ ಕೇಸ್: ಎಲ್ಇಡಿ ಜಾಹೀರಾತಿಗೆ ಪ್ರತ್ಯೇಕ ದರ

ಅನಧಿಕೃತ ಜಾಹೀರಾತು ಫಲಕಗಳ ನಿಯಂತ್ರಣ ಮತ್ತು ಸ್ಥಳೀಯ ಸಂಸ್ಥೆಗಳ ಆದಾಯ ಮೂಲಗಳನ್ನು ಭದ್ರಪಡಿಸುವ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ ಸದನದಲ್ಲಿ ಅಂಗೀಕಾರಗೊಂಡಿದೆ.


Click the Play button to hear this message in audio format

ನಗರ ಪ್ರದೇಶಗಳಲ್ಲಿನ ಅನಧಿಕೃತ ಜಾಹೀರಾತು ಫಲಕಗಳ ನಿಯಂತ್ರಣ ಮತ್ತು ಸ್ಥಳೀಯ ಸಂಸ್ಥೆಗಳ ಆದಾಯ ಮೂಲಗಳನ್ನು ಭದ್ರಪಡಿಸುವ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ ಸದನದಲ್ಲಿ ಅಂಗೀಕಾರಗೊಂಡಿದೆ.

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮಂಡಿಸಿದ ಈ ವಿಧೇಯಕವನ್ನು ಚರ್ಚಿಸಿದ ಬಳಿಕ ಅಂಗೀಕರಿಸಲಾಯಿತು. ನಗರ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್‌ಗಳು ನಗರದ ಸೌಂದರ್ಯವನ್ನು ಹಾಳುಗೆಡವುತ್ತಿವೆ. ಈ ವಿಧೇಯಕದ ಮೂಲಕ ಜಾಹೀರಾತುಗಳ ಮೇಲೆ ನಿರ್ದಿಷ್ಟ ಶುಲ್ಕವನ್ನು ವಿಧಿಸಲು ಮತ್ತು ಅವುಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಲು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗಿದೆ. ಇದರಿಂದಾಗಿ ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ಶಕ್ತಿ ದೊರೆಯಲಿದೆ.

ಅನಧಿಕೃತವಾಗಿ ಜಾಹೀರಾತುಗಳನ್ನು ಪ್ರದರ್ಶಿಸುವವರ ಮೇಲೆ ಕೇವಲ ದಂಡ ವಿಧಿಸುವುದು ಮಾತ್ರವಲ್ಲದೆ, ಈ ಹಿಂದೆ ಸಂಗ್ರಹಿಸಲಾದ ಶುಲ್ಕ ಮತ್ತು ದಂಡಗಳನ್ನು ಕಾನೂನುಬದ್ಧವಾಗಿ ಸಿಂದುಗೊಳಿಸಲು ಈ ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದು ಕಾನೂನಾತ್ಮಕ ತೊಡಕುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ನಗರ ಯೋಜನೆಗಳಲ್ಲಿ ಪಾರದರ್ಶಕತೆ ತರುವುದು ಮತ್ತು ಸಾರ್ವಜನಿಕ ಸ್ಥಳಗಳ ದುರ್ಬಳಕೆಯನ್ನು ತಡೆಯುವುದು ಈ ವಿಧೇಯಕದ ಆಶಯವಾಗಿದೆ.

ರಾಜ್ಯದ ನಗರ ಪ್ರದೇಶಗಳಲ್ಲಿ ದಶಕಗಳಿಂದ ಅವ್ಯಾಹತವಾಗಿ ನಡೆಯುತ್ತಿದ್ದ ಅನಧಿಕೃತ ಜಾಹೀರಾತು ಹಾವಳಿಗೆ ಕಡಿವಾಣ ಹಾಕಲು ಮತ್ತು ಸ್ಥಳೀಯ ಸಂಸ್ಥೆಗಳ ಖಜಾನೆ ತುಂಬಿಸಲು ರಾಜ್ಯ ಸರ್ಕಾರ ಮುಂದಾಗಿದೆ. ನಗರ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್‌ಗಳು ನಗರದ ಸೌಂದರ್ಯವನ್ನು ಹಾಳುಗೆಡವುತ್ತಿವೆ. ಈ ವಿಧೇಯಕದ ಮೂಲಕ ಜಾಹೀರಾತುಗಳ ಮೇಲೆ ನಿರ್ದಿಷ್ಟ ಶುಲ್ಕವನ್ನು ವಿಧಿಸಲು ಮತ್ತು ಅವುಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಲು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗಿದೆ. ಇದರಿಂದಾಗಿ ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ಶಕ್ತಿ ದೊರೆಯಲಿದೆ.

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿಧಾನಸಭೆಯಲ್ಲಿ ಮಂಡಿಸಿದ ಕರ್ನಾಟಕ ಪೌರನಿಗಮಗಳ (ತಿದ್ದುಪಡಿ) ಮತ್ತು ಪೌರಸಭೆಗಳ (ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸಲಾಯಿತು. ವಿಧೇಯಕ ಕುರಿತು ಮಾತನಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ಕಳೆದ ಹಲವಾರು ವರ್ಷಗಳಿಂದ ಮಹಾನಗರ ಪಾಲಿಕೆಗಳು ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿ ಸಾವಿರಾರು ಜಾಹೀರಾತು ಫಲಕಗಳು ತಲೆ ಎತ್ತಿವೆ. ಆದರೆ, ಇವುಗಳಿಂದ ಬರಬೇಕಾದ ಆದಾಯ ಮಾತ್ರ ಸರ್ಕಾರದ ಬೊಕ್ಕಸಕ್ಕೆ ತಲುಪುತ್ತಿರಲಿಲ್ಲ. ಕೆಲವೇ ಕೆಲವು ಸಂಸ್ಥೆಗಳು ಮಾತ್ರ ಶುಲ್ಕ ಪಾವತಿಸುತ್ತಿವೆ, ಉಳಿದವರು ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಸ್ಥಳೀಯ ಸಂಸ್ಥೆಗಳಿಗೆ ನೂರಾರು ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ಸಚಿವರು ಸದನದಲ್ಲಿ ಕಳವಳ ವ್ಯಕ್ತಪಡಿಸಿದರು. ಹೊಸ ಕಾನೂನಿನ ಪ್ರಕಾರ, ಪ್ರತಿ ಜಾಹೀರಾತಿನ ಮೇಲೆ ಕಟ್ಟುನಿಟ್ಟಾದ ಶುಲ್ಕ ಮತ್ತು ತೆರಿಗೆಯನ್ನು ವಿಧಿಸಲಾಗುತ್ತದೆ ಎಂದು ಹೇಳಿದರು.

ಸ್ಥಳಕ್ಕನುಗುಣವಾಗಿ ಶುಲ್ಕ ನಿಗದಿ

ಈ ವಿಧೇಯಕದ ಅಡಿಯಲ್ಲಿ ಜಾಹೀರಾತು ಶುಲ್ಕವನ್ನು ಏಕರೂಪವಾಗಿ ವಿಧಿಸದೆ, ಆಯಾ ಪ್ರದೇಶದ ಮಹತ್ವಕ್ಕೆ ಅನುಗುಣವಾಗಿ ವರ್ಗೀಕರಿಸಲಾಗಿದೆ. ಜಾಹೀರಾತು ಫಲಕದ ಗಾತ್ರ ಮತ್ತು ಅದು ಎಷ್ಟು ದಿನಗಳ ಕಾಲ ಪ್ರದರ್ಶನಗೊಳ್ಳುತ್ತದೆ ಎಂಬುದರ ಮೇಲೆ ದರ ನಿರ್ಧಾರವಾಗಲಿದೆ. ವಾಣಿಜ್ಯ ಪ್ರದೇಶಗಳು ಮತ್ತು ಜನನಿಬಿಡ ರಸ್ತೆಗಳಲ್ಲಿನ ಜಾಹೀರಾತುಗಳಿಗೆ ಹೆಚ್ಚಿನ ಶುಲ್ಕ ಇರಲಿದೆ ಎಂದರು.

ಪ್ಲಾಸ್ಟಿಕ್ ಫ್ಲೆಕ್ಸ್, ಬಂಟಿಂಗ್ಸ್ ಸಂಪೂರ್ಣ ನಿಷೇಧ

ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಹಸಿರು ನ್ಯಾಯಮಂಡಳಿ ನೀಡಿರುವ ನಿರ್ದೇಶನವನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿದೆ. ರಾಜ್ಯಾದ್ಯಂತ ಪ್ಲಾಸ್ಟಿಕ್ ಬಳಸಿದ ಫ್ಲೆಕ್ಸ್, ಬ್ಯಾನರ್ ಮತ್ತು ಬಂಟಿಂಗ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಕೇವಲ ಫ್ಲೆಕ್ಸ್ ಹಾಕಿದವರ ಮೇಲೆ ಮಾತ್ರವಲ್ಲ, ಅದನ್ನು ಮುದ್ರಿಸಿದ ಮಾಲೀಕರ ಮೇಲೆಯೂ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಅನಧಿಕೃತ ಜಾಹೀರಾತುಗಳನ್ನು ಪತ್ತೆಹಚ್ಚಲು ಸರ್ಕಾರ ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ. ಕೃತಕ ಬುದ್ಧಿಮತ್ತೆ ಮತ್ತು ಡ್ರೋನ್ ಕ್ಯಾಮೆರಾಗಳ ಮೂಲಕ ನಗರದಾದ್ಯಂತ ಸಮೀಕ್ಷೆ ನಡೆಸಲಾಗುವುದು. ಯಾವುದೇ ಪರವಾನಗಿ ಇಲ್ಲದ ಅಥವಾ ತೆರಿಗೆ ಪಾವತಿಸದ ಜಾಹೀರಾತುಗಳು ಕಂಡುಬಂದಲ್ಲಿ ಅವುಗಳನ್ನು ತಕ್ಷಣವೇ ತೆರವುಗೊಳಿಸಿ, ವಾರಸುದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಹೇಳಿದರು.

ಎಲ್ಇಡಿ ಜಾಹೀರಾತು ಫಲಕಗಳಿಗೆ ಪ್ರತ್ಯೇಕ ದರ

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅಥವಾ ಎಲ್ಇಡಿ ಜಾಹೀರಾತು ಫಲಕಗಳ ಸಂಖ್ಯೆ ಹೆಚ್ಚುತ್ತಿದೆ. ಇವುಗಳಿಂದ ವಾಹನ ಸವಾರರ ಗಮನಕ್ಕೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ, ಇವುಗಳ ಅಳವಡಿಕೆಗೆ ಪ್ರತ್ಯೇಕ ನಿಯಮಾವಳಿ ಮತ್ತು ಶುಲ್ಕವನ್ನು ನಿಗದಿಪಡಿಸಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ. ಅನೇಕ ನಾಗರಿಕರು ತಮ್ಮ ಸ್ವಂತ ಕಟ್ಟಡ ಅಥವಾ ಜಾಗದಲ್ಲಿ ದೊಡ್ಡ ಹೋರ್ಡಿಂಗ್‌ಗಳನ್ನು ಅಳವಡಿಸಿ ಆದಾಯ ಗಳಿಸುತ್ತಿದ್ದರು. ಈಗಿನ ತಿದ್ದುಪಡಿಯ ಪ್ರಕಾರ, ಸ್ವಂತ ಜಾಗದಲ್ಲಿದ್ದರೂ ಸಹ ಅದು ಸಾರ್ವಜನಿಕರಿಗೆ ಕಾಣುವಂತಿದ್ದರೆ ಅಂತಹ ಜಾಹೀರಾತುಗಳಿಗೆ ನಿಗದಿತ ತೆರಿಗೆಯನ್ನು ಪಾವತಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.

Read More
Next Story