Despite opposition, Karnataka ranks first in electricity generation in the country
x

ಶರಾವತಿ ಪಂಪ್ಡ್‌ ಸ್ಟೋರೇಜ್‌

Power Sector|ವಿದ್ಯುತ್‌ ಉತ್ಪಾದನೆ: ದೇಶದಲ್ಲೇ ಕರ್ನಾಟಕ ನಂಬರ್‌ -1

ಶರಾವತಿ ಹಾಗೂ ವಾರಾಹಿ ಯೋಜನೆಗಳಿಂದ ಪಶ್ಚಿಮಘಟ್ಟಕ್ಕೆ ವಿನಾಶ ಕಾದಿದೆ ಎಂಬ ಪರಿಸರವಾದಿಗಳ ಕಾಳಜಿ ನಡುವೆಯೂ ಇಂತಹ ಯೋಜನೆಗಳಿಂದಲೇ ರಾಜ್ಯ ವಿದ್ಯುತ್‌ ಉತ್ಪಾದನೆಯಲ್ಲಿ ದೇಶದಲ್ಲೇ ಮಂಚೂಣಿಯಲ್ಲಿದೆ ಎಂದು ಸರ್ಕಾರ ವಾದಿಸಿದೆ.


Click the Play button to hear this message in audio format

ಶರಾವತಿ ಪಂಪ್ಡ್‌ ಸ್ಟೋರೇಜ್‌ ಸೇರಿದಂತೆ ರಾಜ್ಯದ ಹಲವು ಜಲ ವಿದ್ಯುತ್‌ ಯೋಜನೆಗಳಿಗೆ ಪರಿಸರವಾದಿಗಳು ಹಾಗೂ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ, ದೇಶದಲ್ಲೇ ಅತಿ ಹೆಚ್ಚು ಜಲವಿದ್ಯುತ್‌ ಉತ್ಪಾದಿಸುವ ಮೂಲಕ ಕರ್ನಾಟಕ ನೂತನ ದಾಖಲೆ ಬರೆದಿದೆ.

ಶರಾವತಿ ಹಾಗೂ ವಾರಾಹಿ ಯೋಜನೆಗಳಿಂದ ಪಶ್ಚಿಮಘಟ್ಟಕ್ಕೆ ವಿನಾಶ ಕಾದಿದೆ ಎಂಬ ಪರಿಸರವಾದಿಗಳ ಕಾಳಜಿ ನಡುವೆಯೂ ಇಂತಹ ಯೋಜನೆಗಳಿಂದಲೇ ರಾಜ್ಯ ವಿದ್ಯುತ್‌ ಉತ್ಪಾದನೆಯಲ್ಲಿ ದೇಶದಲ್ಲೇ ಮಂಚೂಣಿಯಲ್ಲಿದೆ ಎಂದು ಸರ್ಕಾರ ವಾದಿಸಿದೆ.

ವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) 2025-26ನೇ ಸಾಲಿನಲ್ಲಿ 15,509 ದಶಲಕ್ಷ ಯೂನಿಟ್ ಜಲ ವಿದ್ಯುತ್ ಉತ್ಪಾದಿಸುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ರಾಜ್ಯವು 3.63 ಗಿಗಾವ್ಯಾಟ್ ವಿದ್ಯುತ್‌ನೊಂದಿಗೆ ಜಲ ವಿದ್ಯುತ್ ಉತ್ಪಾದನೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ಇತ್ತೀಚೆಗೆ ಕೇಂದ್ರದ ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ವರದಿ ನೀಡಿರುವ ಮಧ್ಯೆಯೇ 2025-26ನೇ ಸಾಲಿನಲ್ಲಿ ಕೆಪಿಸಿಎಲ್ ಈ ದಾಖಲೆ ನಿರ್ಮಿಸಿರುವುದನ್ನೇ ಸರ್ಕಾರ ಪರಿಸರವಾದಿಗಳಿಗೆ ಯತ

ದಕ್ಷಿಣ ಕರ್ನಾಟಕದಲ್ಲೇ ಹೆಚ್ಚು ವಿದ್ಯುತ್‌

ಶರಾವತಿ ಕಣಿವೆಯಲ್ಲಿ ನಾಲ್ಕು, ಕಾಳಿ ಕಣಿವೆಯ ನಾಲ್ಕು, ವಾರಾಹಿ ಕಣಿವೆ ಮತ್ತು ಕಾವೇರಿ ಕಣಿವೆಯ ತಲಾ ಎರಡು, ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ತಲಾ ಒಂದು ವಿದ್ಯುತ್ ಉತ್ಪಾದನಾ ಸ್ಥಾವರಗಳಲ್ಲಿ 15,509 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದೆ. 2024-25ನೇ ಸಾಲಿನಲ್ಲಿ 13,853 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಿರುವುದು ಇದುವರೆಗಿನ ದಾಖಲೆಯಾಗಿತ್ತು. ಕೆಪಿಸಿಎಲ್ ರಾಜ್ಯದ ವಿದ್ಯುತ್ ಬೇಡಿಕೆಯನ್ನು ಈಡೇರಿಸಲು ಶ್ರಮಿಸಿದೆ. ಶಿವನಸಮುದ್ರ, ಶಿಂಷಾ, ಶರಾವತಿ ಹಾಗೂ ಮಹಾತ್ಮ ಗಾಂಧಿ ಜಲ ವಿದ್ಯುತ್ ಕೇಂದ್ರದ ಕೆಲವು ಘಟಕಗಳು ರಾಜ್ಯದ ಅತ್ಯಂತ ಹಳೆಯ ಜಲವಿದ್ಯುತ್ ಕೇಂದ್ರಗಳಾಗಿದ್ದರೂ ಈ ಘಟಕಗಳ ಕಾರ್ಯಕ್ಷಮತೆ ಗಮನಾರ್ಹವಾಗಿದೆ. ಉತ್ತಮ ನಿರ್ವಹಣೆಯಿಂದ ಹೆಚ್ಚು ವಿದ್ಯುತ್ ಉತ್ಪಾದನೆ ಸಾಧ್ಯವಾಗಿದೆ.

ಶರಾವತಿ, ವಾರಾಹಿ ಕಣಿವೆಯಲ್ಲೂ ಹೊಸ ಮೈಲಿಗಲ್ಲು

ರಾಜ್ಯದಲ್ಲಿ ಅತಿ ಹೆಚ್ಚು ಜಲ ವಿದ್ಯುತ್ ಉತ್ಪಾದನೆಯಾಗುವ ಶರಾವತಿ ಮತ್ತು ವಾರಾಹಿ ಕಣಿವೆಯ ವಿದ್ಯುತ್ ಸ್ಥಾವರಗಳಲ್ಲೂ 2025-26ನೇ ಸಾಲಿನಲ್ಲಿ ಒಟ್ಟಾರೆ 8,696 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸುವ ಮೂಲಕ ದಾಖಲೆ ನಿರ್ಮಿಸಲಾಗಿದೆ. ಶರಾವತಿ ಕಣಿವೆಯಲ್ಲಿ 2025-26ನೇ ಸಾಲಿಗೆ ಸಿಇಎ 4,800 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ನಿಗದಿಪಡಿಸಿದ್ದರೆ ಅದನ್ನು ಮೀರಿ 5,642 ಮಿಲಿಯನ್ ಯೂನಿಟ್ (ಶೇ. 17.54ರಷ್ಟು ಹೆಚ್ಚು) ವಿದ್ಯುತ್ ಉತ್ಪಾದನೆಯಾಗಿದೆ. ಅದೇ ರೀತಿ ಮಹಾತ್ಮಾ ಗಾಂಧಿ ವಿದ್ಯುತ್ ಸ್ಥಾವರದಲ್ಲಿ ಸಿಇಎ 549 ದಶಲಕ್ಷ ಯೂನಿಟ್ ಉತ್ಪಾದನೆ ನಿಗದಿಪಡಿಸಿದ್ದರೆ ಅದನ್ನು ಮೀರಿ 643 (ಶೇ. 17.15ರಷ್ಟು ಹೆಚ್ಚು), ಗೇರುಸೊಪ್ಪದಲ್ಲಿ ಸಿಇಎ ಗುರಿ 1,060 ದಶಲಕ್ಷ ಯೂನಿಟ್ ಇದ್ದರೆ, ಅದನ್ನು ಮೀರಿ 1,064 ದಶಲಕ್ಷ ಯೂನಿಟ್ (ಶೇ. 7.63ರಷ್ಟು ಹೆಚ್ಚು) ವರಾಹಿಯಲ್ಲಿ ಸಿಇಎ ಗುರಿ 1,060 ದಶಲಕ್ಷ ಯೂನಿಟ್ ಇದ್ದರೆ, 1,599 ದಶಲಕ್ಷ ಯೂನಿಟ್ (ಶೇ. 50.85ರಷ್ಟು ಹೆಚ್ಚು), ಭದ್ರಾನಲ್ಲಿ ಸಿಇಎ ಗುರಿ 55 ದಶಲಕ್ಷ ಯೂನಿಟ್ ಇದ್ದರೆ, 68 ದಶಲಕ್ಷ ಯೂನಿಟ್ (ಶೇ. 25.39ರಷ್ಟು ಹೆಚ್ಚು), ಶಿಂಷಾದಲ್ಲಿ ಸಿಇಎ ಗುರಿ 47 ದಶಲಕ್ಷ ಯೂನಿಟ್ ಇದ್ದರೆ, ಅದನ್ನು ಮೀರಿ 66 ದಶಲಕ್ಷ ಯೂನಿಟ್ (ಶೇ. 41.03ರಷ್ಟು ಹೆಚ್ಚು) ಹಾಗೂ ಮಾಣಿಯಲ್ಲಿ ಸಿಇಎ ಗುರಿ 24 ದಶಲಕ್ಷ ಯೂನಿಟ್ ಇದ್ದರೆ, 32 ದಶಲಕ್ಷ ಯೂನಿಟ್ (ಶೇ. 34.37ರಷ್ಟು ಹೆಚ್ಚು) ವಿದ್ಯುತ್ ಉತ್ಪಾದನೆ ಮಾಡಲಾಗಿದೆ.

ಹೊಸ ದಾಖಲೆ ಬರೆದ ಗೇರುಸೊಪ್ಪ

ಇನ್ನು ಮೂರು ಜಲ ವಿದ್ಯುತ್ ಸ್ಥಾವರಗಳ ವಿದ್ಯುತ್ ಉತ್ಪಾದನೆಯಲ್ಲಿ ಸಾರ್ವಕಾಲಿಕ ದಾಖಲೆ ಮಾಡಲಾಗಿದೆ. ಮಹಾತ್ಮಾ ಗಾಂಧಿ ವಿದ್ಯುತ್ ಸ್ಥಾವರದಲ್ಲಿ ಈ ಹಿಂದಿನ ಗರಿಷ್ಠ ದಾಖಲೆ 550 (2021-22ರಲ್ಲಿ) ದಶಲಕ್ಷ ಯೂನಿಟ್ ಇದ್ದರೆ, 2025-26ನೇ ಸಾಲಿನಲ್ಲಿ 643 ದಶಲಕ್ಷ ಯೂನಿಟ್ (ಶೇ. 16.92ರಷ್ಟು ಹೆಚ್ಚು), ಗೇರುಸೊಪ್ಪದಲ್ಲಿ ಈ ಹಿಂದಿನ ದಾಖಲೆ 641 (2007-08ರಲ್ಲಿ) ದಶಲಕ್ಷ ಯೂನಿಟ್ ಇದ್ದರೆ, ಈ ಬಾರಿ 644 ದಶಲಕ್ಷ ಯೂನಿಟ್ (0.39ರಷ್ಟು ಹೆಚ್ಚು) ಹಾಗೂ ವರಾಹಿಯಲ್ಲಿ ಈ ಹಿಂದಿನ ದಾಖಲೆ 1,401 ದಶಲಕ್ಷ ಯೂನಿಟ್ (2007-08 ಇದ್ದರೆ, ಆ ಬಾರಿ 1,599 ದಶಲಕ್ಷ ಯೂನಿಟ್ (ಶೇ. 14.13ರಷ್ಟು ಹೆಚ್ಚು) ವಿದ್ಯುತ್ ಉತ್ಪಾದನೆ ಮಾಡಲಾಗಿದೆ.

ಕಳೆದ ವರ್ಷ ಸಾಕಷ್ಟು ಮಳೆ ಬಿದ್ದಿರುವುದರ ಜತೆಗೆ ವಿದ್ಯುತ್ ಸ್ಥಾವರಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿರುವುದರಿಂದ ರಾಜ್ಯದ ಜಲ ವಿದ್ಯುತ್ ಸ್ಥಾವರಗಳಲ್ಲಿ ದಾಖಲೆಯ ವಿದ್ಯುತ್ ಉತ್ಪಾದನೆಯಾಗಿದೆ. ಹೊಸ ಸಾಧನೆಗೆ ಕಾರಣೀಕರ್ತರಾದ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕರು, ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಅಭಿನಂದನಾರ್ಹರು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಪರಿಸರವಾದಿಗಳ ವಿರೋಧ

ಈಗಾಗಲೇ ರಾಜ್ಯ ಸರ್ಕಾರ ಹಲವು ಯೋಜನೆಗಳ ಮೂಲಕ ಮಲೆನಾಡಿನ ಅರಣ್ಯವನ್ನು ನಾಶಪಡಿಸಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದರು. ಅದರೂ ಸರ್ಕಾರ 8,500 ಕೋಟಿ ರೂ. ವೆಚ್ಚದ ಶರಾವತಿ ಪಂಪ್ಡ್‌ ಸ್ಟೋರೇಜ್‌ಗೆ ಡಿಪಿಎಆರ್‌ ತಯಾರಿಸಿತ್ತು. ಆದರೆ ರಾಜ್ಯದ ಈ ಯೋಜನೆಗೆ ಕೇಂದ್ರ ಸರ್ಕಾರ ತಡೆ ನೀಡಿದ್ದರಿಂದ ರಾಜ್ಯ ಸರ್ಕಾರಕ್ಕೆ ಹಿನ್ನೆಡೆಯಾಗಿತ್ತು.

ಪಶ್ಚಿಮಘಟ್ಟದ ಅತ್ಯಂತ ಸೂಕ್ಷ್ಮ ಪ್ರದೇಶವಾದ ಶರಾವತಿ ನದಿ ಕಣಿವೆಯಲ್ಲಿ ಉದ್ದೇಶಿತ ಶರಾವತಿ ಮತ್ತು ವಾರಾಹಿ ಪಂಪ್ಡ್ಸ್ಟೋರೇಜ್ ಯೋಜನೆ ಕೈಬಿಡಬೇಕು ಎಂದು ʼಪರಿಸರಕ್ಕಾಗಿ ನಾವುʼ ಪರಿಸರ ಕಾರ್ಯಕರ್ತರ ರಾಜ್ಯ ಸಂಘಟನೆ ರಾಜ್ಯ ಸರ್ಕಾರವನ್ನು ಒತ್ತಾಯಿದ್ದರು. ಈಗಾಗಲೇ ಹಲವು ಅಣೆಕಟ್ಟುಗಳು ಹಾಗೂ ಜಲವಿದ್ಯುತ್ ಘಟಕಗಳಿಂದ ಒತ್ತಡಕ್ಕೆ ಒಳಗಾಗಿರುವ ಶರಾವತಿ ಕಣಿವೆಯ ಪರಿಸರ ವ್ಯವಸ್ಥೆಗೆ ಹೊಸ ಪಂಪ್ಡ್‌ ಸ್ಟೋರೇಜ್‌ ಯೋಜನೆಯಿಂದ ಇನ್ನಷ್ಟು ಹಾನಿಯಾಗಲಿದೆ.

ಪಶ್ಚಿಮಘಟ್ಟವು ಕಾವೇರಿ, ಹೇಮಾವತಿ, ತುಂಗಭದ್ರಾ, ವರದಾ ಸೇರಿದಂತೆ ಅನೇಕ ನದಿಗಳ ಉಗಮಸ್ಥಾನವಾಗಿವೆ. ಈ ಘಟ್ಟಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳಿಂದ ಹಾನಿ ಮಾಡಿದರೆ ಹವಾಮಾನ ಸಮತೋಲನ ಕಳೆದುಕೊಳ್ಳಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಶರಾವತಿ ಪಂಪ್ಡ್‌ ಸ್ಟೋರೇಜ್ ಯೋಜನೆ ನಿಲ್ಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಂಘಟನೆ ಮನವಿ ಮಾಡಿದ್ದವು.

ಯೋಜನೆಯು ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವುದರಿಂದ 1972ರ ವನ್ಯಜೀವಿ (ರಕ್ಷಣೆ) ಕಾಯ್ದೆಯ 29ನೇ ವಿಧಿಯ ಉಲ್ಲಂಘನೆಯಾಗಲಿದೆ. ಶರಾವತಿ ಕಣಿವೆ ಸಿಂಗಳೀಕ ಮತ್ತು ದಾಸ ಮಂಗಟ್ಟೆ ಮುಂತಾದ ಅಪರೂಪದ ಪ್ರಾಣಿ ಪಕ್ಷಿಗಳ ನೆಲೆಯಾಗಿದೆ. ಪಶ್ಚಿಮಘಟ್ಟದ ನಿತ್ಯಹರಿದ್ವರ್ಣ ಕಾಡು ಪ್ರದೇಶದಲ್ಲಿ ಸುರಂಗ, ರಸ್ತೆ ಮತ್ತು ನಿರ್ಮಾಣ ಕಾಮಗಾರಿ ನಡೆದರೆ ಭಾರೀ ಭೂಕುಸಿತ ಮತ್ತು ಹವಾಮಾನ ಬದಲಾವಣೆಗಳ ಅಪಾಯವಿದೆ ಎಂಬ ಆಕ್ಷೇಪ ವ್ಯಕ್ತಪಡಿಸಿದೆ.


ಶರಾವತಿ ಕಣಿವೆ ಕೇವಲ ವಿದ್ಯುತ್ ಕಾರಿಡಾರ್ ಅಲ್ಲ, ಅದು ರಾಜ್ಯದ ಅಪರೂಪದ ಅರಣ್ಯ ಸಂಪತ್ತು, ವನ್ಯಜೀವಿಗಳ ನೆಲೆ, ಲಕ್ಷಾಂತರ ಜನರ ಕುಡಿಯುವ ನೀರಿನ ಮೂಲ ಮತ್ತು ಮಲೆನಾಡಿನ ಜೀವನಾಡಿಯಾಗಿದೆ ಎಂದು ʼಪರಿಸರಕ್ಕಾಗಿ ನಾವುʼ ಸಂಘಟನೆ ಪತ್ರದಲ್ಲಿ ಹೇಳಿದೆ. ಶರಾವತಿ ಮತ್ತು ವಾರಾಹಿ ಪಂಪ್ಡ್‌ ಸ್ಟೋರೇಜ್‌ ಯೋಜನೆಗಳನ್ನು ಕೂಡಲೇ ಕೈಬಿಡಬೇಕು; ಸಂಬಂಧಿತ ಇಲಾಖೆಗಳಿಗೆ ಯೋಜನೆಗೆ ಕುರಿತ ಪೂರ್ವ ತಯಾರಿ ಮತ್ತು ಸಮೀಕ್ಷೆ ಕಾರ್ಯಗಳನ್ನು ನಿಲ್ಲಿಸಲು ನಿರ್ದೇಶಿಸಬೇಕು; ಪರ್ಯಾಯ, ಪರಿಸರಪೂರಕ ಇಂಧನ ಆಯ್ಕೆಗಳಿಗೆ ಪ್ರಾಮುಖ್ಯತೆ ನೀಡಬೇಕು; 1972ರ ವನ್ಯಜೀವಿ ಕಾಯ್ದೆ ಗೌರವಿಸಿ, ಇಂದಿರಾ ಗಾಂಧಿಯವರ ಪರಿಸರ ಕಾಳಜಿಗೆ ನಿಜವಾದ ಗೌರವ ತೋರಿಸಬೇಕು ಎಂಬ ಬೇಡಿಕೆಗಳೂ ಇವೆ.

Read More
Next Story