
ಗೃಹಲಕ್ಷ್ಮಿ ಯೋಜನೆಯ 15,000 ರೂಪಾಯಿ ಹಣವನ್ನು ಏಕಾಏಕಿ ಕಡಿತಗೊಳಿಸಿರುವ ಅಚ್ಚರಿಯ ಘಟನೆ ವರದಿಯಾಗಿದೆ.
ಗಂಡ ಮಾಡಿದ ಸಾಲಕ್ಕೆ ಪತ್ನಿಯ 'ಗೃಹಲಕ್ಷ್ಮಿ' ಹಣಕ್ಕೆ ಕತ್ತರಿ: ಹಾವೇರಿಯಲ್ಲಿ ಬ್ಯಾಂಕ್ ವಿರುದ್ಧ ದಂಪತಿ ಆಕ್ರೋಶ
ಸರ್ಕಾರ ಬಡ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ನೀಡುವ ಗೃಹಲಕ್ಷ್ಮಿ ಯೋಜನೆಯ ಹಣಕ್ಕೂ ಈಗ ಭದ್ರತೆ ಇಲ್ಲದಂತಾಗಿದೆ ಎಂದು ದಂಪತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾವೇರಿ ನಗರದ ನಾಗೇಂದ್ರನಮಟ್ಟಿಯಲ್ಲಿ ಗಂಡ ಪಡೆದಿದ್ದ ಸಾಲದ ಕಂತು ಪಾವತಿಯಾಗದ ಹಿನ್ನೆಲೆಯಲ್ಲಿ, ಬ್ಯಾಂಕ್ ಅಧಿಕಾರಿಗಳು ಆತನ ಪತ್ನಿಯ ಖಾತೆಯಲ್ಲಿದ್ದ ಗೃಹಲಕ್ಷ್ಮಿ ಯೋಜನೆಯ 15,000 ರೂಪಾಯಿ ಹಣವನ್ನು ಏಕಾಏಕಿ ಕಡಿತಗೊಳಿಸಿರುವ ಅಚ್ಚರಿಯ ಘಟನೆ ವರದಿಯಾಗಿದೆ.
ನಾಗೇಂದ್ರನಮಟ್ಟಿ ನಿವಾಸಿ ಹುಸೇನ್‌ಖಾನ್ ಪಠಾಣ ಎಂಬುವವರು ಸ್ಥಳೀಯ ಬ್ಯಾಂಕ್ ಒಂದರಲ್ಲಿ 2 ಲಕ್ಷ ರೂ. ಸಾಲ ಪಡೆದಿದ್ದರು. ಆದರೆ, ಅವರು ನಿಯಮಿತವಾಗಿ ಸಾಲದ ಕಂತು ಪಾವತಿಸುವಲ್ಲಿ ವಿಫಲರಾಗಿದ್ದರು. ಇದೇ ಬ್ಯಾಂಕ್‌ನಲ್ಲಿ ಅವರ ಪತ್ನಿ ಶಬಾನಬಾನು ಕೂಡ ಉಳಿತಾಯ ಖಾತೆ ಹೊಂದಿದ್ದು, ಅವರಿಗೆ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗುತ್ತಿತ್ತು. ಪತಿ ಕಂತು ಕಟ್ಟದ ಕಾರಣ ಬ್ಯಾಂಕ್ ಅಧಿಕಾರಿಗಳು ಶಬಾನಬಾನು ಅವರ ಖಾತೆಯಲ್ಲಿದ್ದ ಗೃಹಲಕ್ಷ್ಮಿ ಹಣವನ್ನು ಎರಡು ಹಂತಗಳಲ್ಲಿ (11,000 ರೂ. ಮತ್ತು 4,000 ರೂ.) ಕಡಿತಗೊಳಿಸಿ ಒಟ್ಟು 15,000 ರೂ.ಗಳನ್ನು ಸಾಲದ ಖಾತೆಗೆ ಜಮೆ ಮಾಡಿಕೊಂಡಿದ್ದಾರೆ.
ಮ್ಯಾನೇಜರ್‌ಗೆ ಪತ್ರ ಬರೆದು ತರಾಟೆ
ಸರ್ಕಾರ ಬಡ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ನೀಡುವ ಗೃಹಲಕ್ಷ್ಮಿ ಯೋಜನೆಯ ಹಣಕ್ಕೂ ಈಗ ಭದ್ರತೆ ಇಲ್ಲದಂತಾಗಿದೆ ಎಂದು ದಂಪತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವುದೇ ಮುನ್ಸೂಚನೆ ಅಥವಾ ಅನುಮತಿ ಇಲ್ಲದೆ ಖಾತೆಯಲ್ಲಿದ್ದ ಹಣವನ್ನು ಯಾವ ಆಧಾರದ ಮೇಲೆ ಕಡಿತಗೊಳಿಸಿದ್ದೀರಿ ಎಂದು ಪ್ರಶ್ನಿಸಿ ಪತಿ-ಪತ್ನಿ ಇಬ್ಬರೂ ಬ್ಯಾಂಕ್ ಮ್ಯಾನೇಜರ್‌ಗೆ ಲಿಖಿತ ದೂರು ನೀಡಿದ್ದಾರೆ. ಅಲ್ಲದೆ, ಕಡಿತಗೊಳಿಸಿರುವ ತಮ್ಮ ಹಣವನ್ನು ತಕ್ಷಣವೇ ಖಾತೆಗೆ ವಾಪಸ್ ನೀಡುವಂತೆ ಅವರು ಬ್ಯಾಂಕ್ ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದಾರೆ.

