ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ, ಮೂರೇ ದಿನದಲ್ಲಿ ಕೋಟಿ ಕೋಟಿ ಆದಾಯ
ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನದ ನಾಲ್ಕನೇ ದಿನ ಭಕ್ತಸಾಗರವೇ ಹರಿದುಬಂದಿದೆ. ಧರ್ಮದರ್ಶನ, 1,000 ರೂ. ಮತ್ತು 300 ರೂ. ವಿಶೇಷ ದರ್ಶನದ ಸಾಲುಗಳಲ್ಲಿ ಭಕ್ತರು ಕಿಕ್ಕಿರಿದಿದ್ದಾರೆ.
ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರವೇ ಹರಿದುಬರುತ್ತಿದೆ.. ಇಂದು ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನಕ್ಕೆ ನಾಲ್ಕನೇ ದಿನ. ದೇವಿಯ ದರ್ಶನ ಪಡೆಯಲು ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಧರ್ಮದರ್ಶನದ ಸಾಲು ಮಾತ್ರವಲ್ಲ, 1,000 ರೂ. ಮತ್ತು 300 ರೂ. ವಿಶೇಷ ದರ್ಶನದ ಸಾಲುಗಳಲ್ಲೂ ಭಕ್ತರು ಕಿಕ್ಕಿರಿದು ತುಂಬಿದ್ದಾರೆ. ಇನ್ನು, ಭಕ್ತರ ದಂಡಿನಿಂದ ದರ್ಶನಕ್ಕೆ ಕೊಂಚ ವಿಳಂಬವಾಗುತ್ತಿದ್ದರೂ, ಭಕ್ತರು ತಾಳ್ಮೆಯಿಂದ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಾರೆ.
Next Story
