ಐಪಿಎಲ್ ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್: ನಮ್ಮ ಮೆಟ್ರೋ ಸೇವೆ ತಡರಾತ್ರಿ 2 ಗಂಟೆವರೆಗೆ ವಿಸ್ತರಣೆ
x

ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಬಿಎಂಆರ್‌ಸಿಎಲ್ ಈ ಬಾರಿ ವಿಶೇಷ ವ್ಯವಸ್ಥೆ ಕಲ್ಪಿಸಿದ್ದು, ಐಪಿಎಲ್ ಪಂದ್ಯದ ಟಿಕೆಟ್‌ಗಳೇ ಮೆಟ್ರೋ ಟ್ರಾವೆಲ್ ಪಾಸ್‌ಗಳಾಗಿ ಕಾರ್ಯನಿರ್ವಹಿಸಲಿವೆ. 

ಐಪಿಎಲ್ ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್: ನಮ್ಮ ಮೆಟ್ರೋ ಸೇವೆ ತಡರಾತ್ರಿ 2 ಗಂಟೆವರೆಗೆ ವಿಸ್ತರಣೆ

ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಬಿಎಂಆರ್‌ಸಿಎಲ್ ಈ ಬಾರಿ ವಿಶೇಷ ವ್ಯವಸ್ಥೆ ಕಲ್ಪಿಸಿದ್ದು, ಐಪಿಎಲ್ ಪಂದ್ಯದ ಟಿಕೆಟ್‌ಗಳೇ ಮೆಟ್ರೋ ಟ್ರಾವೆಲ್ ಪಾಸ್‌ಗಳಾಗಿ ಕಾರ್ಯನಿರ್ವಹಿಸಲಿವೆ.


Click the Play button to hear this message in audio format

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 5ರಂದು (ಭಾನುವಾರ) ನಡೆಯಲಿರುವ ಐಪಿಎಲ್ 2026 (IPL 2026) ಟಿ20 ಕ್ರಿಕೆಟ್ ಪಂದ್ಯ ವೀಕ್ಷಿಸಲು ಆಗಮಿಸುವ ಕ್ರೀಡಾಭಿಮಾನಿಗಳ ಅನುಕೂಲಕ್ಕಾಗಿ ನಮ್ಮ ಮೆಟ್ರೋ (BMRCL) ರೈಲು ಸೇವೆಗಳ ಅವಧಿಯನ್ನು ವಿಸ್ತರಿಸಿದೆ.

ಅಂದು ರಾತ್ರಿ 11 ಗಂಟೆಯ ಬದಲಾಗಿ, ಮರುದಿನ ಮುಂಜಾನೆ 2 ಗಂಟೆಯವರೆಗೆ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲುಗಳು ಸಂಚರಿಸಲಿವೆ. ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ (ಮೆಜೆಸ್ಟಿಕ್) ಎಲ್ಲಾ ನಾಲ್ಕು ದಿಕ್ಕುಗಳಿಗೂ ಕೊನೆಯ ರೈಲುಗಳು ರಾತ್ರಿ 1:30ಕ್ಕೆ ಹೊರಡಲಿವೆ. ಆರ್‌ವಿ ರಸ್ತೆ ನಿಲ್ದಾಣದಿಂದ ಮುಂಜಾನೆ 2 ಗಂಟೆಗೆ, ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಮತ್ತು ಮಾದಾವರ ನಿಲ್ದಾಣಗಳಿಂದ ರಾತ್ರಿ 12:45ಕ್ಕೆ ಹಾಗೂ ವೈಟ್‌ಫೀಲ್ಡ್‌ನಿಂದ 12:30ಕ್ಕೆ ಕೊನೆಯ ರೈಲುಗಳು ನಿರ್ಗಮಿಸಲಿವೆ.

ಪಂದ್ಯದ ಟಿಕೆಟ್‌ನಲ್ಲೇ ಮೆಟ್ರೋ ಪಾಸ್

ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಬಿಎಂಆರ್‌ಸಿಎಲ್ ಈ ಬಾರಿ ವಿಶೇಷ ವ್ಯವಸ್ಥೆ ಕಲ್ಪಿಸಿದ್ದು, ಐಪಿಎಲ್ ಪಂದ್ಯದ ಟಿಕೆಟ್‌ಗಳೇ ಮೆಟ್ರೋ ಟ್ರಾವೆಲ್ ಪಾಸ್‌ಗಳಾಗಿ ಕಾರ್ಯನಿರ್ವಹಿಸಲಿವೆ. ಭೌತಿಕ ಟಿಕೆಟ್‌ಗಳ ಮೇಲೆ ಮುದ್ರಿಸಲಾದ ಅಥವಾ ಡಿಜಿಟಲ್ ಟಿಕೆಟ್‌ಗಳಲ್ಲಿ ಅಳವಡಿಸಲಾಗಿರುವ ಕ್ಯೂಆರ್ (QR) ಕೋಡ್ ಬಳಸಿ ಅಭಿಮಾನಿಗಳು ನಮ್ಮ ಮೆಟ್ರೋದಲ್ಲಿ ಎರಡು ಬದಿಯ (ಹೋಗುವ ಮತ್ತು ಬರುವ) ಉಚಿತ ಪ್ರಯಾಣ ಬೆಳೆಸಬಹುದು. ಇದರ ಜೊತೆಗೆ, ಕ್ರೀಡಾಂಗಣದ ಸುತ್ತಮುತ್ತಲಿನ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ನಗರದ 44 ಮೆಟ್ರೋ ನಿಲ್ದಾಣಗಳಲ್ಲಿ ಬಿಎಂಆರ್‌ಸಿಎಲ್ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದೆ. ಪಂದ್ಯದ ದಿನದಂದು ದ್ವಿಚಕ್ರ ವಾಹನಗಳಿಗೆ ಕೇವಲ 30 ರೂಪಾಯಿ ಹಾಗೂ ಕಾರುಗಳಿಗೆ 60 ರೂಪಾಯಿ ನಿಗದಿತ ಶುಲ್ಕ ಪಾವತಿಸಿ, ಅಂದಿನ ಮೆಟ್ರೋ ಸೇವೆ ಮುಕ್ತಾಯವಾಗುವವರೆಗೆ ವಾಹನಗಳನ್ನು ಪಾರ್ಕಿಂಗ್ ಮಾಡಬಹುದಾಗಿದೆ.

ಪೊಲೀಸರ ಸೂಚನೆ ಪಾಲಿಸಿ

ಸುರಕ್ಷತೆ ಮತ್ತು ದಟ್ಟಣೆ ನಿಯಂತ್ರಣದ ದೃಷ್ಟಿಯಿಂದ ಕ್ರೀಡಾಭಿಮಾನಿಗಳು ತಾವು ಕ್ರೀಡಾಂಗಣ ಪ್ರವೇಶಿಸುವ ಗೇಟ್‌ಗಳಿಗೆ ಅನುಗುಣವಾಗಿ ನಿಗದಿತ ಮೆಟ್ರೋ ನಿಲ್ದಾಣಗಳನ್ನು ಬಳಸುವಂತೆ ಬಿಎಂಆರ್‌ಸಿಎಲ್ ಸಲಹೆ ನೀಡಿದೆ. ಕಬ್ಬನ್ ರಸ್ತೆಯ ಮೂಲಕ ಕ್ರೀಡಾಂಗಣ ಪ್ರವೇಶಿಸುವವರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು ಹಾಗೂ ಲಿಂಕ್ ರಸ್ತೆಯ ಮೂಲಕ ಪ್ರವೇಶಿಸುವವರು ಡಾ. ಬಿ.ಆರ್. ಅಂಬೇಡ್ಕರ್ (ವಿಧಾನಸೌಧ) ನಿಲ್ದಾಣವನ್ನು ಬಳಸಲು ಸೂಚಿಸಲಾಗಿದೆ. ಅಲ್ಲದೆ, ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ (CBD) ವಾಹನ ದಟ್ಟಣೆ ತಪ್ಪಿಸಲು ಅಭಿಮಾನಿಗಳು ತಮ್ಮ ವಾಹನಗಳನ್ನು ಕ್ರೀಡಾಂಗಣದ ಸಮೀಪ ತರದೆ, ಕಬ್ಬನ್ ಪಾರ್ಕ್ ಮತ್ತು ಎಂ.ಜಿ. ರಸ್ತೆಯಂತಹ ಮೆಟ್ರೋ ನಿಲ್ದಾಣಗಳಲ್ಲಿ ನಿಲ್ಲಿಸಿ, ಅಲ್ಲಿಂದ ನಡೆದುಕೊಂಡು ಕ್ರೀಡಾಂಗಣಕ್ಕೆ ಆಗಮಿಸುವಂತೆ ಪೊಲೀಸರು ಮತ್ತು ಬಿಎಂಆರ್‌ಸಿಎಲ್ ಅಧಿಕಾರಿಗಳು ಮನವಿ ಮಾಡಿದ್ದಾರೆ.

Read More
Next Story