DCM DK Shivakumar Becomes a Grandfather as Daughter Aisshwarya Hegde Welcomes a Baby Girl
x

ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಐಶ್ವರ್ಯ ಹೆಗ್ಡೆ ದಂಪತಿ

ಅಜ್ಜನಾದ ಸಂಭ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್: ಹೆಣ್ಣು ಮಗುವಿಗೆ ಜನ್ಮ ನೀಡಿದ ಪುತ್ರಿ ಐಶ್ವರ್ಯ ಹೆಗ್ಡೆ

ಐಶ್ವರ್ಯ ಹೆಗ್ಡೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿರುವ ದಿನವು ಹಲವು ವಿಶೇಷತೆಗಳಿಂದ ಕೂಡಿದೆ. ಶುಕ್ರವಾರದ ಜೊತೆಗೆ, ಅತ್ಯಂತ ಪವಿತ್ರ ದಿನವಾದ ಬುದ್ಧ ಪೂರ್ಣಿಮಾ (ವೈಶಾಖ ಹುಣ್ಣಿಮೆ) ಯಂದೇ ಮಗು ಜನಿಸಿದೆ.


Click the Play button to hear this message in audio format

ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಹೆಗ್ಡೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಡಿಸಿಎಂ ಕುಟುಂಬದಲ್ಲಿ ಹೊಸ ಸದಸ್ಯಳ ಆಗಮನದ ಸಂಭ್ರಮ ಮನೆಮಾಡಿದೆ.

ವೈಶಾಖ ಹುಣ್ಣಿಮೆಯ ಪುಣ್ಯ ದಿನದಂದು ತಾತನಾಗಿ ಬಡ್ತಿ ಪಡೆದಿರುವ ಡಿ.ಕೆ. ಶಿವಕುಮಾರ್ ಅವರು ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಈ ಶುಭ ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಡಿಸಿಎಂ ಅವರು ಆಸ್ಪತ್ರೆಗೆ ದೌಡಾಯಿಸಿ ಮಗಳು ಹಾಗೂ ಮೊಮ್ಮಗಳ ಆರೋಗ್ಯ ವಿಚಾರಿಸಿದ್ದಾರೆ.

ಎಸ್.ಎಂ. ಕೃಷ್ಣ ಹುಟ್ಟುಹಬ್ಬದ ವಿಶೇಷತೆ

ಐಶ್ವರ್ಯ ಹೆಗ್ಡೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿರುವ ದಿನವು ಹಲವು ವಿಶೇಷತೆಗಳಿಂದ ಕೂಡಿದೆ. ಶುಕ್ರವಾರದ ಜೊತೆಗೆ, ಅತ್ಯಂತ ಪವಿತ್ರ ದಿನವಾದ ಬುದ್ಧ ಪೂರ್ಣಿಮಾ (ವೈಶಾಖ ಹುಣ್ಣಿಮೆ) ಯಂದೇ ಮಗು ಜನಿಸಿದೆ. ಇದಕ್ಕೂ ಮಿಗಿಲಾಗಿ, ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಗುರು ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಜನ್ಮದಿನದಂದೇ ಅವರ ಮೊಮ್ಮಗನ ಪತ್ನಿ ಐಶ್ವರ್ಯ ಅವರು ಮಗುವಿಗೆ ಜನ್ಮ ನೀಡಿರುವುದು ಎರಡೂ ಕುಟುಂಬಗಳ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಆಸ್ಪತ್ರೆಗೆ ದೌಡಾಯಿಸಿದ ಡಿ.ಕೆ. ಶಿವಕುಮಾರ್

ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದ್ದು, ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ಬಿಡುವಿಲ್ಲದ ರಾಜಕೀಯ ಹಾಗೂ ಆಡಳಿತಾತ್ಮಕ ಜವಾಬ್ದಾರಿಗಳ ನಡುವೆಯೂ ಶುಕ್ರವಾರ ಸಂಜೆ ಆಸ್ಪತ್ರೆಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ಅವರು, ತಮ್ಮ ಮುದ್ದಿನ ಮೊಮ್ಮಗಳನ್ನು ಕಣ್ತುಂಬಿಕೊಂಡಿದ್ದಾರೆ. ಈ ಸಂತಸದ ಸುದ್ದಿಯ ಬೆನ್ನಲ್ಲೇ ಕುಟುಂಬದ ಆಪ್ತರು ಹಾಗೂ ಬೆಂಬಲಿಗರು ಡಿಸಿಎಂ ಕುಟುಂಬಕ್ಕೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

2021ರಲ್ಲಿ ನಡೆದಿದ್ದ ವಿವಾಹ

ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ದಿ. ವಿ.ಜಿ. ಸಿದ್ದಾರ್ಥ ಅವರ ಪುತ್ರ ಅಮರ್ತ್ಯ ಹೆಗ್ಡೆ ಅವರ ವಿವಾಹವು 2021ರ ಫೆಬ್ರವರಿ 14ರಂದು ಅದ್ದೂರಿಯಾಗಿ ನೆರವೇರಿತ್ತು. ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆದಿದ್ದ ಈ ರಾಜಕೀಯ ಹಾಗೂ ಉದ್ಯಮ ವಲಯದ ಹೈಪ್ರೊಫೈಲ್ ವಿವಾಹ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಸೇರಿದಂತೆ ನಾಡಿನ ಹಲವು ಗಣ್ಯರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದ್ದರು. ಇದೀಗ ವಿವಾಹವಾದ ಮೂರು ವರ್ಷಗಳ ಬಳಿಕ ದಂಪತಿ ತಮ್ಮ ಚೊಚ್ಚಲ ಮಗುವನ್ನು ಸ್ವಾಗತಿಸಿದ್ದಾರೆ.

Read More
Next Story