Bengaluru residents, take note: Animal slaughter and meat sale in the city will be completely banned for two days!
x

ಸಾಂದರ್ಭಿಕ ಚಿತ್ರ

ಬೆಂಗಳೂರಿಗರೇ ಗಮನಿಸಿ: ಎರಡು ದಿನ ನಗರದಲ್ಲಿ ಪ್ರಾಣಿವಧೆ, ಮಾಂಸ ಮಾರಾಟ ಸಂಪೂರ್ಣ ಬಂದ್ !

ಪಶುಪಾಲನಾ ವಿಭಾಗದ ಮುಖ್ಯ ಪಶುವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾಂಸ, ಕೋಳಿ, ಮೀನು, ಹಂದಿ ಮಾಂಸದ ಅಂಗಡಿಗಳಲ್ಲಿ ಮಾರಾಟವನ್ನು ನಿರ್ಬಂಧಿಸಲು ಕ್ರಮ ಕೈಗೊಳ್ಳುವಂತೆ ಜಿಬಿಎ ಸೂಚನೆ ನೀಡಿದೆ.


Click the Play button to hear this message in audio format

ಶ್ರೀರಾಮನವಮಿ ಪ್ರಯುಕ್ತ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮಾಂಸದ ಮಳಿಗೆಗಳಲ್ಲಿಯೂ ಮಾಂಸ ಮಾರಾಟಕ್ಕೆ ಅವಕಾಶವಿರುವುದಿಲ್ಲ ಎಂದು ಜಿಬಿಎ ಪಶುಪಾಲನೆ ವಿಭಾಗದ ಉಪನಿರ್ದೇಶಕರು ತಿಳಿಸಿದ್ದಾರೆ.

ಈ ಕುರಿತು ಬುಧವಾರ (ಮಾ.25) ಪ್ರಕಟಣೆ ಹೊರಡಿಸಿರುವ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಶ್ರೀರಾಮನವಮಿ ಹಬ್ಬದ ಪ್ರಯುಕ್ತ ಮಾ. 26 ರ ಬೆಳಿಗ್ಗೆ 10 ಗಂಟೆಯಿಂದ ಮಾ. 28 ರ ಬೆಳಿಗ್ಗೆ 5 ಗಂಟೆಯವರೆಗೆ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ತಮ್ಮ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಪೋಲೀಸ್ ಆಯುಕ್ತರು ಹಾಗೂ ನಗರ ಪಾಲಿಕೆಗಳ ಆಯುಕ್ತರಿಗೆ ಸೂಚಿಸಲಾಗಿದೆ. ಮಾಂಸ ಉತ್ಪಾದನಾ ಮತ್ತು ಸಂಸ್ಕರಣಾ ಕೇಂದ್ರಗಳಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ಮಾಡಬಾರದು. ಪಶುಪಾಲನಾ ವಿಭಾಗದ ಮುಖ್ಯ ಪಶುವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾಂಸ, ಕೋಳಿ, ಮೀನು, ಹಂದಿ ಮಾಂಸದ ಅಂಗಡಿಗಳಲ್ಲಿ ಮಾರಾಟವನ್ನು ನಿರ್ಬಂಧಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಹೊರಡಿಸಿರುವ ಆದೇಶ ಪ್ರತಿ

ನಗರದಲ್ಲಿ ಒಂದು ದಿನಕ್ಕೆ ಎಷ್ಟು ಮಾಂಸ ಅಗತ್ಯ

ಬೆಂಗಳೂರು ನಗರವೊಂದರಲ್ಲೇ ಪ್ರತಿದಿನ ಸರಾಸರಿ 1,000 ರಿಂದ 1,500 ಟನ್‌ಗಳಷ್ಟು ಕೋಳಿ, ಕುರಿ, ಮೇಕೆ ಮತ್ತು ಮೀನು ಮಾಂಸ ಮಾರಾಟವಾಗುತ್ತದೆ ಎಂದು ಅಂದಾಜಿಸಲಾಗಿದೆ. ಕೋಳಿ ಮಾಂಸ ಸುಮಾರು 600 - 800 ಟನ್, ಕುರಿ ಹಾಗೂ ಮೇಕೆ ಮಾಂಸ 150 - 200 ಟನ್‌, ಮೀನು ಮತ್ತು ಸಮುದ್ರ ಉತ್ಪನ್ನಗಳು150 - 250 ಟನ್‌ ಮಾರಾಟವಾಗತ್ತದೆ. ಹಬ್ಬದ ದಿನಗಳಲ್ಲಿ ಮತ್ತು ಮದುವೆ ಸೀಸನ್‌ನಲ್ಲಿ ಇದರ ಬೇಡಿಕೆ ಗಣನೀಯವಾಗಿ ಹೆಚ್ಚುತ್ತದೆ.

ಸಾಮಾನ್ಯ ದಿನಗಳಿಗಿಂತ ಭಾನುವಾರ ಬೆಂಗಳೂರಿನಲ್ಲಿ ಮಾಂಸದ ಮಾರಾಟವು ಶೇ. 40 ರಿಂದ 50 ರಷ್ಟು ಹೆಚ್ಚಾಗಿರುತ್ತದೆ. ನಗರದ ಒಟ್ಟು ಮಾಂಸದ ಬಳಕೆಯಲ್ಲಿ ಸುಮಾರು ಶೇ. 40 ರಷ್ಟು ಪಾಲು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ನೀಡಲಾಗುತ್ತದೆ. ಇತ್ತೀಚೆಗೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದಾಗಿ ಹೋಟೆಲ್‌ಗಳಲ್ಲಿ ಮಾಂಸದ ಬೇಡಿಕೆ ಸುಮಾರು ಶೇ. 30 ರಷ್ಟು ಕುಸಿತ ಕಂಡಿದೆ.

Read More
Next Story