x

ಮಂತ್ರಿಗಿರಿ ʼಹರಾಜುʼ ಆರೋಪ, ಸ್ಪೀಕರ್‌ ಹುದ್ದೆಗೆ ʼಕೈʼ ಕಮಾಂಡ್‌́! ಸದನದಲ್ಲಿ ಹೋರಾಟಕ್ಕೆ ಬಿಜೆಪಿ ಸಜ್ಜು

ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ನೀಡಿದ ವಿಶೇಷ ಸಂದರ್ಶನದಲ್ಲಿ, "ಸಭಾಧ್ಯಕ್ಷ ನೇಮಕವನ್ನು ಕಾಂಗ್ರೆಸ್ ಹೈಕಮಾಂಡ್ ಮಾಡಿರುವುದು ಕೆಟ್ಟ ಸಂಪ್ರದಾಯಕ್ಕೆ ಕಾರಣವಾಗಿದೆ," ಎಂದಿದ್ದಾರೆ.


ವಿಧಾನಮಂಡಲ ಅಧಿವೇಶನ ಆಗಸ್ಟ್‌ 13 ರಿಂದ ಆರಂಭವಾಗಲಿದೆ. ಆದರೆ ಸದನ ಆರಂಭವಾಗುವ ಮುನ್ನಾ ವಿಧಾನಪರಿಷತ್ ಸಭಾಪತಿ ಹಾಗು ವಿಧಾನಸಭಾಧ್ಯಕ್ಷರ ನೇಮಕವನ್ನು ಕಾಂಗ್ರೆಸ್ ಹೈಕಮಾಂಡ್ ಲೆಟರ್ ಹೆಡ್ ನಲ್ಲಿ ಮಾಡಿರುವುದು ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಾಂವಿಧಾನಿಕ ಹುದ್ದೆಯ ಆಯ್ಕೆಯನ್ನು ಪಕ್ಷದ ಲೆಟರ್ ಹೆಡ್ ನಲ್ಲಿ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಈ ಬಗ್ಗೆ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ದ ಫೆಡರಲ್ ಕರ್ನಾಟಕ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸಭಾಪತಿ ಮತ್ತು ಸಭಾಧ್ಯಕ್ಷರ ನೇಮಕವನ್ನು ಕಾಂಗ್ರೆಸ್ ಹೈಕಮಾಂಡ್ ಲೆಟರ್ ಹೆಡ್ ನಲ್ಲಿ ಮಾಡಿದ್ದು ಕಾಂಗ್ರೆಸ್ ಕೆಟ್ಟ ನಡವಳಿಕೆಯನ್ನು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭಾಪತಿ ಮತ್ತು ಸಭಾಧ್ಯಕ್ಷ ಸ್ಥಾನ ಆ ಸದನಗಳ ಆಸ್ತಿ ಇವರ ಆಯ್ಕೆಯನ್ನು ಸನದಲ್ಲಿ ಘೋಷಣೆ ಮಾಡುತ್ತಾರೆ. ಸಭಾಪತಿ ಹಾಗು ಸಭಾಧ್ಯಕ್ಷರ ಆಯ್ಕೆ ಬಗ್ಗೆ ಪಕ್ಷದಲ್ಲಿ ಚರ್ಚಿಸಿ ಆಯ್ಕೆ ಮಾಡಿದರೂ ಕಾಂಗ್ರೆಸ್ ಲೆಟರ್ ಹೆಡ್ ನಲ್ಲಿ ಕೊಡಬಹುದಾ ಎಂದು ಪ್ರಶ್ನಿಸಿದರು. ಸಂವಿಧಾನಕ್ಕೆ ಬೆಲೆ ಇಲ್ಲವಾ 70 ವರ್ಷ ದೇಶ ಆಳಿದ ಕಾಂಗ್ರೆಸ್ ಗೆ ಸಾಮನ್ಯ ಜ್ಞಾನ ಇಲ್ಲ ಎಂದು ಟೀಕಿಸಿದರು. ಸಭಾಪತಿ ಹಾಗು ಸಭಾಧ್ಯಕ್ಷರು ಪಕ್ಷದ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಅವರು ಯಾವ ಪಕ್ಷಕ್ಕೆ ಸೇರುವುದಿಲ್ಲ ಇಂತಹ ಸ್ಥಾನವನ್ನು ಕಾಂಗ್ರೆಸ್ ಲೆಟರ್ ಹೆಡ್ ನಲ್ಲಿ ನಮೂದಿಸಿದ್ದಾರೆ. ಇತಿಹಾಸದಲ್ಲಿ ಈ ರೀತಿ ಎಂದೂ ನಡೆದಿರಲಿಲ್ಲ‌ ಕಾಂಗ್ರೆಸ್ ಪಕ್ಷ ಕೆಟ್ಟ ಸಂಪ್ರದಾಯಕ್ಕೆ ನಾಂದಿಹಾಡಿದೆ.

ಸಚಿವ ಸಂಪುಟ ವಿಸ್ತರಣೆ ವೇಳೆ 20 ಸ್ಥಾನಗಳನ್ನು ಹರಾಜಿಗಿಡಲಾಗಿತ್ತು ಎಂದು ಕಾಂಗ್ರೆಸ್ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು. ಹರಾಜಿನಲ್ಲಿ ಆಫರ್ ಹೆಚ್ಚಾದಾಗ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಸಂಪುಟದಲ್ಲಿ ಮಹಿಳೆಗೆ ಅವಕಾಶ ನೀಡಿಲ್ಲ ಎಂದು ಟೀಕಿಸಿದರು. ಕಾಂಗ್ರೆಸ್ ಮಹಿಳಾಪರ ಎನ್ನುತ್ತಾರೆ ಇವರ ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೆ ಅವಕಾಶ ನೀಡುವ ಯೋಗ್ಯತೆ ಕಾಂಗ್ರೆಸಿಗಿಲ್ಲ. ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಸಂಪುಟದಿಂದ ತೆಗೆದುಹಾಕಿರುವುದು ಮಹಿಳೆಯ ವಿರೋಧಿ ನಿಲುವು ಎಂದು ಟೀಕಿಸಿದರು.

ನಾಗೇಂದ್ರಗೆ ಋಣ ತೀರಿಸಲು ಸಚಿವ ಸ್ಥಾನ ನೀಡಲಾಗಿದೆ. ಕಾಂಗ್ರೆಸ್ ಗೆ ನೀಡಿದ ಹಣದಿಂದ ನಾಗೇಂದ್ರಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಆರೋಪಮಾಡಿದರು.‌ ಹಲವು ಜಿಲ್ಲೆಗಳಲ್ಲಿ ಸಚಿವ ಸ್ಥಾನವನ್ನೇ ನೀಡಿಲ್ಲ ಅದು ಅವರ ಪಕ್ಷಕ್ಕೆ ಬಿಟ್ಟವಿಚಾರ ಎಂದು ಹೇಳಿದರು. ಸದನದಲ್ಲಿ ವಿಷಯಾಧಾರಿತವಾಗಿ ಚರ್ಚೆಮಾಡಲಾಗುತ್ತದೆ. ಭ್ರಷ್ಟಾಚಾರ, KPSC ಹಗರಣ, ಬರಗಾಲ ಸೇರಿದಂತೆ ಪ್ರಮುಖ ವಿಚಾರಗಳನ್ನು ಪ್ರಸ್ತಾಪ ಮಾಡುತ್ತೇವೆ ಎಂದು ಹೇಳಿದರು.

Read More
Next Story