x

ಅಕ್ಕಿ ತರೋಕೂ ಜೇಬಲ್ಲಿ 1 ರೂ.ಇರಲಿಲ್ಲ...40 ರೂ. ಸಾಲ ಮಾಡಿ ಊಟ ಮಾಡಿದ ಆ ದಿನ

ಬಿಎಂಟಿಸಿ ಚಾಲಕ ಕೃಷ್ಣಮೂರ್ತಿ ತಮ್ಮ ಜೀವನದ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಕ್ಕಿ ಖರೀದಿಸಲೂ ಹಣವಿಲ್ಲದ ದಿನಗಳ ನೋವನ್ನು ಭಾವುಕರಾಗಿ ಹಂಚಿಕೊಂಡಿದ್ದಾರೆ.


Click the Play button to hear this message in audio format

“ಅವತ್ತು ಒಂದು ದಿನ ‘ಅಕ್ಕಿ ತಗೊಂಡು ಬಾ’ ಅಂತ ಫೋನ್ ಬಂದಾಗ, ನನ್ನ ಜೇಬಲ್ಲಿ ಒಂದು ರೂಪಾಯಿ ಕೂಡ ಇರಲಿಲ್ಲ. ಫ್ರೆಂಡ್ಸ್ ಸರ್ಕಲ್ ಹತ್ರ ಬಂದಾಗ, ‘ಮಗಾ, ನನ್ನ ಫೋನ್‌ನಲ್ಲೂ ದುಡ್ಡಿಲ್ಲ ಕಣೋ, ಮನೆಯಿಂದಲೂ ತರಲಿಲ್ಲ. ಟೀ ಕುಡಿಯಬೇಕು, ಹತ್ತು ರೂಪಾಯಿ ಇದ್ರೆ ಕೊಡು’ ಅಂತ ನಾಲ್ಕು ಜನರ ಹತ್ರ ತಲಾ ಹತ್ತು ರೂಪಾಯಿಯಂತೆ ಒಟ್ಟು ನಲವತ್ತು ರೂಪಾಯಿ ಕಲೆಕ್ಟ್ ಮಾಡ್ಕೊಂಡೆ. ತಕ್ಷಣ ಹೋಗಿ ಒಂದು ಕೆ.ಜಿ. ಅಕ್ಕಿ ತಗೊಂಡು ಬಂದೆವು. ಅವತ್ತು ಅದೇ ಅಕ್ಕಿಯಲ್ಲಿ ಊಟ ಮಾಡಿ ಮಲಗಿಕೊಂಡ್ವಿ. ಮರುದಿನ ಬೆಳಿಗ್ಗೆ ದೇವರು ಹೇಗೋ ಒಂದು ವ್ಯವಸ್ಥೆ ಮಾಡಿಕೊಟ್ಟ. ಆಮೇಲೆ ಮತ್ತೆ ಒಂದು ಪ್ಯಾಕೆಟ್ ಅಕ್ಕಿ ತಗೊಂಡು ಹೋದೆ. ಆ ಒಂದು ದಿನದ ಕ್ಷಣ ನೆನಪಿಸಿಕೊಂಡರೆ ಈಗಲೂ ನೋವಾಗುತ್ತೆ. ‘ಅಕ್ಕಿ ತರೋಕೂ ದುಡ್ಡಿಲ್ಲ ಕಣೋ ನನ್ನ ಹತ್ರ. ನಾನು ಹೇಗೆ ಹೇಳಲಿ ನನ್ನ ಹೆಂಡತಿಗೆ, ನನ್ನ ಮಗನಿಗೆ?’ ಅಂತ ಮನಸ್ಸಿಗೆ ತುಂಬಾ ನೋವಾಗುತ್ತೆ.”ಎಂದು ಬಿಎಂಟಿಸಿ ಚಾಲಕ ಕೃಷ್ಣಮೂರ್ತಿ ತಮ್ಮ ಜೀವನದ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

Read More
Next Story