x

SIR ಒತ್ತಡ? ವಿವಿಧ ಪ್ರಕರಣ ಐದನೇ ಬಿಎಲ್‌ಒ ಬಲಿ, ಕಾವೇರಿದ ಕದನ : ಡಿಕೆಶಿ ಸಂಧಾನಕ್ಕೆ ವಿಜಯ್ ಒಲವು, 29ನೇ ಬೆಂಗಳೂರು ಟೆಕ್ ಸಮ್ಮಿಟ್‌ಗೆ ವೇದಿಕೆ ಸಿದ್ಧ

ಸಾವಿನ ದವಡೆಗೆ ನೂಕುತ್ತಿದೆಯೇ ಮೇಲಾಧಿಕಾರಿಗಳ ಒತ್ತಡ? , ಕರ್ನಾಟಕ ಆಹ್ವಾನಕ್ಕೆ ತಮಿಳುನಾಡು ಸಹಮತ, ನ.17-19ರವರೆಗೆ ಟೆಕ್ ಮಹೋತ್ಸವಕ್ಕೆ ಬೆಂಗಳೂರು ಸಜ್ಜು


Click the Play button to hear this message in audio format

ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿರುವ ಬಿಎಲ್‌ಒಗಳ ಸಾವು ಆತಂಕಕಾರಿಯಾಗಿದೆ. ಕೆಲಸದ ಒತ್ತಡ ಮತ್ತು ಕರ್ತವ್ಯದ ಸಮಯದಲ್ಲಿ ಮೃತಪಟ್ಟಿರುವ ಘಟನೆಗಳು ರಾಜ್ಯವ್ಯಾಪಿ ಸಂಚಲನ ಮೂಡಿಸಿವೆ. ಆಡಳಿತ ವ್ಯವಸ್ಥೆಯ ಅತ್ಯಂತ ಕೆಳಹಂತದ ನೌಕರರಾದ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಸರ್ಕಾರದ ಮಹತ್ವದ ಯೋಜನೆಗಳ ಜಾರಿಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಎಸ್‌ಐಆರ್‌ಪ್ರಕ್ರಿಯೆ ನೌಕರರ ಪಾಲಿಗೆ ಒಂದು 'ಮೃತ್ಯುಪಾಶ'ವಾಗಿ ಪರಿಣಮಿಸಿದೆಯೇ ಎಂಬ ಅನುಮಾನ ಮೂಡಿದೆ. ಕಳೆದ ಕೆಲವು ದಿನಗಳಲ್ಲಿ ನಡೆದ ಸರಣಿ ಸಾವುಗಳು, ಆಡಳಿತ ಯಂತ್ರವು ತನ್ನ ನೌಕರರ ಜೀವದ ಮೌಲ್ಯವನ್ನು ಮರೆತಿದೆಯೇ ಎಂಬ ಪ್ರಶ್ನೆಯನ್ನು ಸಾರ್ವಜನಿಕ ವಲಯದಲ್ಲಿ ಎತ್ತಿದೆ.

ಎಸ್‌ಐಆರ್‌ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಿರತರಾಗಿದ್ದ ಬಿಎಲ್‌ಒರೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕುರುಬರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದ ಶಮಂತಾಕುಮಾರಿ (44) ಮೃತಪಟ್ಟವರಾಗಿದ್ದಾರೆ. ಇತ್ತೀಚೆಗಷ್ಟೇ ಇವರನ್ನು ಎಸ್‌ಐಆರ್‌ ಪ್ರಕ್ರಿಯೆಯ ಬಿಎಲ್‌ಒ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಇಂತಹ ಘಟನೆ ಇದೇ ಮೊದಲಲ್ಲ. ಈ ಹಿಂದೆ ಶಿವಮೊಗ್ಗ, ಗದಗ, ತುಮಕೂರಿನಲ್ಲಿಯೂ ಇಂತಹ ನಡೆದಿದೆ. ಬಿಎಲ್‌ಒಗಳ ಸಾವಿಗೆ ಮೇಲಾಧಿಕಾರಿಗಳ ಒತ್ತಡವೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಶಮಂತಾಕುಮಾರಿ ಸಾವು ಮೇಲಾಧಿಕಾರಿಗಳಿಂದ ಕೆಲಸದ ಒತ್ತಡ ಅತಿಯಾಗಿರುವುದೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನಿಗದಿತ ಸಮಯದೊಳಗೆ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ಸಲ್ಲಿಸಬೇಕೆಂಬ ಆದೇಶವು ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು ಎಂದು ದೂರಿದ್ದಾರೆ. ಈ ನಡುವೆ, ತಮಗೆ ಕೆಲಸದ ಒತ್ತಡ ಹೆಚ್ಚಾಗಿದೆ, ನನ್ನನ್ನು ಈ ಕೆಲಸದಿಂದ ಮುಕ್ತಗೊಳಿಸಿ ಎಂದು ತಮ್ಮ ಕುಟುಂಬಸ್ಥರಲ್ಲಿ ಶಮಂತಾಕುಮಾರಿ ನೋವು ತೋಡುಕೊಂಡಿದ್ದರು ಎಂದು ಹೇಳಲಾಗಿದೆ. ಅವರ ದೇಹದ ಮೇಲೆ ಒತ್ತಡದ ಪರಿಣಾಮವಾಗಿ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯ ಮಟ್ಟ ಏರಿಕೆಯಾಗಿ, ತೀವ್ರ ಜ್ವರ ಕಾಣಿಸಿಕೊಂಡಿತು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ಕಾವೇರಿ ನೀರು ಹಂಚಿಕೆ ಕುರಿತು ಚರ್ಚೆ

ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನದಿ ನೀರಿನ ಹಂಚಿಕೆಯ ವಿವಾದವು ದಶಕಗಳ ಇತಿಹಾಸವನ್ನು ಹೊಂದಿದೆ. ಎರಡೂ ರಾಜ್ಯಗಳು ಕಾವೇರಿ ನದಿಯ ಮೇಲೆ ಅವಲಂಬಿತವಾಗಿದ್ದು, ನೀರು ಹಂಚಿಕೆ ಸಂಬಂಧ ಸಂಧಾನ ಮೂಲಕ ಬಗೆಹರಿಯುವ ಆಶಾಭಾವನೆ ಮೂಡಿದೆ. ಸಂಘರ್ಷದ ಬದಲು ಸಂವಾದದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರವು ತಮಿಳುನಾಡಿಗೆ ಆಹ್ವಾನ ನೀಡಿದೆ. ಇದಕ್ಕೆ ತಮಿಳುನಾಡಿನಿಂದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಭೇಟಿ ಮಾಡಲು ಮುಖ್ಯಮಂತ್ರಿ ಜೋಸೆಫ್​ ವಿಜಯ್​ ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಆಗಸ್ಟ್​ 3ರಂದು ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಭೇಟಿಯಾಗುವ ಸಂಬಂಧ ದಿನಾಂಕ ನಿಗದಿಗೊಳಿಸಲಾಗಿದೆ.

ರಾಜ್ಯದಲ್ಲಿನ ಭೀಕರ ಬರಗಾಲ, ಜಲಾಶಯಗಳ ನೀರಿನ ಮಟ್ಟ ಕುಸಿತ ಮತ್ತು ಕೃಷಿಕರ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ. ಇತ್ತೀಚೆಗೆ ಕಾವೇರಿ ನೀರು ನಿರ್ವಹಣಾ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಿದೆ. ಎರಡು ಸಭೆಗಳಲ್ಲಿಯೂ ನೀರು ಬಿಡುವ ಕುರಿತು ಯಾವುದೇ ಸೂಚನೆ ನೀಡಿಲ್ಲ. ಇದು ರಾಜ್ಯದ ಪಾಲಿಗೆ ಸದ್ಯಕ್ಕೆ ಸಮಾಧಾನ ತಂದಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ತಕ್ಷಣ ನೀರು ಬಿಡದಂತೆ ಸೂಚನೆ ನೀಡಲಾಗಿದೆ. ಅಲ್ಲದೇ, ಕಾವೇರಿ ನೀರನ್ನು ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಬೇಕೇ ಹೊರತು ಅನ್ಯ ಕಾರಣಗಳಿಗಾಗಿ ಬಳಕೆ ಮಾಡುವಂತೆ ಸೂಚನೆ ನೀಡಿದೆ. ಜುಲೈ 26ರ ನಂತರದ ಮಳೆಯ ಸ್ಥಿತಿಗತಿ ಮತ್ತು ಜುಲೈ 28ರಂದು ನಡೆಯಲಿರುವ ದೆಹಲಿ ಸಭೆಯು ಕಾವೇರಿ ಕೊಳ್ಳದ ಮುಂದಿನ ಹಂತದ ನೀರಿನ ಹಂಚಿಕೆಯನ್ನು ನಿರ್ಧರಿಸಲಿದೆ.

ನ.17-19ರವರೆಗೆ ಬೆಂಗಳೂರು ಟೆಕ್‌

ವಿಶ್ವದ ತಂತ್ರಜ್ಞಾನ ನಕ್ಷೆಯಲ್ಲಿ ಬೆಂಗಳೂರು ಈಗಾಗಲೇ ತನ್ನದೇ ಆದ ಛಾಪು ಮೂಡಿಸಿದೆ. ಇದೀಗ ತನ್ನ ಕಿರೀಟಕ್ಕೆ ಮತ್ತೊಂದು ಗರಿ ಎಂಬಂತೆ, ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಉತ್ಸವವಾಗಿರುವ 'ಬೆಂಗಳೂರು ತಂತ್ರಜ್ಞಾನ ಶೃಂಗಸಭೆ'ಯ (Bengaluru Tech Summit) 29ನೇ ಆವೃತ್ತಿಗೆ ವೇದಿಕೆ ಸಿದ್ಧವಾಗಿದೆ. ನವೆಂಬರ್ 17ರಿಂದ 19ರವರೆಗೆ ಬೆಂಗಳೂರಿನ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಭವಿಷ್ಯದ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ಜಾಗತಿಕ ಕೇಂದ್ರವಾಗಲಿದೆ.

ಈ ಬಾರಿಯ ಶೃಂಗಸಭೆಯು 'ಕೃತಕ ಬುದ್ಧಿಮತ್ತೆ ಹಾಗೂ ಅದರಾಚೆಗೆ' ಎಂಬ ಧ್ಯೇಯವಾಕ್ಯವನ್ನು ಹೊಂದಿದೆ. ಕೇವಲ ಎಐ ತಂತ್ರಜ್ಞಾನಕ್ಕೆ ಸೀಮಿತವಾಗದೆ, ಅದರ ಆಚೆಗಿನ ಸಾಧ್ಯತೆಗಳಾದ ಡೀಪ್‌ಟೆಕ್, ಸೆಮಿಕಂಡಕ್ಟರ್‌ಗಳು, ಬಾಹ್ಯಾಕಾಶ ವಿಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಎವಿಜಿಸಿ ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲುವುದು ಇದರ ಉದ್ದೇಶವಾಗಿದೆ. ಇದು ಕೇವಲ ಒಂದು ಸಮ್ಮೇಳನವಲ್ಲ, ಬದಲಿಗೆ ಜಾಗತಿಕ ಹೂಡಿಕೆದಾರರು, ವಿಜ್ಞಾನಿಗಳು, ಸಂಶೋಧಕರು ಮತ್ತು ಉದ್ಯಮಿಗಳು ಒಂದೆಡೆ ಸೇರಿ ಭವಿಷ್ಯದ ನೀಲನಕ್ಷೆಯನ್ನು ರೂಪಿಸುವ ವೇದಿಕೆಯಾಗಿದೆ.

ಈ ಶೃಂಗಸಭೆಯು ಅಭೂತಪೂರ್ವ ಯಶಸ್ಸಿನ ನಿರೀಕ್ಷೆಯಲ್ಲಿದೆ. 75ಕ್ಕೂ ಹೆಚ್ಚು ದೇಶಗಳು ಮತ್ತು ಭಾರತದ 30ಕ್ಕೂ ಹೆಚ್ಚು ರಾಜ್ಯಗಳಿಂದ ಸಾವಿರಾರು ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಸುಮಾರು 60 ಸಾವಿರಕ್ಕೂ ಹೆಚ್ಚು ಉದ್ಯಮ ಸಂದರ್ಶಕರು, 1 ಸಾವಿರಕ್ಕೂ ಹೆಚ್ಚು ನವೋದ್ಯಮಗಳು ಮತ್ತು 1,800ಕ್ಕೂ ಹೆಚ್ಚು ಪ್ರದರ್ಶಕರು ಇಲ್ಲಿ ತಮ್ಮ ಕೌಶಲ್ಯ ಮತ್ತು ಉತ್ಪನ್ನಗಳನ್ನು ಅನಾವರಣಗೊಳಿಸಲಿದ್ದಾರೆ. ಇದು ಕರ್ನಾಟಕದ ತಂತ್ರಜ್ಞಾನ ಸಾಮರ್ಥ್ಯವನ್ನು ಜಗತ್ತಿಗೆ ಸಾರಲು ದೊರೆತ ಅತಿದೊಡ್ಡ ಅವಕಾಶವಾಗಿದೆ. ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ಪ್ರಯುಕ್ತ ಇವತ್ತು ಬೆಂಗಳೂರಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಐಟಿ-ಬಿಟಿ ಸಚಿವ ಪ್ರಿಯಾಂಕ್‌ಖರ್ಗೆ ಐಟಿ ಉದ್ಯಮಿಗಳ ಜತೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಐಟಿ ಕಂಪನಿಗಳ 250ಕ್ಕೂ ಹೆಚ್ಚು ಸಿಇಒಗಳು ಭಾಗವಹಿಸಿದ್ದರು.

Read More
Next Story